ಅವಳಿ ಜಿಲ್ಲೆಯಲ್ಲಿ ರಂಜಾನ್‌ ಭಾವೈಕ್ಯತೆ


Team Udayavani, May 4, 2022, 3:22 PM IST

Untitled-1

ಕೋಲಾರ: ಜಿಲ್ಲಾದ್ಯಂತ ಈದ್‌ ಉಲ್‌  ಫಿತರ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಯಿತು. ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕುಗಳಲ್ಲಿಯೂ ಮುಸಲ್ಮಾನರು ಸಾಮೂಹಕ ಪ್ರಾರ್ಥನೆ ಸಲ್ಲಿಸಿದರು. ನಮಾಜ್‌ ನಂತರ ಧಾರ್ಮಿಕ ಮುಖಂಡರು ಉಪ ನ್ಯಾಸ ನೀಡಿದರು. ನಂತರ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ಕೋರಿಕೊಂಡರು.

ನಗರದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ರಂಜಾನ್‌ ಭಾವೈಕ್ಯತೆಯ ಸಂದೇಶ ಸಾರಲಿ ಎಂದು ಆಶಿಸಿದರು. ಹಬ್ಬಗಳು ಸಮಾಜದಲ್ಲಿ ಸಾಮರಸ್ಯ ಕದಡಬಾರದು, ಸಹಬಾಳ್ವೆಗೆ ದಾರಿ ಮಾಡಿಕೊಡಬೇಕು ಎಂದ ಅವರು, ಕುರಾನ್‌ನಲ್ಲಿಯೂ ಭ್ರಾತೃತ್ವಕ್ಕೆ ಆದ್ಯತೆ ನೀಡಲಾಗಿದೆ ಎಂದು ಶುಭಾಶಯಕೊರಿದರು.

ಈದ್‌ ಉಲ್‌ ಫಿತರ್‌ ಹಬ್ಬದ ಪ್ರಯುಕ್ತ ನಮಾಜ್‌ ಅನ್ನು ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಮೌಲಾ ಖಾಜ ಈದ್ಗಾ ಮೈದಾನ, ಬೆಂಗಳೂರು ರಸ್ತೆಯ ಶಾಹಿ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸಲ್ಮಾನರು ಪ್ರಾರ್ಥನೆ ಸಲ್ಲಿಸಿದರು. ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಜೆಡಿಎಸ್‌ ಮುಖಂಡ ಸಿ.ಎಂ.ಆರ್‌.ಶ್ರೀನಾಥ್‌ ಮುಸಲ್ಮಾನ ಮುಖಂಡರಿಗೆ ಶುಭಾಶಯ ಕೋರಿದರು.

ಮುಳಬಾಗಿಲಿನಲ್ಲಿ ಪವಿತ್ರ ರಂಜಾನ್‌ :

ಮುಳಬಾಗಿಲು: ರಂಜಾನ್‌ ಹಬ್ಬದ ಅಂಗವಾಗಿ ನಗರದ ವಿವಿದ ಮಸೀದಿ ಮತ್ತು ದರ್ಗಾಗಳಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು, ಅಂತೆಯೇ ಈದ್ಗಾ ಮೈದಾನದಲ್ಲಿ ಶಾಸಕ ಎಚ್‌.ನಾಗೇಶ್‌ ಒಳಗೊಂಡಂತೆ ಸಹಸ್ರಾರು ಅಲ್ಪಸಂಖ್ಯಾತರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿ ಶುಭಾಷಯ ಕೋರಿದರು.

ನಗರಸಭೆ ಅಧ್ಯಕ್ಷ ರಿಯಾಜ್‌ ಅಹಮದ್‌, ಜಾಮಿಯಾ ಮಸೀದಿ ಮುತ್ವಲ್ಲಿ ಖಯ್ಯೂಂಸಾಬ್‌, ಮುಖಂಡರಾದ ಅಪಾcದ್‌, ಮುಜಾಹೀದ್‌ಖಾನ್‌, ಅಮಾನುಲ್ಲಾ, ರೋಷನ್‌ ಟ್ರಸ್ಟ್‌ ಅದ್ಯಕ್ಷ ಜಬೀವುಲ್ಲಾ, ಹೈದರಾಲಿ ಖಾನ್‌, ನಗರಸಭೆ ಸದಸ್ಯರಾದ ಮಹಮದ್‌ ಜಬೀವುಲ್ಲಾ, ಷಾಹೀನ್‌, ಇಮ್ರಾನ್‌ಪಾಷ, ವಜೀರ್‌, ಹರ್ಷಾದ್‌, ಮೊಹಮದ್‌ ಸುಹೇಲ್‌ ಸೇರಿದಂತೆ ಸಹಸ್ರಾರು ಅಲ್ಪಸಂಖ್ಯಾತರು ಪ್ರಾರ್ಥನೆಯಲ್ಲಿ ಹಾಜರಿದ್ದರು.

