1500 ಕೋಟಿ ರೂ.ಬೆಳೆ ಸಾಲಕ್ಕೆ ಬೇಡಿಕೆ
Team Udayavani, Jan 23, 2022, 2:29 PM IST
ಕೋಲಾರ: ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಕಷ್ಟಕಾಲದಲ್ಲಿ ಅವಿಭಜಿತ ಜಿಲ್ಲೆಯ ರೈತರ 1500 ಕೋಟಿ ರೂ. ಬೆಳೆಸಾಲದ ಬೇಡಿಕೆ ಈಡೇರಿಸುವ ಶಕ್ತಿ ತುಂಬುವಂತೆ ಸಾರ್ವಜನಿಕರಲ್ಲಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು.
ನಗರದ ಬ್ಯಾಂಕಿನ ಸಭಾಂಗಣದಲ್ಲಿ ಶನಿವಾರಡಿಸಿಸಿ ಬ್ಯಾಂಕಿನ ಠೇವಣಿ ಸಂಗ್ರಹದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎರಡೂ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾಗಿದೆ,ಕೆರೆಗಳು ತುಂಬಿದ್ದು, ಬೆಳೆ ಇಡುವ ತವಕದಲ್ಲಿ ರೈತರಿದ್ದಾರೆ ಎಂದು ಹೇಳಿದರು.
ರೈತರಿಗೆ ಕಷ್ಟಕಾಲದಲ್ಲಿ ನೆರವಾಗುವ ಅಗತ್ಯವಿದೆ,ಉತ್ತಮ ಮಳೆ, ಕೆರೆಗಳ ಭರ್ತಿಯಿಂದ ಅಂತರ್ಜಲವೃದ್ಧಿಯಾಗಿ ಕೊಳವೆ ಬಾವಿಗಳಲ್ಲೂ ನೀರು ಬಂದಿದೆ. ಇಂತಹ ಸಂದರ್ಭದಲ್ಲಿ ರೈತರು ಬೆಳೆಯಿಡಲು ಖಾಸಗಿಲೇವಾದೇವಿದಾರರ ಶೋಷಣೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ತಿಳಿಸಿದರು.
3.16 ಕೋಟಿ ರೂ. ಠೇವಣಿ: ನಮ್ಮ ಜಿಲ್ಲೆಯವರಲ್ಲದಿದ್ದರೂ, ಕೋಲಾರ ಡಿಸಿಸಿ ಬ್ಯಾಂಕ್ ಮಹಿಳೆಯರಿಗೆ ಹಾಗೂ ರೈತರಿಗೆ ನೆರವಾಗುತ್ತಿರುವುದನ್ನು ಕಂಡು ಹೊಸಕೋಟೆಯ ವ್ಯಕ್ತಿಯೊಬ್ಬರು 3.16ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಹೆದ್ದಾರಿ ಅಗಲೀಕರಣದಿಂದಾದ ಭೂಸ್ವಾ ಧೀನಕ್ಕೆ ಸಿಕ್ಕ ಪರಿಹಾರದಹಣವನ್ನು ತಮ್ಮ ಡಿಸಿಸಿ ಬ್ಯಾಂಕ್ ಮೇಲಿನ ನಂಬಿಕೆ,ಧೈರ್ಯದಿಂದ ಠೇವಣಿ ಇಡಲು ಮುಂದೆ ಬಂದಿದ್ದು,ಜಿಲ್ಲೆಯಲ್ಲಿನ ಠೇವಣಿ ದಾರರಿಗೆ ಆದರ್ಶವಾಗಿದ್ದಾರೆ ಎಂದು ಹೇಳಿದರು.
ಉಳ್ಳುವರು ಮುಂದೆ ಬರಲಿ: ಇಂತಹ ಇಚ್ಛಾಶಕ್ತಿ ಜಿಲ್ಲೆಯಲ್ಲಿನ ಉಳ್ಳವರಿಗೆ ಬರಬೇಕು, ನಾವು ಉಳಿತಾಯ ಮಾಡುವ ಹಣಕ್ಕೆ ಬಡ್ಡಿ ಬರುವುದು ಮಾತ್ರವಲ್ಲ, ಮತ್ತಷ್ಟು ರೈತರ ಬದುಕು ಹಸನಾಗಲು ಕಾರಣವಾಗುತ್ತದೆ ಎಂಬ ಸತ್ಯ ಅರಿತು ಡಿಸಿಸಿ ಬ್ಯಾಂಕಿನಲ್ಲಿಠೇವಣಿ ಇಡಲು ಮುಂದೆ ಬರಬೇಕು ಎಂದರು. ಡಿಸಿಸಿ ಬ್ಯಾಂಕಿನಲ್ಲಿ ಇಡುವ ಠೇವಣಿಗೆ ಇತರೆಲ್ಲಾ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ನೀಡಲಾಗುತ್ತದೆಮತ್ತು ನಿಮ್ಮ ಹಣದಿಂದ ರೈತರು, ಮಹಿಳೆಯರ ಆರ್ಥಿಕಾಭಿವೃದ್ಧಿಗೆ ನೆರವು ಒದಗಿಸುವ ಕೆಲಸ ಆಗುವುದರಿಂದ ಸಾರ್ಥಕತೆ ಇದೆ ಎಂದು ಹೇಳಿದರು.
