ಬಿಸಿಲಿನ ತಾಪದಲ್ಲೂ ನೆರಳಲ್ಲೇ ಉದ್ಯೋಗಾವಕಾಶ

ಗ್ರಾಮೀಣ ಮಹಿಳೆಯರಿಗೆ ಹುಣಸೆ ಬೀಜ ಬಿಡಿಸುವ ಕಾಯಕ

Team Udayavani, Apr 13, 2021, 4:40 PM IST

ಬಿಸಿಲಿನ ತಾಪದಲ್ಲೂ ನೆರಳಲ್ಲೇ ಉದ್ಯೋಗಾವಕಾಶ

ಕೋಲಾರ: ನಾನಿಲ್ಲದೇ ಅಡುಗೆಯೇ ಇಲ್ಲ ಎಂದು ಬೀಗುವ ಹುಣಸೆ ಪ್ರತಿ ವರ್ಷದ ಏಪ್ರಿಲ್‌, ಮೇತಿಂಗಳಲ್ಲಿ ಬಿಸಿಲಿನ ಬೇಗೆಗೆ ತತ್ತರಿಸುವ ಗ್ರಾಮೀಣ ಕಾರ್ಮಿಕರಿಗೆ ನೆರಳಲ್ಲಿ ಕುಳಿತು ಹಣ ಗಳಿಸಲು ಉದ್ಯೋಗಾವಕಾಶವನ್ನು ಒದಗಿಸಿಕೊಟ್ಟಿದೆ.

ಜಿಲ್ಲೆಯಾದ್ಯಂತ ಕಳೆದ ಒಂದೂವರೆ ತಿಂಗಳಿನಿಂದಹುಣಸೆ ಕಾಯಿಯನ್ನು ಮರದಿಂದ ಬಿಡಿಸಿ ಮನೆಗೆಸಾಗಿಸುವ ಕೆಲಸ ಮುಗಿದಿದ್ದು, ಇದೀಗ ಗ್ರಾಮೀಣಪ್ರದೇಶದಲ್ಲಿ ಆರಂಭವಾಗಿರುವ ಬೀಜ ಬಿಡಿಸಿ ಹಣ್ಣುಸಂಗ್ರಹಣೆಯ ಕೆಲಸ ನೂರಾರು ಮಹಿಳೆಯರಿಗೆತಾತ್ಕಾಲಿಕ ಉದ್ಯೋಗ ಒದಗಿಸಿಕೊಟ್ಟಿದೆ.

ಖಾಲಿ ಜಾಗದಲ್ಲಿ ಹುಣಸೆ ಗಿಡ: ದೈನಂದಿನ ಜೀವನದ ಅತಿ ಪ್ರಮುಖ ಅಡುಗೆ ಪದಾರ್ಥವಾದ ಹುಣಸೆಯನ್ನು ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದು, ರೈತರು ತಮ್ಮ ತೋಟಗಳ ಬದಿಗಳಲ್ಲಿ, ಮನೆಯ ಸುತ್ತಲಿನ ಖಾಲಿ ಜಾಗದಲ್ಲಿ ಹುಣಸೆ ಗಿಡಗಳನ್ನುನೆಡುತ್ತಿದ್ದರು. ಹತ್ತಾರು ದಶಕಗಳ ಹಿಂದೆ ರಸ್ತೆ ಇಕ್ಕೆಲಗಳಲ್ಲಿನೆರಳಿಗಾಗಿ ಹುಣಸೆ ಗಿಡಗಳನ್ನೇ ನೆಡಲಾಗಿತ್ತು. ಇತ್ತೀಚಿನವರ್ಷಗಳಲ್ಲಿ ಹುಣಸೆ ತೋಪುಗಳು ಕಡಿಮೆಯಾಗಿದೆ. ಆದರೂ, ಇಂದಿಗೂ ಕೂಡ ನಗರ ಸೇರಿದಂತೆ ಗ್ರಾಮೀಣಭಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಹುಣಸೆಯ ಬೃಹತ್‌ ಮರಗಳನ್ನು ಕಾಣಬಹುದು.

