Shani Temple: 16 ಕೋಟಿ ವೆಚ್ಚದಲ್ಲಿ ಶನಿ ದೇಗುಲ ನಿರ್ಮಾಣ
Team Udayavani, Aug 20, 2023, 5:03 PM IST
ಶ್ರೀನಿವಾಸಪುರ: ಜಿಲ್ಲೆಯಲ್ಲಿಯೇ ಪ್ರಸಿದ್ಧಿಯಾದ ಶ್ರೀ ಶನಿಮಹಾತ್ಮ (ಜ್ಯೇಷ್ಠಾದೇವಿ ಸಮೇತ ಶ್ರೀ ಶನೈಶ್ಚರ ಸ್ವಾಮಿ) ದೇವಾಲ ಯ ತಾಲೂಕಿನ ಪುಂಗನೂರು ಕ್ರಾಸ್‌ನಲ್ಲಿದ್ದು ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯ ಗಳಿಂದ ಸಾವಿರಾರು ಭಕ್ತರು ಶ್ರಾವಣ ಶನಿವಾರಗಳಂದು ಬರುವ ಜತೆಗೆ ಕಾರ್ಯಕ್ರಮ ನಡೆಸಿಕೊಡುತ್ತಿ ರುವ ಈ ಸ್ಥಳದಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮ ಸೇರಿ ಸುಮಾರು 16 ಕೋಟಿಗೂ ಹೆಚ್ಚು ರೂ.ವೆಚ್ಚದಲ್ಲಿ ನೂತನ ದೇವಾಲಯ ಕಳೆದ 4 ವರ್ಷ ದಿಂದ ನಿರ್ಮಾಣ ಆಗುತ್ತಿರು ವುದು ಕಂಡು ಬಂದಿದೆ.
ಶ್ರೀನಿವಾಸಪುರ ಪಟ್ಟಣದಿಂದ 3 ಕಿ.ಮೀ.ದೂರದಲ್ಲಿ ರುವ ಈ ದೇವಾಲಯ ಆಂಧ್ರಪ್ರದೇಶದ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡು ನಾಲ್ಕು ರಸ್ತೆಗಳ ಸಂಗ ಮವಾದ ವೃತ್ತದಲ್ಲಿ ಜ್ಯೇಷ್ಟಾದೇವಿ ಸಮೇತ ಶ್ರೀ ಶನೈಶ್ಚರಸ್ವಾಮಿ ದೇವಾಲಯವಿದೆ. ಇದು ಸುಮಾರು ವರ್ಷಗಳ ಮೇಲ್ಪಟ್ಟು ನಾಗದೇನಹಳ್ಳಿ ದಾನಿಗಳಾದ ಕಾಳಮ್ಮ ಮತ್ತು ಶ್ರೀ ಕಂಠಾಚಾರಿ ಅವರು ನೀಡಿದ ಸ್ಥಳದಲ್ಲಿ ಹಿಂದಿನ ತಲೆಮಾರುಗಳ ಶೀಗಹಳ್ಳಿ ವೆಂಕಟಸ್ವಾವಿ ುರೆಡ್ಡಿ, ಕೆ.ಪಿ.ವೆಂಕಟಸ್ವಾಮಿರೆಡ್ಡಿ, ಬಿ.ಸಿ.ನಾರಾಯಣ ಸ್ವಾಮಿ, ಎನ್.ಶ್ರೀರಾಮರೆಡ್ಡಿ ಕೊತ್ತೂರು ನಾರಾಯಣ ಸ್ವಾಮಿ, ನೀಲಟೂ ರು ಲಕ್ಷ್ಮಣನವರು ಸೇರಿದಂತೆ ಇತರರ ಸಹಕಾರದಲ್ಲಿ 1973ರಲ್ಲಿ ಸದರಿ ಜಾಗದಲ್ಲಿ ಮೇಲ್ಕಂಡ ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ದ್ದು ಇಲ್ಲಿನ ಸೇವಾಕರ್ತರಿಂದ ತಿಳಿದು ಬರುತ್ತದೆ.
