Farmers: ಉಳಿತಾಯ ಖಾತೆಗಳಿಗೆ ಪರಿಹಾರ, ರೈತರಿಗೆ ವರದಾನ
Team Udayavani, Oct 30, 2023, 3:01 PM IST
ಬಂಗಾರಪೇಟೆ: ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಸಮರ್ಪಕ ಮಳೆ ಇಲ್ಲದೇ ಇರುವು ದರಿಂದ ರಾಜ್ಯ ಸರ್ಕಾರವೂ ಈಗಾಗಲೇ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದರೂ ಪರಿಹಾರ ಇನ್ನೂ ಬರಲಿಲ್ಲ. ಆದರೆ, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ ವಿಮಾ ಯೋಜನೆಯಡಿಯಲ್ಲಿ ವಿಮೆ ಕಟ್ಟಿರುವ 2154 ರೈತರಿಗೆ ಮೊದಲ ಕಂತು ಪರಿಹಾರವಾಗಿ 93 ಲಕ್ಷ ಉಳಿತಾಯ ಖಾತೆಗಳಿಗೆ ಜಮೆ ಆಗಿ ತಾಲೂಕಿನ ರೈತರಿಗೆ ವರದಾನವಾಗಿದೆ.
ತಾಲೂಕಿನಲ್ಲಿ ಒಟ್ಟು 96 ಸಾವಿರ ಸರ್ವೆ ನಂಬರ್ ಗಳಿವೆ. ತಾಲೂಕಿನಲ್ಲಿ ಹೆಚ್ಚಾಗಿ ಮಳೆಯಾಶ್ರಿತವಾಗಿ ರಾಗಿ ಬೆಳೆಯನ್ನೇ ಬೆಳೆಯುತ್ತಿದ್ದಾರೆ. ಆದರೆ, ರೈತರು ಮಾತ್ರ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ ವಿಮೆ ಯೋಜನೆಯಡಿಯಲ್ಲಿ ವಿಮೆ ಕಟ್ಟಲು ತೀವ್ರ ತಾತ್ಸಾರ ಮನೋಭಾವನೆಯನ್ನು ಹೊಂದಿರುವುದರಿಂದ ಈ ಭಾರಿ ಬರಗಾಲ ಅನುಸರಿಸುತ್ತಿರುವುದರಿಂದ ರೈತರಿಗೆ ಭಾರೀ ನಷ್ಠವೇ ಅನುಭವಿಸಿದ್ದಾರೆ. 2023-24ನೇ ಸಾಲಿನಲ್ಲಿ ತಾಲೂಕಿನಲ್ಲಿ ಮಳೆಯನ್ನೇ ನಂಬಿ ರಾಗಿಯನ್ನು ಬೆಳೆದಿರುವ ರೈತರ ಪೈಕಿ ಕೇವಲ 2154 ರೈತರು ಮಾತ್ರ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ ವಿಮೆಯನ್ನು ಪ್ರತಿ ಎಕರೆಗೆ 400 ರೂ.ಗಳನ್ನು ಕಟ್ಟಿ ಅರ್ಜಿ ಸಲ್ಲಿಸಿದ್ದಾರೆ.
ಬ್ಯಾಂಕ್‌ಗಳಲ್ಲಿ ಹಾಗೂ ಸಿಎಸ್‌ಸಿ ಕೇಂದ್ರಗಳಲ್ಲಿ ವಿಮೆಯನ್ನು ಕಟ್ಟಲು ಆ.16ರವರೆಗೂ ಅವಕಾಶವನ್ನು ನೀಡಲಾಗಿತ್ತು. ಕೃಷಿ ಇಲಾಖೆ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಯು ಅಬ್ಬರದ ಪ್ರಚಾರ ಮಾಡಿದ್ದರೂ ಸಹ ರೈತರು ತೀವ್ರ ನಿರ್ಲಕ್ಷ್ಯವಹಿಸಿದ್ದರು. ಈ ಬಾರಿ 2154 ರೈತರು 884.74 ಹೆಕ್ಟೇರ್ ಜಮೀನಿಗೆ ಒಟ್ಟು 7.52 ಲಕ್ಷ ಪ್ರೀಮಿಯಮ್ ಹಣವನ್ನು ಆನ್ ಲೈನ್ ಮೂಲಕ ಕಟ್ಟಿದ್ದರು.
