ಸಮಸ್ಯೆ ಪರಿಹರಿಸಲುಆಗ‹ಹಿಸಿ ಪ‹ತಿಭಟನೆ
Team Udayavani, Dec 12, 2019, 4:19 PM IST
ಮಾಲೂರು: ತಾಲೂಕಿನ ಸರ್ಕಾರಿ ಗೋಮಾಳ ಮತ್ತು ಸರ್ಕಾರಿ ಅಸ್ತಿಗಳ ಅಕ್ರಮವಾಗಿ ಪರಭಾರೆ ಮಾಡಿರುವ ಕ್ರಮ ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಮಾರಸಂದ್ರ ಸೇರಿ ಅನೇಕ ಗ್ರಾಮಗಳ ಗೋಮಾಳಗಳಿಗೆ ಅಕ್ರಮ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿದ್ದು, ತಾಲೂಕಿನಾದ್ಯಂತ ರಾಜಕಾಲುವೆ ಮತ್ತು ಜಲ ಕಾಯಗಳ ಒತ್ತುವರಿಯಾಗಿದೆ. ತಾಲೂಕಿನ ಟೇಕಲ್ ಹೋಬಳಿಯ ಮರಲಹಳ್ಳಿಯ ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡುವುದು. ತಾಲೂಕು ಕಚೇರಿ ದಾಖಲೆಗಳಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು, ಪಟ್ಟಣದ ಡಾ. ಅಂಬೇಡ್ಕರ್ ಭವನದ ಉಳಿಕೆ ಕಾಮ ಗಾರಿ ಪೂರ್ಣ, ಸೂಕ್ತ ನಿರ್ವಹಣೆ ದಲಿತರ ಸಮಾರಂಭಗಳಿಗೆ ಒದಗಿಸುವುದು.
ಮಾಸ್ತಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿ ನನೆಗುದಿಗೆ ಬಿದ್ದಿರುವ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಕಟ್ಟಡದ ಕಾಮಗಾರಿ ಕೂಡಲೇ ಆರಂಭಿಸಿ ಪೂರ್ಣಗೊಳಿಸುವುದು ಸೇರಿದಂತೆ ಅನೇಕ ಸಮಸ್ಯೆ ಬಗೆ ಹರಿಸುವಂತೆ ಅಗ್ರಹಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅವರಣದಿಂದ ಪ್ರತಿಭಟನೆ ರ್ಯಾಲಿ ಆರಂಭಿಸಿ, ಬಸ್ ನಿಲ್ದಾಣದ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ, ಉದ್ಯಾನವನದಲ್ಲಿನ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ,ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಮುಕ್ತಾಯಗೊಳಿಸಿದರು. ರಾಜ್ಯ ಸಂಚಾಲಕ ಮೇಡಿಹಾಳ ಬೈರಪ್ಪ, ಚಂದ್ರಶೇಖರ್, ಮಂಜುನಾಥ್, ಕೃಷ್ಣಪ್ಪ, ಶಂಕರ್, ಮಹಾಲಕ್ಷ್ಮೀ, ಆನಂದ್, ಮಾಸ್ತಿ ಅನಂದ್, ಕರಿಸಂದ್ರ ರಾಜು, ಚಂದ್ರು ಮತ್ತಿತರರು ಭಾಗವಹಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.