ಕೋವಿಡ್ 19 ಭೀತಿ ನಡುವೆ ಶಾಲಾರಂಭ
Team Udayavani, Jun 15, 2020, 7:29 AM IST
ಕೋಲಾರ: ಕೋವಿಡ್ 19 ಸಂಕಷ್ಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ಮಾರ್ಗಸೂಚಿಯಂತೆ ಶಾಲೆ ಆರಂಭಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದ್ದು, ಪೋಷಕರು ಸಹಕಾರ ನೀಡಬೇಕು ಎಂದು ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಮನವಿ ಮಾಡಿದರು. ಸರ್ಕಾರ ಶಾಲೆ ಆರಂಭಕ್ಕೆ ಹಲವು ಮಾರ್ಗಸೂಚಿ ನೀಡಿದೆ, ಎಂದಿನಂತೆ ಶಾಲೆ ನಡೆಸುವುದು, ಪಾಳಿ ಪದತಿ, ದಿನಬಿಟ್ಟು ಶಾಲೆ ನಡೆಸುವುದು ಎಂದು ತಿಳಿಸಿದರು.
ಆದರೆ, ನಮ್ಮ ಶಾಲೆಯಲ್ಲಿ ಹೆಚ್ಚಿನ ಕೊಠಡಿಗಳ ಲಭ್ಯತೆ ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗಲಾರದು, ಆದ್ದರಿಂದ ಶಾಲೆಯನ್ನು ಎಂದಿನಂತೆಯೇ ಬೆಳಗ್ಗೆ 10-20 ರಿಂದ ಸಂಜೆ 4-20 ರವರೆಗೂ ನಡೆಸಲು ಅಡ್ಡಿಯಿಲ್ಲ ಎಂದು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮುನಿಯಪ್ಪ, ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮಕ್ಕಳು ಮನೆಯಿಂದಲೇ ಕುಡಿಯುವ ನೀರು, ಊಟ ತರುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಆನ್‌ಲೈನ್ ಕ್ಲಾಸ್‌ಗೆ ಗಮನಹರಿಸಿ: ಈಗಾಗಲೇ ಶಾಲೆಯ 9 ಮತ್ತು 10ನೇ ತರಗತಿಗೆ ಹೋಗಲಿರುವ ಮಕ್ಕಳಿಗೆ ಆನ್‌ಲೆ„ನ್ ತರಗತಿಯನ್ನು ಮಣಿಪಾಲ್ ಫೌಂಡೇಷನ್ ಅವರು ಆರಂಭಿಸಿದ್ದಾರೆ, ಮಕ್ಕಳಿಗೆ ಪೋಷಕರು ಆದಷ್ಟು ಮೊಬೈಲ್ ಒದಗಿಸಿಕೊಡಿ ಎಂದು ಮನವಿ ಮಾಡಲಾಯಿತು. ಆನ್‌ಲೈನ್ ತರಗತಿಯೇ ಅಂತಿಮವಲ್ಲ, ಶಾಲೆಗಳು ಆರಂಭಗೊಂಡ ಮೇಲೆ ಪಠ್ಯಕ್ರಮವನ್ನು ಶಿಕ್ಷಕರು ಮುಗಿಸುತ್ತಾರೆ ಆದರೆ, ಮನೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲಿಗೆ ಮುಂದಿನ ತರಗತಿಯ ಪಾಠಗಳನ್ನು ಆನ್‌ಲೈನ್‌ನಲ್ಲಿ ಗಮನಿಸಿದರೆ ಒಳಿತು ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.