16 ಕೋಟಿ ವೆಚ್ಚದಲ್ಲಿ ದೇಗುಲ ನಿರ್ಮಾಣ: ಮುಖ್ಯವಾಗಿ ಸದರಿ ದೇವಾಲಯ ಅಭಿವೃದ್ಧಿಗಾಗಿ ಸಮಿತಿ ಮಾಡಿಕೊಂಡು ಅನೇಕ ಅಭಿವೃದ್ಧಿ ಕೆಲಸ ನಡೆಸಲಾಗುತ್ತಿದೆ. ಸದರಿ ದೇವಾಲಯದ ಸಂಕೀರ್ಣ ದಲ್ಲಿ ಎರಡೂವರೆ ಎಕರೆ ವಿಸ್ತೀರ್ಣವಿದ್ದು ಈಗಾಗಲೇ ಶ್ರೀ ಸೀತಾರಾಮ ಕಲ್ಯಾಣ ಮಂಟಪ, ಶ್ರೀ ಗೌರಿ ಶಂಕರ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಪೂಜೆ ಸಲ್ಲಿಸಲು ಬರುವ ಭಕ್ತರಿಗೆ ನೀರಿನ ವ್ಯವಸ್ಥೆ, ಯಾತ್ರಿಕರು ತಂಗಲು ಕೊಠಡಿ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಸೇವಾಕರ್ತರು ಹೇಳುತ್ತಾರೆ. ಸಂಬಂಧಿಸಿದಂತೆ ನೂತನ ದೇವಾಲಯ ನಿರ್ಮಾಣ ಮಾಡ ಲು ಈ ಭಾಗದ ನಿವಾಸಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ತಮ್ಮ ಧರ್ಮ ಪತ್ನಿ ಉಷಾ ನಂದಿನಿ ಜೊತೆ ಲೋಕಸೇವಾ ಟ್ರಸ್ಟ್ ಮಾಡಿಕೊಂಡು ಸುಮಾರು 16 ಕೋಟಿಗೂ ಮೇಲ್ಟಟ್ಟು ವೆಚ್ಚದಲ್ಲಿ ದಾನಿಗಳ ಸಹಕಾರದಲ್ಲಿ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
ದೇಗು ಲಕ್ಕೆ ಭಕ್ತರ ದಂಡು: ಸದರಿ ದೇವಾಲಯ ಸಂಕೀರ್ಣದಲ್ಲಿ ಶ್ರೀ ಸುಬ್ರಮಣ್ಯಸ್ವಾಮಿ, ಸತ್ಯನಾರಾಯಣ, ಈಶ್ವರ, ಅಯ್ಯಪ್ಪಸ್ವಾಮಿ, ಬೈರವೇಶ್ವರ ಸ್ವಾಮಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಶ್ರಾವಣ ಶನಿವಾರ ಪ್ರಾಮುಖ್ಯತೆ ಪಡೆದು ಕೊಂಡಿದೆ. ಪ್ರತಿ ವರ್ಷ ಶ್ರಾವಣ ಶನಿವಾರದಂದು ಭಕ್ತರು 10 ರಿಂದ 15 ಸಾವಿರ ಮೇಲ್ಪಟ್ಟು ಸೇರಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಇಲ್ಲಿಗೆ ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರ, ತಮಿಳುನಾಡು ಭಾಗಗಳಿಂದ ತಮ್ಮ ಅಭೀಷ್ಟೆ ನೆರವೇರಲು ಇಲ್ಲಿ ಅನ್ನದಾನ ಮಾಡುವುದು. ದೇವರಿಗೆ ವಿಶೇಷ ಕಾಣಿಕೆ ಸರ್ಮಪಿಸುವುದು ಹಾಗೂ ವಿಶೇಷ ಪೂಜಾ ಕಾರ್ಯ ಕ್ರಮ ನಡೆಸಿಕೊಂಡು ಬರಲಾಗುತ್ತಿದೆ.
