20 ವರ್ಷನಂತರ ಎಸ್.ಅಗ್ರಹಾರ ಕೆರೆ ಕೋಡಿ
Team Udayavani, Sep 11, 2020, 2:28 PM IST
ಕೋಲಾರ ತಾಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆಯು ಗುರುವಾರ ಪೂರ್ಣಪ್ರಮಾಣದಲ್ಲಿ ಕೋಡಿ ಹರಿಯುತ್ತಿದ್ದು, ನೂರಾರು ಮಂದಿಯನ್ನು ಸೆಳೆಯ್ತುದೆ
ಕೋಲಾರ: ಜಿಲ್ಲೆಯ ಅತಿ ದೊಡ್ಡ ಕೆರೆ ತಾಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆಯು ಬರೋಬ್ಬರಿ ಇಪ್ಪತ್ತು ವರ್ಷಗಳ ನಂತರ ಬುಧವಾರ ಸಂಜೆಯಿಂದ ಕೋಡಿ ಹರಿಯಲು ಆರಂಭಿಸಿದ್ದು, ಸುತ್ತಮುತ್ತಲ ಗ್ರಾಮಸ್ಥರ ಸಂತಸಕ್ಕೆ ಪಾರವಿಲ್ಲದಂತಾಗಿದೆ. ನಂದಿ ಬೆಟ್ಟದಲ್ಲಿ ಹುಟ್ಟಿ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳ ಮೂಲಕಹರಿದು ತಮಿಳುನಾಡುಸೇರುವ ಪಾಲಾರ್ ನದಿ ಹರಿಯುವ ಸಾಲಿನಲ್ಲಿಯೇ ಸೋಮಾಂಬುಧಿ ಅಗ್ರಹಾರ ಕೆರೆಯನ್ನು ಅತಿ ದೊಡ್ಡ ಕೆರೆಯೆಂದು ಗುರುತಿಸಲಾಗಿದೆ.
ಗ್ರಾಮಸ್ಥರ ನಿರೀಕ್ಷೆ: ಈ ಕೆರೆಯು ಸುಮಾರು 1 ಸಾವಿರ ಹೆಕ್ಟೇರ್ ಅಂಗಳ ಹೊಂದಿದ್ದು, ಎರಡು ದಶಕಗಳಿಂದ ಕೆರೆ ತುಂಬಿಯೇ ಇರಲಿಲ್ಲ. ಕೆಲವು ತಿಂಗಳುಗಳ ಹಿಂದಷ್ಟೇ ಕೆ.ಸಿ.ವ್ಯಾಲಿ ನೀರು ಎಸ್. ಅಗ್ರಹಾರ ಕೆರೆಗೆ ಹರಿದು ಬರುವ ಮೂಲಕ ಕೆರೆ ಅಂಗಳದಲ್ಲಿ ನೀರು ತುಂಬಿ ಸಾಗರದಂತೆ ಭಾಸ ವಾಗುತ್ತಿತ್ತು. ಕೆ.ಸಿ.ವ್ಯಾಲಿ ನೀರಿನಲ್ಲಿಯೇ ಕೆರೆ ಕೋಡಿ ಹರಿಯುತ್ತದೆ ಎಂದು ಗ್ರಾಮಸ್ಥರು ನಿರೀಕ್ಷಿ ಸುತ್ತಿದ್ದರು. ಆದರೆ, ಅಧಿಕಾರಿಗಳು ಮುಂದಿನ ಕೆರೆ ತುಂಬಿಸುವ ಕಾರಣದಿಂದ ಕೆರೆ ತೂಬನ್ನು ತೆರೆದಿದ್ದರು.ಇತ್ತೀಚೆಗೆಜಿಲ್ಲೆಯಲ್ಲಿಸುರಿಯುತ್ತಿರುವ ಮಳೆ ನೀರಿನಿಂದ ತೂಬು ತೆರೆದಿದ್ದರೂ ಎಸ್. ಅಗ್ರಹಾರ ಕೆರೆ ತುಂಬಿದ್ದು, ಬುಧವಾರ ಸಂಜೆ ಅಲೆಗಳು ಕೋಡಿ ಮೂಲಕ ಹೊರಚೆಲ್ಲುವ ದೃಶ್ಯ ಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು.
ಜಾತ್ರೆಯಂತೆ ಸಂಭ್ರಮ: ಗುರುವಾರ ಪೂರ್ಣ ಪ್ರಮಾಣದಲ್ಲಿ ಕೋಡಿ ಹರಿಯಲು ಶುರುವಿಟ್ಟು ಕೊಂಡಿದ್ದು, ಸುತ್ತಮುತ್ತಲ ಗ್ರಾಮಸ್ಥರು, ಕೋಲಾರ ನಗರದಿಂದಲೂ ನೂರಾರು ಮಂದಿ ಎಸ್.ಅಗ್ರ ಹಾರ ಕೆರೆ ಕೋಡಿ ಹರಿಯುವ ದೃಶ್ಯ ನೋಡಿ, ಸೆಲ್ಫಿ ಕ್ಲಿಕ್ಕಿಸಿ ಕೊಂಡು, ನೀರಿನ ಕಟ್ಟೆಯ ಮೇಲೆ ನಡೆ ದಾಡುತ್ತಾ, ಕೋಡಿಯ ನೀರಿನಲ್ಲಿ ಮುಳುಗಿ ಸಂತಸ ಪಡುತ್ತಿದ್ದ ದೃಶ್ಯಗಳು ಇಡೀ ದಿನ ಕಾಣಿಸಿಕೊಂಡಿತು. ಸದಾ ಬರಗಾಲ ಪೀಡಿತ ಜಿಲ್ಲೆಯಲ್ಲಿ ಇಂತದ್ದೊಂದು ದೃಶ್ಯ ಅಪರೂಪವಾ ಗಿರುವುದರಿಂದ ಜನತೆ ಕೋಡಿ ಕಣ್ತುಂಬಿಕೊಂಡು ಸಂತಸಪಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.