ಸೇವಾ ಭದ್ರತೆ ಒದಗಿಸಲು ಆಗ್ರಹ
Team Udayavani, Nov 30, 2019, 4:32 PM IST
ಕೋಲಾರ: ಜಿಲ್ಲೆಯಲ್ಲಿರುವ ತಾಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ತಾಲೂಕು ಅಂಗವಿಕಲರ ಕಲ್ಯಾಣಾಧಿಕಾರಿಗಳಾಗಿ ಹಾಗೂ ಗ್ರಾಮ ಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ಅಂಗವಿಕಲರ ಅಭಿವೃದ್ಧಿ ಸಹಾಯಕ ಹುದ್ದೆ ಸೃಷ್ಟಿಸಿ ನೇಮಿಸುವಂತೆ ಆಗ್ರಹಿಸಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ದಿಂದ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆಕರ್ನಾಟಕ ರಾಜ್ಯ ಅಂಗವಿಕಲ ಹಾಗೂ ವಿವಿಧೋದ್ದೇಶ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ರಾಜ್ಯಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೊಳಿಸಿ ನಮ್ಮನ್ನು ಕಾಯಂಗೊಳಿಸಿ ಎಂದು ಆಗ್ರಹಿಸಿದರು.
ಪುನರ್ವಸತಿ ಯೋಜನೆ ಜಾರಿ: ರಾಜ್ಯದ ಜನಸಂಖ್ಯೆಯ ಶೇ.75ರಲ್ಲಿ ಶೇ.5 ರಿಂದ 6ರಷ್ಟು ಅಂಗವಿಕಲರು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಪುನರ್ವಸತಿಗಾಗಿ 2006-07ರಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಾರಿಗೊಳಿಸಿದೆ ಎಂದು ಹೇಳಿದರು.
ನೇಮಕ: ಅದರಡಿ 176 ತಾಲೂಕಿಗೆ ಮತ್ತು 5628 ಗ್ರಾಪಂಗೆ ಅನುಕ್ರಮವಾಗಿ ಪದವೀಧರ ಉತ್ತೀರ್ಣ ಅಂಗವಿ ಕಲರನ್ನು ಎಂ.ಆರ್.ಡಬ್ಲ್ಯೂ ಆಗಿ ತಾಪಂವ್ಯಾಪ್ತಿಗೆ ಮತ್ತು ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಂಗವಿಕಲರನ್ನುವಿ.ಆರ್.ಡಬ್ಲೂಆಗಿ ಗ್ರಾಪಂ ವ್ಯಾಪ್ತಿಗೆ ಗೌರವಧನ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಭದ್ರತೆ ಒದಗಿಸಿ: 2011ರ ಜನಗಣತಿ ಯಂತೆ ರಾಜ್ಯದಲ್ಲಿ 1,32,9204 ಅಂಗವಿಕಲ ಕುಟುಂಬಗಳಿದ್ದು, ಪ್ರತಿ ತಾಲೂಕಿಗೆ 5 ರಿಂದ 6 ಸಾವಿರ ಅಂಗವಿ ಕಲರು ಇದ್ದಾರೆ. ಇವರ ಅವಲಂಬಿತಕುಟುಂಬ ಸೇರಿ ಪ್ರತಿ ತಾಲೂಕಿನಲ್ಲಿ 18 ರಿಂದ 20 ಸಾವಿರ ಜನಸಂಖ್ಯೆ ಇದ್ದು, ಇವರಿಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ ವಿ.ಆರ್.ಡಬ್ಲ್ಯೂಗಳಿಗೆ ಇಂದಿನ ಜೀವನದ ಸ್ಥಿತಿಗಳಿಗೆ ಅನುಗುಣವಾಗಿ ಎಂ.ಆರ್.ಡಬ್ಲ್ಯೂ ಭದ್ರತೆ ಒದಗಿಸಲು ಆಗ್ರಹಿಸಿದರು.
ಹುದ್ದೆ ಸೃಷ್ಟಿಸಿ: ಈ ಯೊಜನೆಯಿಂದ ಕಳೆದ 10-11 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಬಹುಜನಸಂಖ್ಯೆಯ ಪುನರ್ವಸತಿ ಜವಾಬ್ದಾರಿಯುತಾಲೂಕಿನಲ್ಲಿ ಮತ್ತು ಗ್ರಾಪಂ ಮಟ್ಟದಲ್ಲಿ ನಾವುಗಳೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದ್ದರಿಂದ ಸ್ಥಳೀಯ ಇಲಾಖೆಯ ಸಿಬ್ಬಂದಿಯು ಇಲ್ಲದೆ, ಇರುವುದರಿಂದ ಎಂ.ಆರ್.ಡಬ್ಲ್ಯೂಅವರನ್ನು ತಾಲೂಕು ಅಂಗವಿಕಲರ ಕಲ್ಯಾಣಾಧಿ ಕಾರಿಗಳಾಗಿ, ವಿ.ಆರ್.ಡಬ್ಲ್ಯೂ ಅವರನ್ನು ಅಂಗವಿಕಲ ಅಭಿವೃದ್ಧಿ ಸಹಾಯಕರನ್ನಾಗಿ ಹುದ್ದೆಗಳನ್ನು ಸೃಷ್ಟಿಸಿ ಜಾರಿಗೊಳಿಸಿ ಕಾಯಂಗೊಳಿಸುವಂತೆ ಒತ್ತಾಯಿಸಿದರು. ರಾಜ್ಯ ನಿರ್ದೇಶಕ ಚಿಕ್ಕಕುಂತೂರು ವಿ. ವೆಂಕಟಸ್ವಾಮಿ, ಜಿಲ್ಲಾಧ್ಯಕ್ಷ ವೈ.ವಿ. ಶ್ರೀನಿವಾಸಗೌಡ, ಜಿಲ್ಲಾ ಸಂಚಾಲಕ ಆವಣಿ ಸತೀಶ್, ಜಿಲ್ಲಾ ಕಾರ್ಯದರ್ಶಿ ಕೆ.ಎಂ.ಸುನೀಲ್‌ಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.