ಶ್ರಾವಣ ಶನಿವಾರದಂದು ವಿಶೇಷ ಪೂಜೆ: ಪ್ರತಿದಿನ ಆಭಿಷೇಕ ಪೂಜೆ ನಡೆಯುತ್ತದೆ. ಹಾಗೆಯೇ ಪ್ರತಿ ತಿಂಗಳು ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ. ಹಾಗೂ 37 ವರ್ಷಗಳಿಂದ ರಥೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವುದು ಪ್ರಗತಿ ಬೆಳವಣಿಗೆ ಆಗಿದೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶನಿವಾರ ಸುಮಾರು 15 ಸಾವಿರ ಮಂದಿ ಮೇಲ್ಪಟ್ಟು ಬರುವ ಭಕ್ತರಿಗೆ ಅನ್ನದಾನ ಹಾಗೂ ರಥೋತ್ಸವ ನಡೆಸುವ ಸಮಯದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸಮಗ್ರ ಅಭಿವೃದ್ಧಿಗಾಗಿ ದೇವಾಲಯದ ಸುತ್ತಮುತ್ತಲಿನ ಭಕ್ತರು ಸಹಕಾರ ನೀಡುತ್ತಾ ಬಂದಿದ್ದಾರೆ. ಶ್ರಾವಣ ಮಾಸಕ್ಕೆ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ವಿವಿಧ ರಾಜ್ಯಗಳ ಜನ ಬಂದು ದೇವರಿಗೆ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.
ದೇವಾಲಯ ಸಮಗ್ರ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಲೋಕಸೇವಾ ಟ್ರಸ್ಟ್ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದು ದೇವಾಲಯ ಸಮಿತಿ ಸದಸ್ಯರು ಇತರರ ಸಹಕಾರದಲ್ಲಿ ಇಲ್ಲಿಯ ಸ್ವಾಮಿ ಸೇವೆ ಸಲ್ಲಿಸಲಾಗುತ್ತಿದೆ. ಪ್ರತಿ ವರ್ಷ ಶ್ರಾವಣ ಶನಿವಾರಗಳ ಕಾರ್ಯ ಕ್ರಮಗಳು ವಿಶೇಷ ಕಾರ್ಯಕ್ರಮ ಗಳೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ.-ವೆಂಕಟರೆಡ್ಡಿ,ದೇವಾಲಯ ಸಮಿತಿ ಸದಸ್ಯರು
ದಾನಿಗಳು ನೀಡಿದ ಸ್ಥಳದಲ್ಲಿ ಇಂದು ವಿವಿಧ ದೇವಾಲಯಗಳ ನಿರ್ಮಾಣ ಮಾಡಿ ಪೂಜಾ ಕಾರ್ಯಕ್ರಮ, ರಥೋತ್ಸವ, ಸತ್ಯ ನಾರಾಯಣ ಪೂಜೆ, ಶ್ರಾವಣ ಶನಿವಾರ ಕಾರ್ಯಕ್ರಮಗಳು, ನಿತ್ಯ ಪೂಜೆ ನಡೆಸಲಾಗುತ್ತಿದೆ. ಮುಖ್ಯವಾಗಿ ನೂತನವಾಗಿ 16 ಕೋಟಿ ರೂ.ವೆಚ್ಚದಲ್ಲಿ ದೇವಾಲಯ ನಿರ್ಮಾಣವಾಗುತ್ತಿದೆ. ದೇಗುಲ ನಿರ್ಮಾಣದ ನಂತರ ಪ್ರತಿ ಶನಿವಾರ ಅನ್ನದಾನ ನಡೆಸುವ ಗುರಿ ಹೊಂದಲಾಗಿದೆ.-ವಿ.ರಘುನಾಥರೆಡ್ಡಿ,ದೇವಾಲಯ ಸಮಿತಿ ಖಜಾಂಚಿ
-ಕೆ.ವಿ.ನಾಗರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.