ಭೂ-ಕಬಳಿಕೆ ಆರೋಪ: ಕ್ರಮಕ್ಕೆ ಆಗ್ರಹ
Team Udayavani, Dec 22, 2020, 3:20 PM IST
ಬಂಗಾರಪೇಟೆ: ತಾಲೂಕಿನ ದೊಡ್ಡೂರು ಕರಪನಹಳ್ಳಿ ಗ್ರಾಪಂ ವ್ಯಾಪ್ತಿಯ ಪ್ಲಾಂಟೇಷನ್ ಬಳಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಮೂಲ ವಾರಸುದಾರರಾದ ಪದ್ಮ ಪ್ರಸನ್ನಕುಮಾರ್ ಅವರಿಗೆ ಕಂಗಾಂಡ್ಲಹಳ್ಳಿ ಮುನಿರತ್ನಂನಾಯ್ಡು ಹಾಗೂ ಇವರೊಂದಿಗಿರುವ ಮೂವರು ವಂಚನೆ ಮಾಡಿದ್ದು, ಇವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ರೈತ ಸೇನೆ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಹುಣಸನಹಳ್ಳಿ ವೆಂಕಟೇಶ್ ಮಾತನಾಡಿ, ಡಿ.ಕೆ.ಹಳ್ಳಿ ಗ್ರಾಪಂನ ಪ್ಲಾಂಟೇಷನ್‌ಗೆ ಸೇರಿದ ಮೂರು ಎಕರೆಜಮೀನಿನ ಮೂಲ ವಾರಸುದಾರರಾದ ಪದ್ಮ ಪ್ರಸನ್ನಕುಮಾರ್ ಅವರ ಹೆಸರನ್ನು ನಕಲಿಯಾಗಿ ಬಳಸಿ2013 ರಲ್ಲಿ ನಕಲಿ ಜಿಪಿಎ ಅಧಿಕಾರ ಪಡೆದಿರುವ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿ ಕೊಂಡು.ಚಾರ್ಲ್ಸ್‌ಎಂಬುವವರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು 2017ರಲ್ಲಿ ಜಾನ್ಸನ್ ಎಂಬುವವರಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. 2018ರಲ್ಲಿ ಜಾನ್ಸನ್, ಪ್ರಭಾವಿ ಮುಖಂಡ ಕಂಗಾಂಡ್ಲಹಳ್ಳಿ ಮುನಿರತ್ನಂನಾಯ್ಡುಅವರಮಗಭಾಸ್ಕರ್‌ಎಂಬುವವರಿಗೆ ಕ್ರಮ ಮಾಡಿಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಸುಳ್ಳು ದಾಖಲೆ ಸೃಷ್ಟಿ ಮಾಡಲು ಸಹಕರಿಸಿದ ಅಧಿಕಾರಿಗಳನ್ನು ವಜಾ ಮಾಡಿ, ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸೇನೆಯ ಗೌರವಾಧ್ಯಕ್ಷ ಎನ್.ಅಜಿತ್‌ಕುಮಾರ್, ಸೇಟ್ ಕಾಂಪೌಂಡ್ ಮಾರಿ, ದೇಶಿಹಳ್ಳಿ ಮಲ್ಲಿಕಾರ್ಜುನ್,ಸಕ್ಕನಹಳ್ಳಿ ಕುಪೇಂದ್ರ, ಅಂಬೇಡ್ಕರ್ ನವ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಟ್ರಕುಪ್ಪ ಅರುಣ್, ಬ್ಯಾಡಬೆಲೆಅಂಬರೀಶ್, ಸೇಟ್ ಕಾಂಪೌಂಡ್ ಅಜಯ್, ಅರವಿಂದ, ಗಣೇಶ್ ಮುಂತಾದವರು ಹಾಜರಿದ್ದರು.
ಕಾರ್ಖಾನೆ ಪುನಶ್ಚೇತನ ಪ್ರಯತ್ನ :
ಕೆಜಿಎಫ್: ಕೆಜಿಎಫ್ ಭಾರತ್ ಗೋಲ್ಡ್ ಮೈನ್ಸ್ ಯುನೈಟೆಡ್ ಎಂಪ್ಲಾಯಿಸ್ ಇಂಡಸ್ಟ್ರಿಯಲ್ ಸಹಕಾರ ಸಂಘನಿಯಮಿತ 2019-20ನೇ ಸಾಲಿನ 22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಅನ್ಬಳಗನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಜ್ಯೋತಿ ಬೆಳಗುವುದರ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಚಿನ್ನದ ಗಣಿಗಳ ಪುನಶ್ಚೇತನಕ್ಕೆ ಹಾಗೂ ಗಣಿ ಕಾರ್ಮಿಕರ ವಸತಿ ಗೃಹಗಳನ್ನು ಅವರುಗಳಿಗೆ ಸ್ವಂತ ಮಾಡಿಕೊಡುವಂತೆ ಒತ್ತಾಯ ಮಾಡ ಲಾಯಿತು. ಸಂಘದ ಅಧ್ಯಕ್ಷ ಕೆ.ಅನಳಗನ್ ಮಾತನಾಡಿದ, ಬಿ.ಜಿ.ಎಂ.ಎಲ್. ಕಾರ್ಖಾನೆಯ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರದ ಮಾರ್ಗ ದರ್ಶನದಲ್ಲಿ, ಸಿಎಂ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಕೇಂದ್ರಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಆಗಸ್ಟ್‌ನಲ್ಲಿ ಸಭೆ ನಡೆಸಿರುವುದುಕಾರ್ಮಿಕರುಗಳಿಗೆ ಧೈರ್ಯ ತುಂಬಿದಂತಾಗಿದೆ.
ಸಂಘದ ಕಾರ್ಯದರ್ಶಿ ಲಯನ್ ಡಾ.ಆರ್.ಪ್ರಭುರಾಂ, 2019-20ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯ ಸೂಚನಾ ಪತ್ರ ಓದಿ ವಿವರಿಸಿದರು. ಉಪಾಧ್ಯಕ್ಷರಾದ ಟಿ.ವಿನ್ಸೆಂಟ್, ನಿರ್ದೇಶಕರಾದ ಆರ್.ಗೋಪಿನಾಥ್, ಶ್ರೀನಿವಾಸನ್, ಸಾವಿತ್ರಿ, ಮುನಿಯಮ್ಮ, ಕಬಿಲನಾಥನ್, ಆನಂದನ್, ನಲ್ಲಮನವಾಲನ್, ಎ.ಸುಬ್ರಹ್ಮಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.