ವಿಶ್ವದಲ್ಲಿ ಸನಾತನ ಹಿಂದೂ ಧರ್ಮ ಅತಿ ಶ್ರೇಷ್ಠ; ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ

ಶಾರದಾ ಪೀಠವನ್ನು ಯಾವುದೇ ಕಾರಣಕ್ಕೆ ಶೃಂಗೇರಿ ಮೂಲ ಶಾರದಾ ಪೀಠಕ್ಕೆ ವಿಲೀನಗೊಳಿಸಿಕೊಳ್ಳುವುದಿಲ್ಲ

Team Udayavani, Jun 11, 2022, 5:59 PM IST

ವಿಶ್ವದಲ್ಲಿ ಸನಾತನ ಹಿಂದೂ ಧರ್ಮ ಅತಿ ಶ್ರೇಷ್ಠ; ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ

ಮುಳಬಾಗಿಲು: ವಿಶ್ವದಲ್ಲಿ ಹಿಂದೂ ಧರ್ಮ ಅತಿಶ್ರೇಷ್ಠ ಧರ್ಮವಾಗಿದ್ದು ಶಂಕರಾಚಾರ್ಯರು ಭಾರತದಲ್ಲಿ ಹಿಂದೂ ಧರ್ಮಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟಿದ್ದಾರೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಶೃಂಗೇರಿ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಆವನಿಕ್ಷೇತ್ರದ ಶೃಂಗೇರಿ ಮಠದ ನೂತನ ಪೀಠಾಧಿಪತಿ ಶ್ರೀ ಶಾಂತಾನಂದ ಭಾರತೀ ಸ್ವಾಮೀಜಿಗಳ ಪೀಠಾರೋಹಣ ಸಮಾರಂಭದಲ್ಲಿ ಮಾತನಾಡಿದರು, ಸನಾತನ ಹಿಂದೂ ಧರ್ಮದ ಪುನರುತ್ಥಾನ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಂಕರಾಚಾರ್ಯರು ತನ್ನ 32 ವರ್ಷಗಳ ಜೀವಿತಾವದಿಯಲ್ಲಿಯೇ ವೇದ, ಉಪನಿಷತ್‌, ಭಗವದ್ಗೀತೆ ಮುಂತಾದ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಬರೆದ ಮೊದಲಿಗರಾಗಿದ್ದು, ವೈದಿಕ ದರ್ಮದ ಪ್ರಚಾರಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ 4 ಮಠಗಳನ್ನು ನಿರ್ಮಿಸಿದ್ದರು.

ಅಂತೆಯೇ ದಕ್ಷಿಣದಲ್ಲಿ ಕರ್ನಾಟಕದ ಶೃಂಗೇರಿ ಶಾರದಾ ಪೀಠ, ಪಶ್ಚಿಮದಲ್ಲಿ ಗುಜರಾತ್‌ ರಾಜ್ಯದಲ್ಲಿ ದ್ವಾರಕೀಶ ಮಠ, ಪೂರ್ವದಲ್ಲಿ ಒಡಿಶಾದ ಪುರಿಯಲ್ಲಿ ಗೋವರ್ದನ ಮಠ, ಉತ್ತರದಲ್ಲಿ ಉತ್ತರಾಖಂಡದಲ್ಲಿ ಶ್ರೀಕಂಠ ಮಠ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದು ಧರ್ಮ ಪ್ರಚಾರದಲ್ಲಿ ತೊಡಗಿದ್ದು ಮಾದರಿಯಾಗಿದೆ ಎಂದು ಹೇಳಿದರು.

