ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ
Team Udayavani, Dec 12, 2019, 4:13 PM IST
ಮುಳಬಾಗಿಲು: ನೋಂದಣಿ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ, ದಲ್ಲಾಳಿಗಳಿಗೆ ಕಡಿವಾಣ, ಅಕ್ರಮಗಳಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ನೋಂದಣಿ ಇಲಾಖೆ ಎದುರು ಪ್ರತಿಭಟನೆ ನಡೆಸಿ, ಉಪ ನೋಂದಣಾಧಿಕಾರಿ ಬೈರಾರೆಡ್ಡಿಗೆ ಮನವಿ ಸಲ್ಲಿಸಿದರು.
ದಲ್ಲಾಳಿಗಳಿಂದ ನೋಂದಣಿ ಕಚೇರಿ ರಕ್ಷಿಸಿ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಸರ್ಕಾರಿ ಗೋಮಾಳ ಗುಂಡು, ತೋಪು, ಕೆರೆ ಹಾಗೂ ಪಿ ನಂಬರ್ ಹೊಂದಿರುವ ಜಮೀನು ಮತ್ತು ಸರ್ಕಾರದಿಂದ ಮಂಜೂರಾಗಿರುವ 50, 53, 57 ನಮೂನೆ ಜಮೀನುಗಳನ್ನು 15 ವರ್ಷ ಮಾರಾಟ ಹಾಗೂ ನೋಂದಣಿ ಮಾಡ ಬಾರದು ಎಂದು ಸರ್ಕಾರದ ಆದೇಶವಿದೆ. ಆದರೆ ನೋಂದಣಿ ಕಚೇರಿಯಲ್ಲಿ ಅಧಿಕಾರಿಗಳು ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಜತೆಗೆ ಕಾರ್ಪೋರೇಟ್ ಹಾಗೂ ರಿಯಲ್ ಎಸ್ಟೇಟ್ ದಂಧೆಕೋರರು, ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ವ್ಯಾಪಕ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದರಿಂದ ಬಡವರು, ಒಂದು ಗುಂಟೆ ಜಮೀನು ನೋಂದಣಿ ಮಾಡಿಸಬೇಕಾದರೆ, ನೂರೆಂಟು ಕಾನೂನು ಹೇಳಿ ವಾಪಸ್ ಕಳುಹಿಸಿದ್ದಾರೆ. ಆದರೆ ಬಡವರು ದಲ್ಲಾಳಿಗಳ ಮೂಲಕ ಹಣ ಖರ್ಚು ಮಾಡಿಕೊಂಡು ಬಂದರೆ ಅಡೆ ತಡೆಯಿಲ್ಲದೇ ಕೆಲಸ ಮಾಡಿಕೊಡುತ್ತಾರೆ. ಈ ಮೂಲಕ ನೋಂದಣಿ ಇಲಾಖೆಯನ್ನು ಅಡವಿಟ್ಟಿದ್ದಾರೆ. ಇದರಿಂದ ಬಡವರು ತಮ್ಮ ಸಣ್ಣ ಕೆಲಸಗಳಿಗಾಗಿ ದಲ್ಲಾಳಿಗಳ ಹಿಂದೆ ತಿರುಗಬೇಕಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲು: ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಜಮೀನಿನ ಬೆಲೆಗೆ ತಕ್ಕಂತೆ ಸರ್ಕಾರಕ್ಕೆ ಶುಲ್ಕ ಪಾವತಿಸಬೇಕು. ಆದರೆ ಕೋಟಿ ರೂಪಾಯಿ ಬೆಲೆ ಬಾಳುವ ಜಮೀನಿಗೆ 10 ಲಕ್ಷ ಬೆಲೆ ತೋರಿಸಿ, 90 ಲಕ್ಷಕ್ಕೆ ಸರ್ಕಾರಕ್ಕೆ ಬರುವ ಆದಾಯವನ್ನು ಅಧಿಕಾರಿಗಳು ಮತ್ತು ದಲ್ಲಾಳಿಗಳು ಹಂಚುಕೊಳ್ಳುತ್ತಿದ್ದಾರೆ. ಅದರ ಜೊತೆಗೆ ನೋಂದಣಿಗೆ ಬರುವ ಜನ ಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳಿಲ್ಲ. ಜೊತೆಗೆ ಅಧಿಕಾರಿಗಳು, ಬಡವರ ಜಮೀನು ನೋಂದಣಿ ಮಾಡಬೇಕಾದರೆ ಸರ್ವರ್ ಸಮಸ್ಯೆ ಹಾಗೂ ನೂರೊಂದು ಸಮಸ್ಯೆ ಹೇಳುತ್ತಾರೆ. ಆದರೆ ದಲ್ಲಾಲಿಗಳು ಕಮೀಷನ್ ನೀಡಿದರೆ, ಅವರಿಗೆ ರಾಜ ಮರ್ಯಾದೆ ನೀಡುತ್ತಾರೆ. ಜತೆಗೆ ನೋಂದಣಿ ಮಾಡಿಕೊಡಲು ಸರ್ವರ್ ಸಮಸ್ಯೆ ಇರುವುದಿಲ್ಲವೆ? ಎಂದು ಪ್ರಶ್ನಿಸಿದರು.
ಬಾರಿಕೋಲು ಚಳವಳಿ ಎಚ್ಚರಿಕೆ: ಅಲ್ಲದೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಬೇಕು. ಕಚೇರಿಯನ್ನು ದಲ್ಲಾಳಿಗಳಿಂದ ಮುಕ್ತಗೊಳಿಸಬೇಕು ಹಾಗೂ ಬಡವರ ಮತ್ತು ಜನಸ್ನೇಹಿಯಾಗಿ ಪರಿವರ್ತಿಸಬೇಕು. ಇಲ್ಲವಾದರೆ ನೋಂದಣಿ ಇಲಾಖೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಬಾರಿಕೋಲು ಚಳವಳಿ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತಾಲೂಕು ಅಧ್ಯಕ್ಷ ಪಾರುಕ್ ಪಾಷ, ಯಲುವಹಳ್ಳಿ ಪ್ರಭಾಕರ್, ರಾಜೇಶ್‌ಕಲೆ, ವಿಜಯ್‌ಪಾಲ್, ಅಣ್ಣೆಹಳ್ಳಿ ನಾಗರಾಜ್, ವೆಂಕಟರವಣಪ್ಪ, ನವೀನ್, ಕೇಶವ, ಸಾಗರ್, ಸುಪ್ರಿಂ ಚಲ, ಜುಬೇರ್‌ಪಾಷ, ಸಾಗರ್, ವೇಣು, ನವೀನ್, ರಂಜಿತ್ ಸುಧಾಕರ್, ನಂಗಲಿ ಕಿಶೋರ್, ಶಿವ, ಮಂಗಸಂದ್ರ ವೆಂಕಟೇಶಪ್ಪ, ತೆರ್ನಹಳ್ಳಿ ಆಂಜಿನಪ್ಪ, ಸಹದೇವಣ್ಣ, ಮೀಸೆ ವೆಂಕಟೇಶಪ್ಪ, ಹೊಸಹಳ್ಳಿ ವೆಂಕಟೇಶ್, ಈಕಂಬಳ್ಳಿ ಮಂಜುನಾಥ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.