ರಿಯಾಯಿತಿ ದರದಲ್ಲಿ ರಾಗಿ ಮಾರಾಟ: 2023-24ನೇ ಸಾಲಿನಲ್ಲಿ ತಾಲೂಕಿನ ಕಸಬಾ ಹೋಬಳಿಯಲ್ಲಿ 1680 ಹೆಕ್ಟೇರ್, ಕಾಮಸಮುದ್ರ ಹೋಬಳಿಯಲ್ಲಿ 510 ಹೆಕ್ಟೇರ್ ಹಾಗೂ ಬೂದಿಕೋಟೆ ಹೋಬಳಿಯಲ್ಲಿ 594 ಹೆಕ್ಟೇರ್ ಸೇರಿ ಒಟ್ಟು 2784 ಹೆಕ್ಟೇರ್‌ಗಳಲ್ಲಿ ಜಮೀನಿನಲ್ಲಿ ವಿವಿಧ ತಳಿಯ ರಾಗೀ ಬೆಳೆಯನ್ನು ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆಯು ರೈತರಿಗೆ ಉತ್ತಮ ಬೆಳೆಯನ್ನು ಬೆಳೆಯಲು ಉತ್ತಮ ಗುಣಮಟ್ಟದ ವಿವಿಧ ತಳಿಯ ಬಿತ್ತನೆ ರಾಗಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ್ದಾರೆ.
ರಾಗಿ ತಳಿಗಳನ್ನು ರೈತರು ಖರೀದಿ ಮಾಡಿ ಬಿತ್ತನೆ ಕಾರ್ಯ ಪೂರ್ಣ: ತಾಲೂಕಿನ ರಾಬರ್rಸನ್‌ಪೇಟೆ ಹೋಬಳಿ ಯನ್ನು ಕಸಬಾ ಹೋಬಳಿಗೆ ಸೇರಿಸಿದ್ದು, ಜಿಪಿಯು-8 ತಳಿ ರಾತ್ರಿಯು ಕಸಬಾ ಹೋಬಳಿಯಲ್ಲಿ 5440 ಕ್ವಿಂ ಟಾಲ್, ಬೂದಿಕೋಟೆಯಲ್ಲಿ 56.50 ಕ್ವಿಂಟಲ್, ಕಾಮ ಸಮುದ್ರ ಹೋಬಳಿಯಲ್ಲಿ 44.50 ಕ್ವಿಂಟಲ್, ಎಂ.ಎಲ್ 365 ತಳಿ ರಾಗಿಯು ಕಸಬಾ 29.20 ಕ್ವಿಂಟಾಲ್, ಬೂದಿಕೋಟೆ 11.20 ಕ್ವಿಂಟಲ್, ಕಾಮ ಸಮುದ್ರ 3 ಕ್ವಿಂಟಲ್, ಎಂಆರ್-6 ರಾಗಿ ತಳಿಯು ಕಸಬಾ 8.60 ಕ್ವಿಂಟಲ್, ಬೂದಿಕೋಟೆ 12.20 ಕ್ವಿಂಟಾಲ್ ಹಾಗೂ ಕಾಂಸಮುದ್ರ 10.40 ಕ್ವಿಂಟಲ್ ರಾಗಿ ತಳಿಗಳನ್ನು ರೈತರು ಖರೀದಿ ಮಾಡಿ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮುಖ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯನ್ನು ರೈತರು ಮಳೆಯಾಶ್ರಿತವಾಗಿ ಬೆಳೆಯುತ್ತಿದ್ದಾರೆ.
