ಗಡಿ ಕನ್ನಡ ಭವನಕ್ಕೆ ಡಿವಿಜಿ ಹೆಸರಿಡಲು ಮನವಿ
Team Udayavani, Apr 22, 2019, 4:56 PM IST
ಮುಳಬಾಗಿಲು: ನಗರದ ಡಿವಿಜಿ ರಂಗಮಂದಿರ ಕಟ್ಟಡವು ಈಗ ಗಡಿ ಕನ್ನಡ ಭವನವಾಗಿ ಪರಿವರ್ತನೆಯಾಗಿದೆ. ಅದಕ್ಕೆ ಡಿವಿಜಿ ಅವರ ಹೆಸರನ್ನೇ ನಾಮಕರಣ ಮಾಡಬೇಕು ಎಂದು ಕುರುಡುಮಲೆಯ ವಿದ್ಯಾರ್ಥಿ ಮುಖಂಡ ಅರವಿಂದ್ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 1887, ಮಾರ್ಚ್ 17 ರಂದು ಮುಳಬಾಗಿಲಿನಲ್ಲಿ ಜನಿಸಿದ ಡಿ.ವಿ.ಗುಂಡಪ್ಪ ಬದುಕಿನ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಬಹುಮುಖ ಪ್ರತಿಭಾವಂತರಾಗಿ ಕನ್ನಡ ಪತ್ರಿಕೋದ್ಯಮ ಪಿತಾಮಹರಾಗಿದ್ದರು.
ಅಂತಹ ಕನ್ನಡ ಸಾರಸ್ವತ ಲೋಕದ ದಾರ್ಶನಿಕ ಮಂಕುತಿಮ್ಮನಿಗೆ ಡಾಕ್ಟರೆಟ್‌ನೊಂದಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಸೇರಿದಂತೆ ನೂರಾರು ಪ್ರಶಸ್ತಿಗಳು ಒಲಿದಿವೆ. ಸಾರಸ್ವತ ಲೋಕದ ದಿಗ್ಗಜರಾದ ಡಿ.ವಿ.ಗುಂಡಪ್ಪ ಅವರ ನೆನಪಿಗಾಗಿ ಹಲವು ವರ್ಷಗಳ ಹಿಂದೆ ನಗರದಲ್ಲಿ ನಿರ್ಮಿಸಿದ್ದ ಡಿವಿಜಿ ರಂಗಮಂದಿರಕ್ಕಿದ್ದ ಹೆಸರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಮರೆಮಾಚುತ್ತಿದೆ. ಹೀಗಾಗಿ ಶೀಘ್ರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಗಡಿ ಕನ್ನಡ ಭವನಕ್ಕೆ ಡಿವಿಜಿ ರಂಗಮಂದಿರ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.