ಕೋಲಾರ ಎಪಿಎಂಸಿಗೆ ಭದ್ರತೆ ಕಲ್ಪಿಸಿ
ಎಸ್ಪಿ ರೋಹಿಣಿಗೆ ರೈತ ಸಂಘದ ಕಾರ್ಯಕರ್ತರಿಗೆ ಮನವಿ ಸಲ್ಲಿಕೆ
Team Udayavani, May 12, 2019, 11:27 AM IST
ಎಸ್ಪಿ ರೋಹಿಣಿಗೆ ರೈತ ಸಂಘದ ಕಾರ್ಯಕರ್ತರಿಗೆ ಮನವಿ ಸಲ್ಲಿಕೆ
ಕೋಲಾರ: ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುವ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪೊಲೀಸ್ ಸಿಬ್ಬಂದಿ ನೇಮಿಸಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ರೈತ ಸಂಘವು ಎಸ್ಪಿ ಡಾ.ರೋಹಿಣಿ ಕಟೋಚ್ಗೆ ಮನವಿ ನೀಡಿದರು.
ಈ ವೇಳೆ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಏಷ್ಯಾದಲ್ಲೇ ಕೋಲಾರ ಎಪಿಎಂಸಿ ದೊಡ್ಡದು. ಈಗ ಟೊಮೆಟೋ ಅವಕ ಪ್ರಾರಂಭವಾಗಿದೆ. ಕಾರ್ಮಿಕರು, ದಲ್ಲಾಳಿಗಳು ಟೊಮೆಟೋ ಖರೀದಿಗೆ ಬರುತ್ತಾರೆ. ಪ್ರತಿ ದಿನ ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುವ ಜೊತೆಗೆ ಮಾರುಕಟ್ಟೆ ಕಿರಿದಾಗಿರುವುದರಿಂದ ಲಾರಿ ಮಾಲಿಕರಿಗೆ ಮತ್ತು ತರಕಾರಿ ಮಂಡಿ ಮಾಲಿಕರಿಗೆ ಜಗಳ ಆಗುತ್ತದೆ ಎಂದು ಹೇಳಿದರು.
ಈ ಹಿಂದೆ ಇದ್ದ ಪೊಲೀಸ್‌ಅನ್ನು 4 ತಿಂಗಳಿಂದ ಬೇರೆ ಕಡೆ ನಿಯೋಜಿಸಲಾಗಿದೆ. ಮಾರುಕಟ್ಟೆ ಅವ್ಯವಸ್ಥೆ, ಜಾಗದ ಸಮಸ್ಯೆ ಬಗೆಹರಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಹೊರ ರಾಜ್ಯದ ಕಾರ್ಮಿಕರು ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಪೇದೆ ನೇಮಕ ಮಾಡಿ ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಎಸ್ಪಿ ಡಾ.ರೋಹಿಣಿ ಕಟೋಚ್, ಚುನಾವಣೆ ನಿಮಿತ್ತ ಪೇದೆಯನ್ನು ಬೇರೆ ಕಡೆ ನಿಯೋಜನೆ ಮಾಡಿದ್ದೆವು. ಟೊಮೆಟೋ ಅವಕ ಹೆಚ್ಚಾಗಿರುವ ಕಾರಣ ಕೂಡಲೇ ಪೊಲೀಸ್ ನೇಮಿಸುವುದಾಗಿ ಭರವಸೆ ನೀಡಿದರು. ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಉದಯ್‌ಕುಮಾರ್, ಮುಳಬಾಗಿಲು ತಾಲೂಕು ಅಧ್ಯಕ್ಷ ಪಾರುಕ್‌ಪಾಷ, ವಿಜಯಪಾಲ್, ಶಂಕರ್, ಪುತ್ತೇರಿ ರಾಜು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.