ರಾಜಕಾಲುವೆ, ಕೆರೆಕಟ್ಟೆ, ಕೋಡಿ ದುರಸ್ತಿ ಮಾಡಿ
ಸೋಮಾಂಬುಧಿ ಅಗ್ರಹಾರ ಕೆರೆಗೆ ಸ್ವೀಕರ್ ರಮೇಶ್‌ಕುಮಾರ್ ಭೇಟಿ • ಜಾಲಿ, ಒತ್ತುವರಿ ತೆರವಿಗೆ ಸೂಚನೆ
Team Udayavani, Jun 23, 2019, 12:58 PM IST
ಕೋಲಾರ ತಾಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆಗೆ ಕೆ.ಸಿ. ವ್ಯಾಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಸ್ವೀಕರ್ ರಮೇಶ್‌ಕುಮಾರ್, ಕಟ್ಟೆ, ಕೋಡಿ ದುರಸ್ತಿ ಪರಿಶೀಲಿಸಿದರು.
ಕೋಲಾರ: ತಾಲೂಕಿನ ದೊಡ್ಡ ಕೆರೆಯಾಗಿರುವ ಸೋಮಾಂಬುಧಿ ಅಗ್ರಹಾರ ಕೆರೆಯ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ, ಕೆರೆಯ ಕೋಡಿ, ಕಟ್ಟೆ ದುರಸ್ತಿ ಕಾರ್ಯವನ್ನು ಶೀಘ್ರ ಮುಗಿಸಿ ಎಂದು ಕೆ.ಸಿ. ವ್ಯಾಲಿ ಕಾಮಗಾರಿ ವಹಿಸಿಕೊಂಡಿರುವ ಮೆಘಾ ಕನ್ಸ್ಟ್ರಕ್ಷನ್ ಕಂಪನಿ ಎಂಡಿಗೆ ಸ್ವೀಕರ್ ರಮೇಶ್‌ಕುಮಾರ್ ಸೂಚನೆ ನೀಡಿದರು.
ತಾಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆಗೆ ಶನಿವಾರ ಅಧಿಕಾರಿಗಳೊಂದಿಗೆ ಆಗಮಿಸಿದ್ದ ರಮೇಶ್‌ಕುಮಾರ್, ಈ ಕೆರೆಗೆ ನೀರು ಬಂದು ಹಲವು ವರ್ಷಗಳೇ ಉರುಳಿರುವುದರಿಂದ ಇದರ ಕೋಡಿ ಮತ್ತು ಕಟ್ಟೆ ದುರಸ್ತಿಗೆ ಕ್ರಮವಹಿಸಲು ಸೂಚಿಸಿದರು. ರಾಜಕಾಲುವೆಯನ್ನು ಇಂದೇ ಸರಿಪಡಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಿ, ನಂತರ ನೀರು ಹೆಚ್ಚಾದರೆ ಈ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿದರು. ರಾಜಕಾಲುವೆಯಲ್ಲಿ ಮರಳಿಗಾಗಿ 15 ಅಡಿ ಆಳದ ಗುಂಡಿಗಳನ್ನು ತೋಡಿರುವುದರಿಂದ ನೀರು ಹರಿಯದೇ ಅಲ್ಲೇ ನಿಲ್ಲುತ್ತಿದ್ದು, ಕೆರೆಯಂಗಳಕ್ಕೆ ಬರುತ್ತಿಲ್ಲ, ಇದನ್ನು ಮೊದಲು ಸರಿಪಡಿಸಲು ಸೂಚಿ ಸಿದ ಅವರು, ನಮ್ಮ ಕಡೆ ನೀರು ಬರಲು ಒಂದು ತಿಂಗಳು ತಡವಾದರೂ ಪರವಾಗಿಲ್ಲ, ಈ ಕೆರೆ ಭರ್ತಿ ಯಾದ ನಂತರ ಕೋಡಿ ಹರಿಯಲಿ, ಈ ದೊಡ್ಡ ಕೆರೆ ತುಂಬಿದರೆ ಈ ಭಾಗದ ಕನಿಷ್ಠ 10 ಕಿ.ಮೀ. ವ್ಯಾಪ್ತಿ ಯಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರ ಬದುಕು ಹಸನಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಾಲಿಗಿಡ ನಾಶ, ಒತ್ತುವರಿ ತೆರವು: ನೆರಳು, ಹಣ್ಣು ನೀಡಲ್ಲ, ಪ್ರಾಣಿಗಳಿಗೆ ಮೇವು ಆಗಲ್ಲ, ಇಂತಹ ದರಿದ್ರ ಜಾಲಿಯನ್ನು ಕೆರೆಗಳಿಗೆ ಯಾರು ತಂದು ಹಾಕಿದರೋ ಎಂದು ಬೇಸರ ವ್ಯಕ್ತಪಡಿಸಿದ ಅವರು, ಯಾರ ಅನು ಮತಿಯೂ ಬೇಕಾಗಿಲ್ಲ. ಜೆಸಿಬಿ ಮೂಲಕ ಒಂದು ಕಡೆ ಎಳೆದು ತಂದು ಬೆಂಕಿ ಹಾಕಿ ಸುಟ್ಟುಬಿಡಿ ಎಂದು ಸೂಚಿಸಿದರು.
