ಗೃಹ ನಿರ್ಮಾಣ ಸಂಘ ರಚಿಸಿಕೊಳ್ಳಿ
Team Udayavani, Nov 10, 2020, 5:04 PM IST
ಕೋಲಾರ: ಡಿಸಿಸಿ ಬ್ಯಾಂಕ್ ನೌಕರರು ಗೃಹ ನಿರ್ಮಾಣ ಸಹಕಾರ ಸಂಘ ರಚಿಸಿಕೊಂಡು ಲೇಔಟ್ ನಿರ್ಮಿಸಿಕೊಳ್ಳಲು ಪ್ರಯತ್ನಿಸಿದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ನೌಕರರ ಸಹಕಾರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಇತ್ತೀಚೆಗೆನಿಧನರಾದ ನೌಕರ ಎಳಚಪ್ಪ ಅವರ ಸೇವೆ ಗುರುತಿಸಿ ಅವರ ಪತ್ನಿ ರಾಧಮ್ಮರನ್ನು ಸನ್ಮಾನಿಸಿ, ಆರ್ಥಿಕ ನೆರವು ವಿತರಿಸಿ ಅವರು ಮಾತನಾಡಿದರು.
ಬ್ಯಾಂಕ್‌ನ ಒಳಿತಿಗೆ ಶ್ರಮಿಸಿ: ಡಿಸಿಸಿ ಬ್ಯಾಂಕ್ ಉಳಿಸುವ ಸಂಕಲ್ಪದೊಂದಿಗೆ ಕೆಲಸ ಮಾಡಿ, ಬ್ಯಾಂಕ್‌ನ ಲಾಭಾಂಶದಲ್ಲಿ ಸ್ವಲ್ಪ ಹಣ ಕಾನೂನಿನನ್ವಯ ಅವಕಾಶವಿದ್ದಲ್ಲಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆನೀಡುವುದಾಗಿ ತಿಳಿಸಿದರು. ಡಿಸಿಸಿ ಬ್ಯಾಂಕನ್ನು ದೇಶದಲ್ಲೇ ನಂ.1 ಮಾಡೋದೇ ಗುರಿಯಾಗಿರಲಿ, ಬ್ಯಾಂಕ್‌ನ ಒಳಿತಿಗೆ ನೀವುಶ್ರಮಿಸಿ ಬಂದ ಲಾಭ ನಿಮ್ಮ ಒಳಿತಿಗೆ ಬಳಸೋಣ ಎಂದು ತಿಳಿಸಿದರು.
ಶ್ರದ್ಧೆ ಇಲ್ಲ: ಡಿಸಿಸಿ ಬ್ಯಾಂಕ್ ದಿವಾಳಿಯಾಗಿತ್ತು, ಅದನ್ನು ಎನ್‌ಪಿಎ 2.5ಕ್ಕಿಳಿಸಿ ಲಾಭದತ್ತ ಕೊಂಡೊಯ್ಯಲು ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿಯ ಶ್ರಮವೂ ಇದೆ. ಆದರೆ ಕೆಲವುನೌಕರರಲ್ಲಿ ಇನ್ನೂ ಬ್ಯಾಂಕ್ ಕರ್ತವ್ಯದ ಬಗ್ಗೆ ಶ್ರದ್ಧೆ ಬಂದಂತಿಲ್ಲ ಎಂದರು.
ನಿಮಗೆ ಕೇಳಿದ್ದು ನೀಡಿದ್ದೇವೆ, ವೇತನ ಹೆಚ್ಚಳ, ಬೋನಸ್, ವೈದ್ಯಕೀಯ ವಿಮೆ ಎಲ್ಲವೂ ಸಿಕ್ಕಿದೆ. ಇಷ್ಟರ ನಡುವೆಯೂ ನಿಮ್ಮಲ್ಲಿ ಬದಲಾವಣೆ ಬಾರದಿದ್ದರೆ ಹೇಗೆ ಎಂದು ಪ್ರಶ್ನಿಸಿ, ಬ್ಯಾಂಕ್ ನಿಮ್ಮದೇ ಎಂಬ ಭಾವನೆ ಇರಲಿ ಎಂದರು. ಠೇವಣಿ ಸಂಗ್ರಹ ಗುರಿ ಸಾಧನೆ ಮೂಲಕ ಬ್ಯಾಂಕ್‌ನ್ನು ಬೆಳೆಸಿ ನಿಮಗೆ ಬಡ್ಡಿರಹಿತ ಮನೆ ಸಾಲ ನೀಡಲು ಆಲೋಚನೆ ಮಾಡುವುದಾಗಿಭರವಸೆ ನೀಡಿದ ಅವರು, ಸಹಕಾರ ಸಂಘಕ್ಕೆ ಮತ್ತಷ್ಟು ನೆರವು ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಡಿಸಿಸಿ ಬ್ಯಾಂಕ್ ನೌಕರ ಎಳಚಪ್ಪ ಅವರ ಪತ್ನಿ ರಾಧಮ್ಮ ಅವರನ್ನು ಸನ್ಮಾನಿಸಿ, ಆರ್ಥಿಕ ನೆರವು ನೀಡಲಾಯಿತು. ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಎಜಿಎಂಗಳಾದ ಭೈರೇಗೌಡ, ಶಿವಕುಮಾರ್, ನಾಗೇಶ್, ಚೌಡಪ್ಪ, ಸಂಘದ ಕಾರ್ಯದರ್ಶಿ ಖಲೀಮುಲ್ಲಾ, ನಿರ್ದೇಶಕರಾದ ಎ.ವಿ.ಶ್ರೀನಿವಾಸ್, ಸಾದಪ್ಪ, ರಾಮಕೃಷ್ಣಾರೆಡ್ಡಿ, ವನಿತಾ ಕುಮಾರಿ, ದಶರಥನ್, ಕೃಷ್ಣಪ್ಪ, ಲಿಂಗರಾಜ್, ಪ್ರಸಾದ್, ಕೆ.ಬಿ.ವೆಂಕಟೇಶ್, ಜನಾರ್ದನ್, ವೆಂಕಟಮುನಿ ಮತ್ತಿತರರು ಉಪಸ್ಥಿತರಿದ್ದರು.
ಡಿಸಿಸಿ ಬ್ಯಾಂಕ್ ನೌಕರರ ಸಹಕಾರ ಸಂಘಕ್ಕೆ ನೀಡುವ ಸಾಲಕ್ಕೆಹಾಕುತ್ತಿರುವ 9.5 ಶೇಬಡ್ಡಿ ಕಡಿಮೆ ಮಾಡುವಂತೆಕೋರಿದ್ದೀರಿ, ಈ ಸಂಬಂಧಆಡಳಿತ ಮಂಡಳಿ ಸಭೆಯಲ್ಲಿಚರ್ಚಿಸಿ ನಿರ್ಧಾರ ಕೈಗೊಳ್ಳುವೆ. –ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.