ಕಟ್ಟಡ ತೆರವುಗೊಳಿಸುವಲ್ಲಿ ತಾರತಮ್ಯ
Team Udayavani, Feb 8, 2021, 3:25 PM IST
ಕೋಲಾರ: ಮೆಕ್ಕೆ ಸರ್ಕಲ್‌ನಿಂದ ಬಂಗಾರಪೇಟೆ ಸರ್ಕಲ್ ವರೆಗೆ ನಡೆಯುತ್ತಿರುವ ರಸ್ತೆ ಅಗಲೀಕರಣದಲ್ಲಿ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಎಂಬಂತೆ ನಗರ ಸಭೆ, ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ ನಡೆದು ಕೊಂಡಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಮರಸೇನೆ ವತಿಯಿಂದ ರಾಜ್ಯಾಧ್ಯಕ್ಷ ಸೋಮಣ್ಣ ನೇತೃತ್ವದಲ್ಲಿ ಹೋರಾಟ ನಡೆಯಿತು.
ರಸ್ತೆ ಅಗಲೀಕರಣ ಸಂದರ್ಭದಲ್ಲಿ ಪಂಚವಟಿ ಹೋಟೆಲ್, ಕರ್ನಾಟಕ ಬ್ಯಾಂಕ್, ಗೌರವ್ ಹಾಸ್ಪಿಟಲ್‌ನ ಕಟ್ಟಡಗಳನ್ನು ತೆರವು ಗೊಳಿಸದೇ ತಾರತಮ್ಯ ಮಾಡಿರುವುದನ್ನು ಖಂಡಿಸಿ ಈಗಾಗಲೇ ಕರವೇ ಸಮರಸೇನೆ ಸೋಮಣ್ಣ ನೇತೃತ್ವದಲ್ಲಿ ಹೋರಾಟ ಮಾಡಿದ್ದರೂ ಸಹ ಜಿಲ್ಲಾಡಳಿತ ಕ್ರಮ ಕೈಗೊಳ್ಳದೇ ತಾರತಮ್ಯ ಮಾಡಿದೆ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಯಾವುದೇ ಮಾತನ್ನು ಹೇಳದೇ ಸಂಘಟನೆ ರಾಜ್ಯಾಧ್ಯಕ್ಷರ ಮೇಲೆ ಇಲ್ಲಿಂದ ಜಾಗ ಖಾಲಿ ಮಾಡಿ, ಇಲ್ಲಾಂದ್ರೆ ಚೆನ್ನಾಗಿರಲ್ಲ ಎಂದು ದೌರ್ಜನ್ಯವೆಸಗಿರುತ್ತಾರೆ ಎಂದು ಆರೋಪಿಸಿದರು.
ಇದನ್ನೂ ಓದಿ :ಗ್ರಾಪಂ ನೂತನ ಅಧ್ಯಕ್ಷೆ ಮನೆಗೆ ಬೆಂಕಿ
ಚಂದ್ರಶೇಖರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ರಸ್ತೆ ಅಗಲೀಕರಣದಲ್ಲಿ ನಡೆಯುತ್ತಿರುವ ತಾರತಮ್ಯದ ಬಗ್ಗೆ ನಮಗೆ ಸಂಶಯವಿದ್ದು, ತನಿಖೆಗೆ ಒಳಪಡಿಸಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ. ನಿಯೋಗದಲ್ಲಿ ರಾಜ್ಯಾಧ್ಯಕ್ಷ ಕರವೇ ಸೋಮಣ್ಣ, ಸಂಘ ಟನೆಯ ಪದಾಧಿಕಾರಿಗಳಾದ ಅನಿಲ್, ನರಸಿಂಹ ಮೂರ್ತಿ, ತ್ರಿಭುವನ್, ವಿಜಯಕುಮಾರ್, ರವಿಕುಮಾರ್ ಜಿ.ಎಂ, ಜಯರಾಮ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.