ಕೆರೆಯ ಗಡಿ ಗುರುತಿಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಮತ್ತೆ ಒತ್ತುವರಿಯಾಗದಂತೆ ಟ್ರಂಚ್ ಹೊಡೆಯಲು ಸೂಚಿಸಿದರು.ಕೆರೆ ಅಭಿವೃದ್ಧಿ ಕಾಮ ಗಾರಿಗೆ ಸಂಬಂಧಿಸಿದಂತೆ ಯಾರ ಅನುಮತಿಯೂ ಅಗತ್ಯವಿಲ್ಲ, ಮೆಘಾ ಕನ್ಸ್ಟ್ರಕ್ಷನ್ ಕಂಪನಿ ಎಂಡಿ ಸುಭಾಷ್ ಅವರಿಗೆ ಯಾವುದೇ ಸಲಹೆ, ಸಹಕಾರ ಬೇಕಿದ್ದರೆ ಕೆ.ಸಿ. ವ್ಯಾಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ಸಹಕರಿಸುವರು ಎಂದರು.
ಕಾಮಗಾರಿಗೆ ಅನುಮತಿ ಅಗತ್ಯವಿಲ್ಲ, ನೀವೇ ಒಪ್ಪಿಗೆ ನೀಡಿ ಅನುದಾನ ನೀಡಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜಕಾಲುವೆ ದುರಸ್ತಿ: ಸ್ವೀಕರ್ ರಮೇಶ್‌ಕುಮಾರ್ ಸೂಚನೆಯಂತೆ ಜೆಸಿಬಿಗಳ ಮೂಲಕ ರಾಜಕಾಲುವೆ ಸರಿಪಡಿಸುತ್ತಿದ್ದಂತೆ ಕೆ.ಸಿ. ವ್ಯಾಲಿ ನೀರು ಅಗ್ರಹಾರ ಕೆರೆಯ ಕಟ್ಟೆ, ಕೋಡಿಯ ಕಡೆಗೆ ಹರಿದಾಗ ಅಲ್ಲಿದ್ದವರ ಸಂತಸಕ್ಕೆ ಪಾರವಿಲ್ಲದಾಯಿತು. ಈ ಸಂದರ್ಭದಲ್ಲಿ ಮೆಘಾ ಕನ್ಸ್ಟ್ರಕ್ಷನ್ ಕಂಪನಿ ಎಂಡಿ ಸುಭಾಷ್, ಕೆ.ಸಿ. ವ್ಯಾಲಿ ಎಇಇ ಕೃಷ್ಣಪ್ಪ, ಸಣ್ಣ ನೀರಾವರಿ ಎಇಇ ಬೈರಾ ರೆಡ್ಡಿ, ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಹನು ಮೇಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಾದ ಮಂಗಲ ಮಂಜುನಾಥ್, ಮುಖಂಡರಾದ ಭೂಪತಿ ಗೌಡ, ನಾಗಪ್ಪ, ಮಂಜು ನಾಥ್, ಸಾದೇಗೌಡ, ರಮೇಶ್, ಬೈರೇಗೌಡ, ರಾಜಪ್ಪ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.