ಹುಣಸೆ ಮರದಿಂದ ರೈತರಿಗೆ ಲಾಭ: ಜಿಲ್ಲೆಯಲ್ಲಿಸುಮಾರು 4 ಸಾವಿರ ಹೆಕ್ಟೇರ್‌ಗೂ ಅ ಧಿಕ ಪ್ರದೇಶದಲ್ಲಿ ಹುಣಸೆ ಮರಗಳನ್ನು ಬೆಳೆಯಲಾಗುತ್ತಿದೆ. ಶ್ರೀನಿವಾಸ ಪುರದಲ್ಲಿ 1500 ಹೆಕ್ಟೇರ್‌ ಹಾಗೂ ಮುಳಬಾಗಲು1350 ಹೆಕ್ಟೇರ್‌ನಲ್ಲಿ ಹುಣಸೆ ಮರಹಳು ವ್ಯಾಪಿಸಿದೆ.ಕೋಲಾರ 500 ಹೆಕ್ಟೇರ್‌, ಬಂಗಾರಪೇಟೆಯಲ್ಲಿ 650 ಹಾಗೂ ಮಾಲೂರಿನಲ್ಲಿ ಅತಿ ಕಡಿಮೆ 30 ಹೆಕ್ಟೇರ್‌ನಲ್ಲಿಹುಣಸೆ ಮರಗಳನ್ನು ಬೆಳೆಯಲಾಗಿದೆ. ಹುಣಸೆ ಮರ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭ ತಂದುಕೊಡದಿದ್ದರೂ, ಪ್ರತಿ ವರ್ಷ ರೈತರ ಖರ್ಚಿಗೆ ಒಂದಷ್ಟು ಕಾಸು ಒದಗಿಸುತ್ತದೆ.

ಸರ್ಕಾರದ ಜಾಗದಲ್ಲಿನ ಹುಣಸೆ ಮರಗಳನ್ನು ಆಯಾ ಗ್ರಾಪಂ ಅಥವಾ ಸಂಬಂಧಪಟ್ಟ ಇಲಾಖೆಹರಾಜು ಹಾಕಿ ಹುಣಸೆಹಣ್ಣು ಮಾರಾಟ ಮಾಡಿದರೆ,ರೈತರ ತೋಪಿನಲ್ಲಿ ಬೆಳೆದ ಹುಣಸೆ ಫಸಲನ್ನುಮಧ್ಯವರ್ತಿಗಳು, ವ್ಯಾಪಾರಸ್ಥರು ಇಡೀ ತೋಪನ್ನೇ ಇಂತಿಷ್ಟು ಹಣಕ್ಕೆ ಖರೀದಿಸುತ್ತಾರೆ.

ಭೋಗ್ಯಕ್ಕೆ ಮಾರಾಟವಾಗುವುದೇ ಹೆಚ್ಚು: ಜಿಲ್ಲೆಯಲ್ಲಿಹುಣಸೆ ಫಸಲು ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿಬಳಸುವ ಇಳಿ ಭೋಗ್ಯಕ್ಕೆ ಮಾರಾಟವಾಗುತ್ತದೆ. ರೈತರುಒಟ್ಟಾರೆ ಮರಗಳ ಎರಡು-ಮೂರು ವರ್ಷಗಳಫಸಲನ್ನು ಒಂದೇ ಬಾರಿ ಮಾರಾಟ ಮಾಡುವುದುವಾಡಿಕೆ. ಆಂಧ್ರ ಪ್ರದೇಶ ಮತ್ತು ಚಿಂತಾಮಣಿ ಸುತ್ತಮುತ್ತಲ ಕೆಲವು ವ್ಯಾಪಾರಿಗಳು ಜಿಲ್ಲೆಯ ವಿವಿಧೆಡೆ ಹುಣಸೆ ಮರಗಳನ್ನು ಭೋಗ್ಯಕ್ಕೆ ಖರೀದಿಸಿ, ಫಸಲು ಕೊಯ್ಲು ಮಾಡಿಕೊಂಡು ಹೋಗುತ್ತಿರುವುದು ನಿರಂತರವಾಗಿ ಸಾಗಿ ಬರುತ್ತಿರುವ ಪದ್ಧತಿ.