ಧರ್ಮದ ರಕ್ಷಣೆಯಿಂದ ಏಳಿಗೆ: ನಾವು ಸುಖ ಶಾಂತಿ, ಸಂತೋಷದಿಂದ ಇರಬೇಕಾದರೆ ಧರ್ಮ ಚೆನ್ನಾಗಿರಬೇಕು. ನಾವು ಆಯಾ ದರ್ಮಗಳನ್ನು ಅನುಷ್ಠಾನ ಮಾಡಿದರೆ ಆಗ ಅದನ್ನು ರಕ್ಷಣೆ ಮಾಡಿದ ಹಾಗೆ, ಇಲ್ಲಿ ಧರ್ಮ ರಕ್ಷಣೆ ಅಂದರೆ ಕುರಿ ಕಾಯುವವನು ಕುರಿಗಳನ್ನು ರಕ್ಷಣೆ ಮಾಡಿದ ಹಾಗೆ ಅಲ್ಲ, ಪ್ರಾಚೀನ ಕಾಲದಿಂದ ಯಾವ ಆಚರಣೆಗಳು, ಸಂಪ್ರದಾಯಗಳು ಬಂದಿವೆಯೋ ಅವುಗಳನ್ನು ಅಕ್ಷರಃ ಅದೇ ರೀತಿಯಲ್ಲಿ ಪರಿಪಾಲನೆ ಮಾಡುವುದೇ ಧರ್ಮ ರಕ್ಷಣೆ, ಇಂತಹ ಧರ್ಮವು ನಮ್ಮಿಂದ ಅನುಷ್ಠಾನಿಸಲ್ಪಡುತ್ತದೆಯೋ ಆಗ ಪ್ರಪಂಚವೆಲ್ಲಾ ಚೆನ್ನಾಗಿರುತ್ತದೆ ಎಂದರು.

ಪ್ರಪಂಚದ ಆದಾರ ಧರ್ಮವಾಗಿದ್ದು, ಇಂತಹ ಧರ್ಮದ ರಕ್ಷಣೆಗಾಗಿ ಭಗವಂತ ಅನೇಕ ಅವತಾರಗಳನ್ನು ಎತ್ತಿ ಧರ್ಮವನ್ನು ಉದ್ದಾರ ಮಾಡಿದ್ದು, ಅಂತೆಯೇ ಈ ಕಲಿಯುಗದಲ್ಲಿ ಜಗದ್ಗುರು ಶಂಕರಾಚಾರ್ಯರ ರೂಪದಲ್ಲಿ ಅವತರಿಸಿ ಈ ಧರ್ಮವನ್ನು ಪುನರುತ್ಥಾನ ಮಾಡಿದ್ದಾರೆ ಎಂದರು.

ಗುರುಗಳ ಮಾರ್ಗದಲ್ಲಿ ಪಯಣ: ನೂತನವಾಗಿ ಪಟಾuಭಿಷಿಕ್ತರಾದ ಶ್ರೀ ಶಾಂತಾನಂದ ಭಾರತೀ ಸ್ವಾಮೀಜಿಗಳು ಮಾತನಾಡಿ, ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳ ಪರಮಾನು ಗ್ರಹದಿಂದ ತಮ್ಮ ಪಟ್ಟಾಭಿಷೇಕ ನಡೆದಿದ್ದು, ಇದಕ್ಕೆ ತಾವು ಎಷ್ಟೇ ಕೃತಜ್ಞತೆ ತೋರಿಸಿದರೂ ಸಾಲದು, ತಾವು ಈಗಾಗಲೇ 2018ರಲ್ಲಿ ಶೃಂಗೇರಿ ಮಠದಲ್ಲಿ ಮಹಾ ಸ್ವಾಮೀಜಿಗಳಿಂದ ಸನ್ಯಾಸ ದೀಕ್ಷೆ ಪಡೆದಿದ್ದು, ಶೃಂಗೇರಿ ಮಠದ ಜಗದ್ಗುರು ಭಾರತಿ ತೀರ್ಥ ಮಹಾಸ್ವಾಮಿ ಹಾಗೂ ಜಗದ್ಗುರು ವಿಧುಶೇಖರ ಭಾರತಿ ಮಹಾಸ್ವಾಮಿಗಳ ಆಶೀರ್ವಾದಗಳೊಂದಿಗೆ ಹಾಗೂ ಮಾರ್ಗದರ್ಶನದೊಂದಿಗೆ ಆವನಿಮಠದ ಪೀಠಾಧಿಪತಿಗಳಾಗಿ ಜವಾಬ್ದಾರಿಯನ್ನು ಪಡೆದು ಕೊಂಡಿದ್ದು ಉಭಯ ಗುರುಗಳ ನಿರ್ದೇಶನದಂತೆ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಗೌರಿಶಂಕರ್‌, ನಿವೃತ್ತ ನ್ಯಾಯಾಧೀಶ ಎನ್‌. ಕುಮಾರ್‌, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಸಚ್ಚಿದಾನಂದಮೂರ್ತಿ, ಜಿಲ್ಲಾ ರಕ್ಷಣಾಧಿಕಾರಿ ದೇವರಾಜ್‌, ಡಿ.ವೈ.ಎಸ್‌.ಪಿ ಟಿ.ಆರ್‌. ಜೈಶಂಕರ್‌, ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಎಂ.ಕೆ. ಶ್ರೀನಿವಾಸ್‌, ಕಾರ್ಯದರ್ಶಿ ಎಚ್‌.ಎಸ್‌. ಹರೀಶ್‌, ಖಜಾಂಚಿ ಬೆಸ್ಕಾಂ ಸತ್ಯನಾರಾಯಣ, ಮಂಜುನಾಥ ಶರ್ಮ ಇತರರಿದ್ದರು.

