ಪಂಪು, ಮೋಟರ್‌ಗಳ ಅಣಕು ಶವ ಇರಿಸಿ ಧರಣಿ
ನಿರ್ಲಕ್ಷ್ಯ ಖಂಡಿಸಿ ಖಾಲಿ ಕೊಡ ಹಿಡಿದು ಧರಣಿ
Team Udayavani, Jun 7, 2019, 11:18 AM IST
ಪಂಪ್ ಮೋಟಾರ್ ರಿಪೇರಿಗೆ ನಿರ್ಲಕ್ಷ್ಯತೋರಿರುವ ನಗರಸಭೆ ವಿರುದ್ಧ ನಾಗರಿಕರು ಅಣಕು ಶವವಿಟ್ಟು ಪ್ರತಿಭಟನೆ ನಡೆಸಿದರು.
ಬಂಗಾರಪೇಟೆ: ಕುಡಿಯಲು ನೀರಿಲ್ಲದೇ ಹಾಹಾಕಾರ ಉಂಟಾಗಿದ್ದರೂ ಸಹ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವುದನ್ನು ಖಂಡಿಸಿ ಮಹಿಳೆಯರು ಖಾಲಿ ಬಿಂದಿಗೆಗಳೊಂದಿಗೆ ಗ್ರಾಪಂನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಪ್ರತಿಭಟನೆ ಮಾಡಿದ ಘಟನೆ ತಾಲೂಕಿನ ಬೂದಿಕೋಟೆಯಲ್ಲಿ ನಡೆದಿದೆ.
ತಾಲೂಕಿನ ಬೂದಿಕೋಟೆ ಗ್ರಾಪಂನ ಕೇಂದ್ರ ಸ್ಥಾನದ 3ನೇ ಬ್ಲಾಕ್‌ನಲ್ಲಿ ಕಳೆದ ಮೂರು ತಿಂಗಳಿನಿಂದ ಕುಡಿಯಲು ನೀರಿಲ್ಲದೇ ಹಾಹಾಕಾರ ಉಂಟಾಗಿದ್ದರೂ ಸಹ ಗ್ರಾಪಂ ಪಿಡಿಒ ಜವರೇಗೌಡರಿಗೆ ಹಲವಾರು ಬಾರಿ ಮನವಿ ಮಾಡಿದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಹಿಳೆಯರು ವಾಗ್ಧಾಳಿಯೇ ನಡೆಸಿದರು.
ತಾಲೂಕಿನ ಬೂದಿಕೋಟೆ ಕಾಲೇಜು ಆವರಣದಲ್ಲಿ ಅನಗತ್ಯವಾಗಿ ನೀರು ವ್ಯರ್ಥವಾಗಿ ಕಾಳುವೆಗೆ ಹೋಗುತ್ತಿರುವ ಬಗ್ಗೆ ಪಿಡಿಒ ಜವರೇಗೌಡರಿಗೆ ತಿಳಿಸಿದರೂ ಸಹ ಸರ್ಕಾರಿ ಕಟ್ಟಡಗಳ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರಿಂದ ಹಣ ಪಡೆದು ಅವರಿಗೆ ಮಾತ್ರ ನೀರು ಬಿಡುತ್ತಿರುವ ಬಗ್ಗೆ ತೀವ್ರ ಆಕ್ರೋಷ ವ್ಯಕ್ತಪಡಿಸಿ ಪಿಡಿಒ ರನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಬೂದಿಕೋಟೆಯ 3ನೇ ಬ್ಲಾಕ್‌ನಲ್ಲಿ ಸುಮಾರು 300 ಮನೆಗಳಿದ್ದು, ಕಳೆದ 15 ದಿನಗಳಿಂದ ನೀರೇ ಬಿಟ್ಟಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹತ್ತಾರು ಮಹಿಳೆಯರು ಪಿಡಿಒ ಜವರೇಗೌಡರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರೂ ಸಹ ಇದುವರೆಗೂ ಒಮ್ಮೆಯೂ ಸಮಸ್ಯೆ ಇರುವ ಜಾಗಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯತೋರಿದ್ದಾರೆಂದು ಗ್ರಾಪಂ ಅಧ್ಯಕ್ಷರ ಸಮ್ಮುಖದಲ್ಲಿಯೇ ತರಾಟೆಗೆ ತೆಗೆದುಕೊಂಡರು.
ಕುಡಿವ ನೀರಿನ ಸಮಸ್ಯೆ ಬಗ್ಗೆ ಮಹಿಳೇಯರು ಗಲಾಟೆ ಮಾಡುತ್ತಿದ್ದ ವೇಳೆ ಗ್ರಾಪಂ ಸದಸ್ಯರಾದ ಬಿ.ಕೃಷ್ಣಪ್ಪಶೆಟ್ಟಿ, ಕಲಾವತಿ ವಿಜಯಕುಮಾರ್ ಧ್ವನಿಗೂಡಿಸಿ ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ಸಮ್ಮುಖದಲ್ಲಿಯೇ ಪಿಡಿಒರನ್ನು ತರಾಟೆಗೆ ತೆಗೆದುಕೊಂಡರು. ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರೂ ಸಹ ಪಿಡಿಒ ಜವರೇಗೌಡ ಕ್ರಮಕೈಗೊಂಡಿಲ್ಲ ಎಂದು ದೂರಿದರು.