ಮಹಿಳೆಯರಿಗೆ ಕೂಲಿ: ಹುಣಸೆ ಹಣ್ಣಿನ ಫಸಲು ಕೊಯ್ದ ನಂತರ ಮಾರುಕಟ್ಟೆಯಲ್ಲಿ ಮಾರಾಟಕ್ಕೂ ಮುನ್ನಹುಣಸೆ ಹಣ್ಣಿನಿಂದ ಬೀಜಗಳನ್ನು ತೆಗೆಯುವುದು ಬಹುದೊಡ್ಡ ಹಾಗೂ ತ್ರಾಸದ ಕೆಲಸ. ಈ ಕೆಲಸದಲ್ಲಿ ತೊಡಗುವವರು ಸಾಮಾನ್ಯವಾಗಿ ಮಹಿಳೆಯರೇ. ಸುಡು ಬೇಸಿಗೆಯಲ್ಲಿ ಹೊರಗಡೆ ಹೋಗಿ ಕೆಲಸಮಾಡುವುದು ಕೂಡ ಕಷ್ಟವೇ. ಇಂತಹ ಸಂದರ್ಭದಲ್ಲಿಒಂದೆಡೆ ನೆರಳಲ್ಲಿ ಕುಳಿತು ಹುಣಸೆ ಹಣ್ಣಿನಿಂದ ಬೀಜವನ್ನು ಬೇರ್ಪಡಿಸುವ ಕೆಲಸದಲ್ಲಿ ಮಹಿಳೆಯರು ತೊಡಗಿಕೊಳ್ಳುತ್ತಾರೆ. ತಾಲೂಕಿನ ಚಿಟ್ನಹಳ್ಳಿ, ವೆಲಗಲಬುರ್ರೆ, ಮಾರ್ಜೇನಹಳ್ಳಿ ಗ್ರಾಮಗಳಲ್ಲಿನ ಕೆಲ ಮನೆಗಳಲ್ಲಿ ಹುಣಸೆ ಹಣ್ಣಿನಿಂದ ಬೀಜ ಬಿಡಿಸುವ ಕಾರ್ಯ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದೆ.

ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಪಾದನೆ: ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೂಲಿ ಸಂಪಾದಿಸಬಹುದು. ಹುಣಸೆ ಹಣ್ಣಿಗೆ ಪ್ರತಿ ಕೆ.ಜಿಗೆ 110ರಿಂದ 150 ರೂ. ಬೆಲೆಗೆ ಮಾರಾಟವಾಗುತ್ತಿದೆ. ಬೀಜ ತೆಗೆದ ಒಂದು ಮಣ (15 ಕೆ.ಜಿ) ಹುಣಸೆ ಹಣ್ಣಿಗೆ 400 ರೂ. ನೀಡಲಾಗುತ್ತದೆ. ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳು ಕೂಡ ಈ ಕೆಲಸಲ್ಲಿತೊಡಗಿಸಿಕೊಂಡು ಪುಡಿಗಾಸು ಸಂಪಾದಿಸುತ್ತಾರೆ.ವೃದ್ಧರು ಕೂಡ ಈ ಕೆಲಸದಲ್ಲಿ ತೊಡಗಿಸಿಕೊಳ್ಳುವುದನ್ನು ಕಾಣಬಹುದು.

ಮಹಿಳೆಯರಿಗೆ ತಾತ್ಕಾಲಿಕ ಉದ್ಯೋಗ: ಓರ್ವಮಹಿಳೆ ದಿನಕ್ಕೆ 40ರಿಂದ 60 ಕೆ.ಜಿ. ಹುಣಸೆ ಹಣ್ಣಿನಿಂದಬೀಜ ಬಿಡಿಸಬಲ್ಲರು. ಎಷ್ಟು ಕೆ.ಜಿ. ಹುಣಸೆ ಹಣ್ಣುಬಿಡಿಸುತ್ತಾರೋ ಅಷ್ಟು ಕೂಲಿ. ಗ್ರಾಮೀಣಮಹಿಳೆಯರಿಗೆ ಸುಮಾರು ಎರಡು ತಿಂಗಳ ಮಟ್ಟಿಗೆಬಿಸಿಲಿಗೆ ದಣಿಯದೆ ಮನೆಯ ಮುಂಭಾಗದಲ್ಲಿನ ಶೆಡ್‌ಗಳಲ್ಲಿ ಒಟ್ಟಾಗಿ ಕುಳಿತು ಹರಟೆ ಹೋಡೆಯುತ್ತಾ,ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಹುಣಸೆ ಹಣ್ಣು ಬಿಡಿಸುವ ಕಾಯಕದಲ್ಲಿ ತಲ್ಲಿನರಾಗುತ್ತಾರೆ. ಒಟ್ಟಿನಲ್ಲಿಎರಡು ತಿಂಗಳ ಮಟ್ಟಿಗೆ ಗ್ರಾಮೀಣ ಮಹಿಳೆಯರಿಗೆ ತಾತ್ಕಾಲಿಕ ಉದ್ಯೋಗ ಸಿಗುತ್ತದೆ ಅಷ್ಟೇ.