ಗುಡಿಬಂಡೆಯಲ್ಲಿ ಸಂಭ್ರಮದ ರಂಜಾನ್‌ :

 ಗುಡಿಬಂಡೆ: ಪಟ್ಟಣದ ನಮಾಜ್‌ ಮೈದಾನದಲ್ಲಿ ಮಂಗಳವಾರ ರಂಜಾನ್‌ ಉಪವಾಸ ಮಾಸದ ಕೊನೆಯ ದಿನವಾಗಿದ್ದರಿಂದ ತಾಲೂಕಿನ ಎಲ್ಲಾ ಮುಸ್ಲಿಂ ಬಾಂಧವರು ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದರ ಮೂಲಕ ರಂಜಾನ್‌ ಹಬ್ಬ ಆಚರಣೆ ಮಾಡಿದರು.

ನಿನ್ನೆ ಚಂದ್ರದರ್ಶನವಾಗಿದ್ದರಿಂದ ಇಂದು ಈದ್‌ ಉಲ್‌ ಫಿತರ್‌ ಆಚರಿಸಲಾಯಿತು, ಈ ಹಬ್ಬವು ಸೌಹಾರ್ದತೆ, ಶಾಂತಿ ಮತ್ತು ಸಮಾಜದಲ್ಲಿ ಸಮೃದ್ಧತೆ ನಿರ್ಮಿಸಲು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ, ಹಬ್ಬ ಸ್ನೇಹ, ಭ್ರಾತೃತ್ವ, ಪ್ರೀತಿ ಮತ್ತು ಪರಸ್ಪರ ಗೌರವವನ್ನು ಪಸರಿಸುವ ಸಂಕೇತವಾಗಿದೆ, ಮುಸ್ಲಿಂ ಬಾಂಧವರು ಒಬ್ಬರನ್ನೊಬ್ಬರು ಅಪ್ಪಿಕೊಂಡು ರಂಜಾನ್‌ ಶುಭಾಶಯ ಹೇಳುತ್ತಾ ಹಬ್ಬವನ್ನು ಆಚರಣೆ ಮಾಡಿದರು.

ಶಿಡ್ಲಘಟ್ಟದಲ್ಲಿ ಸಂಭ್ರಮದ ಈದುಲ್‌-ಫಿತ್ರ್ : ಶಾಂತಿ ಮತ್ತು ಸೌರ್ಹದತೆಯ ಸಂಕೇತ ಪವಿತ್ರ ರಂಜಾನ್‌ ಅನ್ನು ಮುಸಲ್ಮಾನರು ಶ್ರಧ್ದಾಭಕ್ತಿ ಯಿಂದ ಆಚರಿಸಿದರು.

ಸಂಪ್ರದಾಯದಂತೆ ನಗರದ ವಿವಿಧ ಮಸೀದಿ ಬಳಿ ಜಮಾವಣೆಗೊಂಡು ನಂತರ ಮೆರವಣಿಗೆ ಮೂಲಕ ಮೀಲಾದ್‌ ಬಾಗ್‌ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಜಾಮೀಯಾ ಮಸೀದಿಯ ಧರ್ಮಗುರು ಹಜರತ್‌ ಹಾಫೀಜ್‌ ಅಶ್ಫಾಖ್‌ ಅವರು ಪವಿತ್ರ ರಂಜಾ ಮಹತ್ವ ಸಾರಿದರು. ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಮಯ ಮಾಡಿಕೊಂಡರುಶಾಸಕ ವಿ.ಮುನಿಯಪ್ಪ ಅವರು ಬಂದು ಮುಸ್ಲಿಂ ಬಾಂಧವರಿಗೆ ಶುಭಾಶಯಗಳು ಕೋರಿದರು.

ಜಾಮಿಯಾ ಮಸೀದಿಯ ಅಧ್ಯಕ್ಷ ಎಚ್‌.ಎಸ್‌.ರಫೀಖ್‌ ಅಹಮದ್‌, ಮಾಜಿ ಅಧ್ಯಕ್ಷ ತಾಜ್‌ ಪಾಷ,ಹಝರತ್‌ ಬಿಲಾಲ್‌ ವೆಲ್ಫೇರ್‌ ಅಸೋಸಿಯೇಷನ್‌ನ ಅಧ್ಯಕ್ಷ ಅಬ್ದುಲ್‌ ವಹಾಬ್‌ ಇತರರಿದ್ದರು.

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.