ಸರ್ಕಾರದಿಂದಲೇ ತರಕಾರಿ ಖರೀದಿ
Team Udayavani, Apr 12, 2020, 3:27 PM IST
ಸಾಂದರ್ಭಿಕ ಚಿತ್ರ
ಮುಳಬಾಗಿಲು: ರೈತರಿಂದ ತರಕಾರಿಯನ್ನು ಖರೀದಿಸಿ ಅವರ ಕಷ್ಟಕ್ಕೆ ನೆರವಾಗಲು ಈಗಾಗಲೇ ಮುಖ್ಯ ಮಂತ್ರಿ ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದರು.
ನಗರದ ಎಪಿಎಂಸಿ ಪ್ರಾಂಗಣದಲ್ಲಿ ಸರ್ಕಾರದಿಂದ ಅಳವಡಿಸಲಾಗಿದ್ದ ಕೊರೊನಾ ಸೋಂಕು ನಿವಾರಕ ಸುರಂಗ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿ, ಎಪಿಎಂಸಿಗೆ ಬರುವ ರೈತರು, ಈ ಸುರಂಗ ಮಾರ್ಗದ ಮೂಲಕ ಬರುವುದರಿಂದ ಸೋಂಕು ತಡೆಯಲು ಸಾಧ್ಯ. ಹೀಗಾಗಿ ಮಾರುಕಟ್ಟೆಗೆ ಬರುವವರು ಸೋಂಕು ನಿವಾರಕ ಮಾರ್ಗ ವನ್ನು ಬಳಸಿಕೊಳ್ಳಬೇಕೆಂದರು.
ಎಪಿಎಂಸಿ ನಿರ್ದೇಶಕ ನಗವಾರ ಸತ್ಯಣ್ಣ ಮಾತನಾಡಿ, ಎನ್.ವಡ್ಡಹಳ್ಳಿ ಟೊಮೆಟೋ ಮಾರುಕಟ್ಟೆಯಲ್ಲಿ ಪ್ರತಿ ನಿತ್ಯ 30 ಸಾವಿರ ಟೊಮೆಟೋ ಬಾಕ್ಸ್‌ಗಳು ರೈತರಿಂದ ಬರು ತ್ತಿದ್ದು, ಅವುಗಳಲ್ಲಿ 15 ಸಾವಿರ ಬಾಕ್ಸ್ ಮಾತ್ರ ಖರೀದಿಯಾಗುತ್ತಿವೆ. ಇದ್ದರಿಂದ ರೈತರ ಬದುಕಿಗೆ ಕಷ್ಟವಾಗಲಿದೆ. ಅದಕ್ಕಾಗಿ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಸಚಿವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿ ಮತ್ತು ಸಂಬಂಧ ಪಟ್ಟ ಸಚಿವರೊಂದಿಗೆ ಮಾತನಾಡುವ ಭರವಸೆ ನೀಡಿದರು. ಅಖೀಲ ಭಾರತ ಕಿಸಾನ್ ಮಂಚ್ ರಾಷ್ಟ್ರೀಯ ಕಾರ್ಯದರ್ಶಿ ಎಂ.ಗೋಪಾಲ್ ಮಾತನಾಡಿ, ನೆರೆಯ
ಆಂಧ್ರದಲ್ಲಿ ಕೊರೊನಾ ಪ್ರಕರಣಗಳು ದಿನನಿತ್ಯ ಹೆಚ್ಚಾಗುತ್ತಿರುವುದರಿಂದ ಕೇವಲ ಎರಡು ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿದ್ದರೆ ಸಾಲದು, ಕೂಡಲೇ ಗೋಕುಂಟೆಯಿಂದ ಕುಪ್ಪಂಪಾಳ್ಯದವರೆಗೂ 55 ಕಿ.ಮೀ. ರಸ್ತೆ ಇದ್ದು, ಮಧ್ಯದಲ್ಲಿ 48 ರಸ್ತೆಗಳು ಆಂಧ್ರ ಮತ್ತು ಕರ್ನಾಟಕ್ಕೆ ಸಂಪರ್ಕ ಕಲ್ಪಿಸುತ್ತಿರುವುದರಿಂದ ಎಲ್ಲಾ ಕಡೆಯು ದ್ವಿಚಕ್ರ ವಾಹನಗಳಲ್ಲಿ ಆ ಕಡೆಯಿಂದ ಈ ಕಡೆಗೆ ಬರುವುದು ಹೋಗುವುದು ಮಾಡುತ್ತಿರುವುದರಿಂದ ತಾಲೂಕಿನ ಜನತೆ ಆಂತಕ ಪಡುವಂತಾಗಿದೆ ಎಂದು ಸಚಿವರಿಗೆ ಹೇಳಿದರು.
ಸ್ಥಳದಲ್ಲಿದ್ದ ಸಿಪಿಐ ಮಾರ್ಕಂಡಯ್ಯಗೆ ಸಚಿವರು ಎಲ್ಲಾ ರಸ್ತೆಗಳ ಸಂಪರ್ಕವನ್ನು ಕಡಿತ ಮಾಡಿ ಇಲಾಖೆಯಿಂದ ನಿಗಾ ಇಡುವಂತೆ ಸೂಚಿಸಿದರು. ಎಪಿಎಂಸಿ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಮರೇರು ವೆಂಕಟರಾಮಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರಗೌಡ, ಎಪಿಎಂಸಿ ನಿರ್ದೇಶಕರಾದ ಆವಣಿಬಾಬು, ಗೊಲ್ಲಹಳ್ಳಿ ವೆಂಕಟೇಶ್, ಲೆಕ್ಕ ಪರಿಶೋಧಕ ಶಶಿಧರನ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.