ವರ್ಷ ಬಿಟ್ಟು ವರ್ಷ ಉತ್ತಮ ಫಸಲು: ಸಾಮಾನ್ಯವಾಗಿ 1 ವರ್ಷ ಬಿಟ್ಟು ಮತ್ತೂಂದು ವರ್ಷಹುಣಸೆಹಣ್ಣು ಉತ್ತಮ ಫಸಲು ಸಿಗುತ್ತದೆ. ಈ ವರ್ಷ ಉತ್ತಮ ಫಸಲು ಸಿಕ್ಕಿತ್ತು. ಹಿಂದೆ 8-10 ಮಂದಿಹುಣಸೆ ಹಣ್ಣು ವ್ಯಾಪಾರ ಮಾಡುತ್ತಿದ್ದರು. ಈಗಗ್ರಾಮದಲ್ಲಿ 4-5 ಮಂದಿಯಷ್ಟೇ ಈ ಕೆಲಸದಲ್ಲಿತೊಡಗಿದ್ದಾರೆ. ಇತ್ತೀಚೆಗೆ ಹುಣಸೆ ಮರಗಳು ಕೂಡಕಡಿಮೆ ಆಗಿದೆ ಎನ್ನುತ್ತಾರೆ ಹುಣಸೆ ಹಣ್ಣು ವ್ಯಾಪಾರಮಾಡುತ್ತಿರುವ ನಾಗರಾಜಪ್ಪ.

ಹುಣಸೆ ಹಣ್ಣಿನಿಂದ ಬೀಜ ಬಿಡಿಸಿದ ಹಣ್ಣನ್ನುಚೆನ್ನೈಗೆ ಮಾರಾಟ ಮಾಡಲಾಗುತ್ತದೆ. ಒಂದು ಬಂಡಿಗೆ(560 ಕೆ.ಜಿ) 60 ಸಾವಿರ ರೂ.ನಿಂದ 80 ಸಾವಿರ ರೂ.ಗೆ ಮಾರಾಟ ಮಾಡುತ್ತಿರುವುದಾಗಿ ಹೇಳುತ್ತಾರೆ. ಕಳೆದಮೂರು ದಶಕಗಳಿಂದ ಇದೇ ವ್ಯಾಪಾರ ನಡೆಸುತ್ತಿರುವನಾಗರಾಜಪ್ಪ, ಹೆಣ್ಣು ಮಕ್ಕಳು ಕೂಡ ತೋಟದ ಕೆಲಸಕ್ಕೆಹೋಗುತ್ತಿರುವುದರಿಂದ ಕೂಲಿ ಕೆಲಸದವರು ಸಿಗುವುದು ಕಷ್ಟ ಎನ್ನುತ್ತಾರೆ ಇವರು.

ಕೋಲಾರ ಜಿಲ್ಲೆಯಲ್ಲಿ ಹೆಚ್ಚು ಹುಣಿಸೇವ್ಯಾಪಾರ ನಡೆಯುತ್ತದೆ. ಆದರೆ, ಇತ್ತೀಚಿನದಿನಗಳಲಿ ಹುಣಿಸೆಯನ್ನು ಮರದಿಂದಉದುರಿಸುವವರು ಹಾಗೂ ಉದುರಿಸಿದ ನಂತರಹಣ್ಣನ್ನು ಬೀಜದಿಂದ ಬೇರ್ಪಡಿಸಲು ಕೂಲಿಕಾರ್ಮಿಕರ ಕೊರತೆ ಇದೆ. ಆದ್ದರಿಂದಗೃಹಿಣಿಯರನ್ನು ಬೀಜ ಬಿಡಿಸುವ ಕೆಲಸಕ್ಕೆ ಹೆಚ್ಚು ಅವಲಂಬಿಸಲಾಗಿದೆ. -ರವಿ, ಹುಣಿಸೆ ವ್ಯಾಪಾರಿ, ಸುಗಟೂರು

ಕೊಂಚ ವಯಸ್ಸಾದ ಮೇಲೆ ಬೇಸಿಗೆ ಬಿಸಿಲಿನಲ್ಲಿ ಇಡೀ ದಿನನಿಂತು ಕೆಲಸ ಮಾಡಲು ಕಷ್ಟ. ಇಂತಹ ಸಂದರ್ಭದಲ್ಲಿ ನೆರಳಿನಲ್ಲಿಯೇಕುಳಿತು ಹುಣಿಸೆ ಹಣ್ಣನ್ನು ಬೀಜದಿಂದಬೇರ್ಪಡಿಸುವ ಕೆಲಸ ಮಾಡಿ, ದಿನಗೂಲಿಯನ್ನು ಕೆಲಸಕ್ಕೆ ತಕ್ಕಂತೆ ಸಂಪಾದಿಸಲು ಅನುಕೂಲವಾಗಿದೆ. -ಸಾವಿತ್ರಮ್ಮ, ಚಿಟ್ನಹಳ್ಳಿ

 

-ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.