ಬಡ ಕುಟುಂಬಗಳಿಗೆ ನಿವೇಶನ ನೀಡಿ
Team Udayavani, Nov 29, 2020, 2:55 PM IST
ಬಂಗಾರಪೇಟೆ: ಸಂವಿಧಾನನ ಮೂಲ ಆಶಯ ಜನಸಾಮಾನ್ಯರಿಗೆ ನೀರು, ಊಟ, ಚರಂಡಿ, ರಸ್ತೆ, ವಸತಿಗಳಂತಹ ಮನುಷ್ಯನಿಗೆ ಬೇಕಾಗಿರುವ ಮೂಲಭೂತ ಹಕ್ಕುಗಳನ್ನು ನೀಡಲು ಮೊದಲ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ರೈತ ಸೇನೆಯ ರಾಜ್ಯಾಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್‌ಒತ್ತಾಯಿಸಿದರು.
ತಾಲೂಕಿನ ಹುಲಿಬೆಲೆ ಗ್ರಾಪಂ ಮುಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಹುಣಸನಹಳ್ಳಿಯ ನಿವೇಶನ ರಹಿತನಿರ್ಗತಿಕ ಬಡ ಕುಟುಂಬಗಳಿಗೆ ಖಾಲಿ ನಿವೇಶನ ನೀಡಿ ಎಂದು ಆಗ್ರಹಿಸಿದರು.
ತಾಲೂಕಿನ ಕಸಬಾ ಹೋಬಳಿ ಹುಣಸನಹಳ್ಳಿ ಗ್ರಾಮದಲ್ಲಿ ಸುಮಾರು 25-30 ಕುಟುಂಬಗಳು ಹುಟ್ಟಿನಿಂದಲೂ ಇಲ್ಲೇ ಇದ್ದು, ಬೆಳೆದು ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ, ಆದರೆ ಇವರು ವಾಸ ಮಾಡಲು ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಗಳಲ್ಲಿಜೀವನ ಮಾಡಿಕೊಂಡು ಇರುತ್ತಾರೆ. ಕೂಡಲೇ ಇವರಿಗೆ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಹುಲಿಬೆಲೆ ಗ್ರಾಪಂ ಪಿಡಿಒ ಶ್ರೀನಿವಾಸರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಆರ್.ಶ್ರೀ ನಿವಾಸ್ ಭೇಟಿ ನೀಡಿ ಮನವಿಗೆ ಸ್ಪಂದಿಸಿ ತಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಕರ್ನಾಟಕನವರಕ್ಷಣಾವೇದಿಕೆಜಿಲ್ಲಾಧ್ಯಕ್ಷ ಬಟ್ರಕುಪ್ಪ ಅರುಣ್, ಹುಣಸನಹಳ್ಳಿ ಗ್ರಾಮಸ್ಥರಾದ ತಿಲಕಾವತಿ, ಗಜವೇಣಿ ಮುಂತಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.