ರೈತರಿಗೆ ನೆರವಾಗಿ: ನಿಮ್ಮ ಹಣಕ್ಕೆ ಸುರಕ್ಷತೆಯ ಖಾತರಿ ನೀಡಲಾಗುತ್ತದೆ. ಸಮಾಜದ ಪ್ರತಿಯೊಬ್ಬರೂ ಡಿಸಿಸಿಬ್ಯಾಂಕಿನಲ್ಲೇ ಠೇವಣಿ ಇಡುವ ಮೂಲಕ ರೈತರಿಗೆನೆರವಾಗಿ, ದಶಕದ ಹಿಂದೆ ಬ್ಯಾಂಕ್ ಸಂಕಷ್ಟಕ್ಕೆಸಿಲುಕಿತ್ತು ಎಂಬ ಒಂದೇ ಆರೋಪ ಬೇಡ, ನಮ್ಮಆಡಳಿತ ಮಂಡಳಿ ಬಂದ ನಂತರ ಈಗ ಇತರೆಲ್ಲಾವಾಣಿಜ್ಯ ಬ್ಯಾಂಕುಗಳಿಗಿಂತಲೂ ಡಿಸಿಸಿ ಬ್ಯಾಂಕ್ ಸದೃಢವಾಗಿದೆ ಎಂದು ವಿವರಸಿದರು.
ಸರ್ಕಾರದಿಂದ ಹಣ ಬರಲ್ಲ: ಸರ್ಕಾರದಿಂದ ಡಿಸಿಸಿ ಬ್ಯಾಂಕಿಗೆ ಹಣ ಬರುತ್ತದೆ ಎಂಬ ಕಲ್ಪನೆ ತಲೆಯಲ್ಲಿದ್ದರೆತೆಗೆದುಹಾಕಿ, ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದಸಾಲ ವಿತರಿಸಲು ನಯಾಪೈಸೆ ಹಣ ಬರುವುದಿಲ್ಲಎಂದು ಸ್ಪಷ್ಟಪಡಿಸಿದ ಅವರು, ನಮ್ಮ ಠೇವಣಿಸಂಗ್ರಹದ ಆಧಾರದ ಮೇಲೆ ನಮಗೆ ನಬಾರ್ಡ್,ಅಪೆಕ್ಸ್ ಬ್ಯಾಂಕ್ ಸಾಲ ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಠೇವಣಿ ಸಂಗ್ರಹದ ಗುರಿಸಾಧನೆ ಮಾಡುವಂತೆ ಅವಿಭಜಿತ ಜಿಲ್ಲೆಯ ಎಲ್ಲಾಡಿಸಿಸಿ ಬ್ಯಾಂಕ್ ಶಾಖೆಗಳ ಸಿಬ್ಬಂದಿ ಅಧಿಕಾರಿಗಳಿಗೆತಾಕೀತು ಮಾಡಿದ ಅವರು, ಇದು ಜನರ ಬ್ಯಾಂಕ್‌ಎಂಬ ಭಾವನೆ ಬಲಗೊಳಿಸಿ, ಜನರ ಮನವೊಲಿಸಿ ಠೇವಣಿ ಹೆಚ್ಚಿಸಿ ಎಂದು ವಿವರಿಸಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್, ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ನಾಗೇಶ್, ದೊಡ್ಡಮನಿ, ಯಲ್ಲಪ್ಪರೆಡ್ಡಿ,ಬೇಬಿ ಶ್ಯಾಮಿಲಿ, ಅಮ್ಜದ್‌ಖಾನ್, ಅರುಣ್ ಕುಮಾರ್, ತಿಮ್ಮಯ್ಯ ಭಾನುಪ್ರಕಾಶ್, ಶುಭಾ,ಪದ್ಮಮ್ಮ, ಶೃತಿ, ವಿ-ಸಾಫ್ಟ್‌ನ ವಿಶ್ವಪ್ರಸಾದ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.