ಮೂಲ ಮಠಕ್ಕೆ ಸೇರಿಸಿಕೊಳ್ಳುವುದಿಲ್ಲ
ಆವನಿ ಶೃಂಗೇರಿ ಶಾರದಾ ಪೀಠವನ್ನು ಯಾವುದೇ ಕಾರಣಕ್ಕೆ ಶೃಂಗೇರಿ ಮೂಲ ಶಾರದಾ ಪೀಠಕ್ಕೆ ವಿಲೀನಗೊಳಿಸಿಕೊಳ್ಳುವುದಿಲ್ಲ, ಕೇವಲ ಶಾಖಾ ಮಠಗಳಲ್ಲಿ ಸಂದಿಗ್ಧ ಪರಿಸ್ಥಿತಿ ಉಂಟಾದಾಗ ಮಾತ್ರ ನಾವು ಭಾಗವಹಿಸಿ ಆಯಾ ಮಠದ ಸಮಸ್ಯೆಗಳ ನಿವಾರಣೆಗೆ ಹಾಗೂ ಮಠದ ಮುಂದಿನ ಅಭಿವೃದ್ಧಿಗೆ ಅಗತ್ಯ ಸಲಹೆಗಳನ್ನು ನೀಡುವ ಕಾರ್ಯಗಳನ್ನು ಕೈಗೊಳ್ಳುತ್ತೇವೆಯೇ ವಿನಃ ಆ ಮಠವನ್ನು ಶೃಂಗೇರಿ ಶಾರದಾ ಮೂಲ ಮಠಕ್ಕೆ ಸೇರಿಸುವುದಿಲ್ಲ. ಈ ಮಠದ ಒಂದು ಹುಲ್ಲು ಕಡ್ಡಿಯನ್ನು ನಾವು ವಶಪಡಿಸಿಕೊಳ್ಳು ವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಶೃಂಗೇರಿ ಶಾರದ ಪೀಠದಲ್ಲಿ ಯಾವ ಯಾವ ಕಾಲಕ್ಕೆ ಏನೇನು ಧರ್ಮ ಕಾರ್ಯಗಳು ನಡೆಯಲಿದೆಯೋ ಅದೇ ರೀತಿಯಲ್ಲಿ ಆವನಿ ಶೃಂಗೇರಿ ಶಾರದಾ ಪೀಠದಲ್ಲಿಯೂ ನೂತನವಾಗಿ ಪೀಠಾರೋಹಣ ಮಾಡಿದ ಶ್ರೀಶಾಂತಾನಂದ ಭಾರತೀ ಶ್ರೀಗಳು ಮುಂದೆಯೂ ಸಹ ಶಂಕರಾಚಾರ್ಯರ ಮೂಲ ತತ್ವಗಳ ಆದಾರದ ಮೇಲೆ ಮುನ್ನೆಡೆಯುವ ಮೂಲಕ ಸನಾತನ ಹಿಂದೂ ಧರ್ಮಧ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲಿದ್ದಾರೆ. ಮಠದ ಭಕ್ತರು ಎಂದಿನಂತೆ ಸಹಕಾರ ನೀಡಬೇಕು ಎಂದರು.

ಟಾಪ್ ನ್ಯೂಸ್

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.