ಕೃಷಿ ಇಲಾಖೆಯಲ್ಲಿ ಗುಣಮಟ್ಟ ಪರಿಶೀಲನೆ ಮಾಡಿರುವ ವಿವಿಧ ತಳಿಗಳ ರಾಗಿ ಬಿತ್ತನೆ ಬೀಜದ ಜೊತೆಗೆ ರೈತರು ಕಳೆದ ವರ್ಷ ಬೆಳೆದಿರುವ ಉತ್ತಮ ರಾಗಿ ಬೆಳೆಯಲ್ಲಿ ಬೆಳೆ ದಿರುವ ರಾಗಿಯನ್ನೇ ಈ ಬಾರಿಯ ಬಿತ್ತನೆಗೆ ಉಪಯೋಗಿಸಿದ್ದಾರೆ. ಕಳೆದ ವರ್ಷ ತಾಲೂಕಿನ ಮೂರು ಹೋಬಳಿಗಳು ಸೇರಿ ಒಟ್ಟು 10350 ಹೆಕ್ಟೇರ್ ಭೂ ಪ್ರದೇಶದಲ್ಲಿ ರಾಗಿ ಬೆಳೆಯನ್ನು ಬೆಳೆದಿದ್ದು, ಈ ವರ್ಷದಲ್ಲಿ ರಾಗಿ ಮಾರಾಟವು ಒಟ್ಟು 61469 ಕ್ವಿಂಟಾಲ್ ರಾಗಿಯನ್ನು ಸರ್ಕಾರಕ್ಕೆ ಮಾರಾಟ ಮಾಡಿದ್ದಾರೆ. ನಿರ್ದಿಷ್ಠ ಪ್ರಕೃತಿ ವಿಕೋಪಗಳಾದ ಹೆಚ್ಚಿನ ಮಳೆ, ನೆರೆ, ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶದ ಕೊರತೆ ಹಾಗೂ ತೀವ್ರ ಬರಗಾಲ ಇವುಗಳಿಂದ ಉಂಟಾಗುವ ನಷ್ಠದ ನಿರ್ಧಾರದಿಂದ ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಠ ಪರಿಹಾರವನ್ನು ಇತ್ಯಾರ್ಥಪಡಿಸಲು ಸರ್ಕಾರವು ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.25ರಷ್ಟು ಬೆಳೆ ವಿಮಾ ಪರಿಹಾರ ನೀಡಲು ಹಾಗೆಯೇ ಬೆಳೆ ಕಟಾವು ಸಂದರ್ಭದಲ್ಲಿ ವಿಫಲಗೊಂಡಲ್ಲಿ ಶೇ.25ಪರಿಹಾರ ನೀಡಲು ವಿಮೆಯನ್ನು ಎಲ್ಲಾ ರೈತರು ಮಾಡಿಸಬೇಕಾಗಿದ್ದರೂ ಯಾವುದೇ ರೈತರು ತಲೆಕೆಡಿಸಿಕೊಂಡಿಲ್ಲದೇ ಇದ್ದುದರಿಂದ ತಾಲೂಕಿಗೆ ವಿಮೆ ಕಟ್ಟಿರುವ 2154 ರೈತರಿಗೆ ಒಟ್ಟು 93 ಲಕ್ಷ ವಿಮೆ ಪರಿಹಾರ ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಬಂದಿದೆ.
2023-24ನೇ ವರ್ಷದಲ್ಲಿ ಸಕಾಲದಲ್ಲಿ ಮಳೆ ಬರುವ ಸಾಧ್ಯತೆಯನ್ನು ಕಾಣದೇ ಇದ್ದರೂ ಸಹ ಸಕಾಲದಲ್ಲಿ ರೈತರಿಗೆ ವಿವಿಧ ತಳಿಯ ರಾಗಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ರೈತರು ಒಟ್ಟು 2784 ಹೆಕ್ಟೇರ್‌ಗಳಲ್ಲಿ ಜಮೀನಿನಲ್ಲಿ ವಿವಿಧ ತಳಿಯ ರಾಗೀ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಆಕಸ್ಮಿಕವಾಗಿ ಬರಗಾಲ ಎದುರಾದರೆ ಪರಿಹಾರವಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ ವಿಮೆ ಯೋಜನೆಯಡಿ ವಿಮೆ ಮಾಡಿಸುವಂತೆ ಮನವಿ ಮಾಡಿದರೂ ರೈತರು ಮುಂದೆ ಬರಲಿಲ್ಲ. 2784 ಹೆಕ್ಟೇರ್ ಭೂ ಪ್ರದೇಶದಲ್ಲಿ ರಾಗಿ ಬೆಳೆಸಿದರೂ ರೈತರು ಕೇವಲ 884.74 ಹೆಕ್ಟೇರ್‌ಗೆ ಮಾತ್ರ ವಿಮೆ ಮಾಡಿಸಿದ್ದರಿಂದ ಇವರಿಗೆ ಮಾತ್ರ ವಿಮೆ ಮೊತ್ತದ 25% ಪರಿಹಾರ ಬಂದಿದೆ.
ರಾಜ್ಯ ಸರ್ಕಾರದ ಬರಗಾಲ ಪರಿಹಾರವಾಗಿ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸೇರಿ ಪ್ರೂಟ್ ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ವರದಿಯನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ನಂತರ ಪರಿಹಾರ ಸಿಗಬಹುದು. ●ಎನ್.ನಾರಾಯಣರೆಡ್ಡಿ, ಕೃಷಿ ಅಧಿಕಾರಿ, ಕಸಬಾ ಹೋಬಳಿ
-ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.