ಮದ್ಯೆ ಪ್ರವೇಶಿಸಿದ ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ಮಾತನಾಡಿ, ಈ ಕೂಡಲೇ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಪರಿಶೀಲನೆ ಮಾಡಿ ಮೇಲಾಧಿಕಾರಿಗಳಿಗೆ ವರದಿ ನೀಡಬೇಕಾಗಿರುವುದು ಪಿಡಿಒ ಕೆಲಸÊಾಗಿದೆ. ಬೂದಿಕೋಟೆಯ 3ನೇ ಬ್ಲಾಕ್‌ನಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಜಲಗಾರ ಕೋಟೆಪ್ಪ ವಿಫಲರಾಗಿರುವುದರಿಂದ ಇವರನ್ನು ಬದಲಾಯಿಸಿ ಸುಬ್ರಮಣಿ ಹಾಗೂ ಶ್ರೀನಿವಾಸ್ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರಿಂದ ಸಮಸ್ಯೆಯನ್ನು ಇತ್ಯಾರ್ಥಗೊಳಿಸಿದರು.
ತಮ್ಮ ವಾರ್ಡಿನಲ್ಲಿ ಪಂಪು, ಮೋಟರ್ ಕೆಟ್ಟು 17 ದಿನಗಳಾಗಿದ್ದರೂ, ಕ್ರಮವಹಿಸದ ನಗರಸಭೆ ಅಧಿಕಾರಿಗಳು ಜನತೆಯ ವಿರುದ್ದ ಹೊಣೆಗೇಡಿತನದ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ನಗರಸಭೆ ಕಚೇರಿ ಎದುರು ಅಣಕು ಶವದಂತೆ ಪಂಪು, ಮೋಟರ್ ಇರಿಸಿ ನಾಗರಿಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ವಾರ್ಡಿನ ಮಾಜಿ ಸದಸ್ಯ ಅಪ್ರೋಜ್ ಪಾಷ, ತಮ್ಮ ವಾರ್ಡಿನಲ್ಲಿ 2 ಕೊಳವೆ ಬಾವಿಗಳಿದ್ದು, ಒಂದು ಕೆಟ್ಟು ಹೋದರೆ ಮತ್ತೂಂದು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಇದೀಗ 1 ಬೋರ್‌ವೆಲ್ ಕೆಟ್ಟು ಒಂದೂವರೆ ತಿಂಗಳಾಗಿದ್ದು, ಮತ್ತೂಂದು ಕಳೆದ 17 ದಿನಗಳ ಹಿಂದೆ ಕೆಟ್ಟಿದೆ ಎಂದು ತಿಳಿಸಿದರು.
ಹೀಗಾಗಿ ನೀರಿಲ್ಲದೆ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರೂ ನಗರಸಭೆಯವರು ಗಮನ ನೀಡದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.
ರಂಜಾನ್ ಹಬ್ಬದಲ್ಲೂ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡದ ಹಿನ್ನಲೆಯಲ್ಲಿ ಹಣವನ್ನು ಕೊಟ್ಟು ನೀರು ಖರೀದಿಸ ಬೇಕಾದ ದುಸ್ಥಿತಿ ಉಂಟಾಯಿತು ಇದರಿಂದ ಹಬ್ಬ ಆಚರಣೆಗೆ ಉಂಟಾಯಿತು ಎಂದು ಅಕ್ರೋಶ ವ್ಯಕ್ತಪಡಿಸಿದರು.
ವಾರ್ಡಿಗೆ ನೀರು ಪೂರೈಕೆಯಾಗುತ್ತಿದ್ದ ಕೊಳವೆ ಬಾವಿಯ ಮೋಟರ್ ಪಂಪ್ ದುರಸ್ತಿ ಮಾಡಲು ಹಲವಾರು ಬಾರಿ ಮನವಿ ಮಾಡಿದರೂ ಸಹ ನಿರ್ಲಕ್ಷಿಸಿದ್ದಾರೆ. ತಮ್ಮ ಸಮುದಾಯದವರನ್ನು ನಿಂದಿಸಿ ಜನಸಂಖ್ಯೆಯ ಬಗ್ಗೆ ಅವಹೇಳನ ಮಾಡಿದ್ದಾರೆ.ಇವರ ಕರ್ತವ್ಯ ಲೋಪದ ವಿರುದ್ದ ತನಿಖೆ ನಡೆಸಿ ಕ್ರಮಜರುಗಿಸಬೇಕೆಂದು ಆಗ್ರಹಿಸಿದರು. ಅನ್ಸರ್ ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಕುಡಿವ ನೀರಿನ ಸಂಪು ನಿರ್ಮಿಸಬೇಕು. ಅಮೃತ ಯೋಜನೆಯಡಿ ಒಳಚರಂಡಿಗಳ ಕಳಪೆ ಕಾಮಗಾರಿಗಳನ್ನು ದುರಸ್ತಿಗೊಳಿಸಿ ಪೂರ್ಣಗೊಳಿಸಿಬೇಕು. ಕಸದ ತ್ಯಾಜ್ಯಗಳನ್ನು ತೆರವುಗೊಳಿಸಿ ಶುಚಿತ್ವವನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಮಾಡಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷಿದ್ದು, ಜಿಲ್ಲಾಧಿಕಾರಿಗೂ ದೂರು ಸಲ್ಲಿಸುವುದಾಗಿ ಪ್ರತಿಭಟನಕಾರರು ತಿಳಿಸಿದರು. ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಸದಸ್ಯ ಇಲಿಯಾಜ್‌ಪಾಷ, ಮುಖಂಡರಾದ ಅಯೂಬ್, ವಸೀಂ, ಮುಜಾಮ್ಮಿಲ್, ಅಬ್ದುಲ್, ಭಾಷಾ, ರಾಮು ಶಿವಣ್ಣ, ನಾರಾಯಸ್ವಾಮಿ, ಜಾನ್‌ಸಾಬ್, ಮುಂತಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.