ಸಮಾಜಕ್ಕೆ ಸಿದ್ಧಗಂಗಾ ಶ್ರೀ ದಾರಿದೀಪ
Team Udayavani, Apr 2, 2022, 1:37 PM IST
ಕೋಲಾರ: ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿಯವರು ಮಾನವರಲ್ಲ. ಅವರು ದಾರ್ಶನಿಕರು. ಸಮಾಜಕ್ಕೆ ದಾರಿ ದೀಪವಾಗಿದ್ದ ವರು. ಯಾವೂದೇ ಜಾತಿ ಭೇದವಿಲ್ಲದೆ ಎಲ್ಲರನ್ನು ಒಂದೇ ಭಾವನೆಯಲ್ಲಿ ಕಾಣುತ್ತಿದ್ದು, ಎಲ್ಲ ವರ್ಗದವರಿಗೂ ತ್ರಿವಿಧ ದಾಸೋಹವನ್ನು ಕಲ್ಪಿಸುವ ಮೂಲಕ ಆದರ್ಶವಾಗಿದ್ದರು ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ ಹೇಳಿದರು.
ನಗರದ ಗಾಂಧಿವನದಲ್ಲಿ ಶುಕ್ರವಾರ ಶ್ರೀವಿವೇಕನಂದ ವಿದ್ಯಾರ್ಥಿಗಳ ಸಂಘ, ಬಿಆರ್ ಎಂ ಬಳಗ ಮತ್ತು ಭಕ್ತರಿಂದ ನಡೆದ ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಮಾತನಾಡಿದರು.
ಸಮಾಜಕ್ಕೆ ಜೀವನ ಮುಡಿಪು: ರಾಜ್ಯದಲ್ಲಿ ಜಾತ್ಯತೀತವಾಗಿ ಬಡ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹದ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸಿದ್ಧಗಂಗಾ ಕ್ಷೇತ್ರವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಗರದ ಇಟಿಸಿಎಂ ಆಸ್ಪತ್ರೆ ಪಕ್ಕದ ಜೋಡಿ ರಸ್ತೆಗೆ ಇಡುವಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ಗಮಿತ ಅಧ್ಯಕ್ಷ ವಿ.ಮುನಿರಾಜು ಆಗ್ರಹಿಸಿದರು.
ನಗರದ ಸೂಕ್ತ ಸ್ಥಳದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಪ್ರತಿಮೆ ಸ್ಥಾಪಿಸಬೇಕು. ಸಮಾಜಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅವರ ಸ್ಮರಣೆ ನಿರಂತರವಾಗಿರಬೇಕು ಎಂದರು.
ಸ್ವಾಮೀಜಿ ಆದರ್ಶ ಅಳವಡಿಸಿಕೊಳ್ಳಿ: ನಿವೃತ್ತ ಹೊಂಗಾರ್ಡ್ ಕಮಾಂಡೆಂಡೆಂಟ್ ಮರಿಯಪ್ಪ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಆದರ್ಶ ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮುಕ್ತಿ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪ್ರಮುಖರಾದ ಬಿ.ಎಂ.ಚೆನ್ನಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಭಕ್ತರ ಸಭೆಯನ್ನು ಕರೆದು ಅವರ ಸಲಹೆ- ಸೂಚನೆ ಪರಿಗಣಿಸಿ ಪ್ರತಿಮೆ ಸ್ಥಾಪನೆ ಹಾಗೂ ಇಟಿಸಿಎಂ ಪಕ್ಷದ ರಸ್ತೆಗೆ ಅವರ ಹೆಸರು ಇಡಲು ಅಗತ್ಯಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಉಪಪ್ರಾಂಶುಪಾಲ ರುದ್ರಪ್ಪ, ನಗರಸಭೆ ಸದಸ್ಯ ಪ್ರಸಾದಬಾಬು, ಅರ್ಚಕರಾದ ರಂಗನಾಥ್, ಬಿ.ಆರ್.ಎಂ. ಬಳಗದ ಬಿ.ಸುರೇಶ್, ಸಚ್ಚಿದಾ ನಂದ, ಬಿ.ಉಮೇಶ್, ಶ್ರೀರಾಮ ಕಾμ ವರ್ಕ್ಸ್ನ ಶ್ರೀನಾಥ್, ಕೆ.ಬಿ.ಬೈಲಪ್ಪ. ಮಂಜುನಾಥ್, ಜಯದೇವ್, ನಾರಾಯಣಪ್ಪ, ಸುಬ್ಬರಾಯಪ್ಪ, ವೆಂಕಟಪತೆಪ್ಪ, ವೆಂಕಟಕೃಷ್ಣ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.