ವಿಪಕ್ಷ ನಾಯಕ ಸ್ಥಾನಕ್ಕೆ ನನಗಿಂತ ಸಿದ್ದರಾಮಯ್ಯ ಸೂಕ್ತ
ಜನರ ಪರ ಧ್ವನಿಯೆತ್ತಲು ನನಗಿಂತ ಸಿದ್ದರಾಮಯ್ಯ ಸಮರ್ಥರು: ಮಾಜಿ ಸ್ಪೀಕರ್ ರಮೇಶ್‌ಕುಮಾರ್
Team Udayavani, Aug 4, 2019, 3:03 PM IST
ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಕೋಲಾ ರದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ಕೋಲಾರ: ವಿಧಾನಸಭೆಯಲ್ಲಿ ಜನರ ಪರ ಧ್ವನಿಯೆತ್ತಲು, ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ನನಗಿಂತಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಸಮರ್ಥರು ಎಂದು ಸ್ವೀಕರ್ ರಮೇಶ್‌ಕುಮಾರ್ ತಿಳಿಸಿದರು.
ತಾಲೂಕಿನ ಸುಗಟೂರು ಗ್ರಾಮದಲ್ಲಿ ಸುದ್ದಿ ಗಾರರ ಜೊತೆ ಮಾತನಾಡಿದ ಅವರು, ಪ್ರತಿಪಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುವ ಯಾವ ಚರ್ಚೆಯೂ ನಡೆದಿಲ್ಲ, ಎಲ್ಲವೂ ಊಹಾಪೋಹ ಅಷ್ಟೇ. ಮೇಲ್ಮಟ್ಟದಲ್ಲಿ ಪಕ್ಷದ ನಾಯಕರು ಕುಳಿತು ಕೊಂಡು ತೀರ್ಮಾನ ಮಾಡುತ್ತಾರೆ. ಸ್ವೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪುನಃ ಕಾಂಗ್ರೆಸ್ ಪಕ್ಷದಲ್ಲಿ ಸದಸ್ಯತ್ವ ಪಡೆದುಕೊಂಡಿದ್ದೇನೆ. ನಾನು ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತ, ಪಕ್ಷ ವಹಿಸಿದ ಕೆಲಸ ನಿರ್ವಹಿಸುವುದಷ್ಟೇ ನನ್ನ ಜವಾಬ್ದಾರಿ ಎಂದು ಸ್ಪಷ್ಟನೆ ನೀಡಿದರು.
ಗುಣಕ್ಕೆ ಮತ್ಸರ ಇರಬಾರದು, ಪಕ್ಷ ಬಲ ವರ್ಧನೆಗೆ, ನಮ್ಮನ್ನು ಸಮರ್ಥವಾಗಿ ಪ್ರತಿನಿಧಿಸಿ ಪ್ರತಿಪಕ್ಷವಾಗಿ ಕೆಲಸ ಮಾಡಬೇಕಿದ್ದರೆ ಅವರೇ ಅತ್ಯಂತ ಸಮರ್ಥರು ಎಂದು ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿದರು.
ಪಕ್ಷದ ಹೈಕಮಾಂಡ್ ತೀರ್ಮಾನ: ಮುಂದಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು, ಬಿಡುವುದು ಪಕ್ಷ ತೀರ್ಮಾನಿಸುತ್ತದೆ. ಹೈಕಮಾಂಡ್ ರಾಜ್ಯಕ್ಕೆ ಏನು ಒಳ್ಳೆಯದು ಎನಿಸುತ್ತದೋ ಆ ತೀರ್ಮಾನ ಕೈಗೊಳ್ಳುತ್ತದೆ ಎಂದು ನುಡಿದರು.
ವರ್ಗಾವಣೆ ಅಧಿಕಾರ ಅವರಿಗಿದೆ: ಸಂವಿಧಾನಬದ್ಧವಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ, ಅವರ ಅಧಿಕಾರವನ್ನು ಪ್ರಶ್ನಿಸಬಾರದು. ಅವರಿಗೆ ಏನು ಒಳ್ಳೆಯದು ಅನಿಸುತ್ತದೋ ಅದನ್ನು ಮಾಡಲಿ, ಅಡ್ಡಿಪಡಿಸು ವುದೇನಿದೆ ಮುಖ್ಯಮಂತ್ರಿ ಆಗಿರುವುದರಿಂದ ವರ್ಗಾವಣೆ ಮಾಡುವ ಅಧಿಕಾರ ಅವರಿಗಿದೆ. ಮಾಡಲಿ, ಸರಿನೋ ತಪ್ಪೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ನಾವ್ಯಾಕೆ ಆತುರ ಬಿದ್ದು ಮಾತನಾಡಬೇಕು ಎಂದು ಪ್ರಶ್ನಿಸಿದರು
ಬಿಎಸ್‌ವೈಗೆ ಏನ್ ಕಷ್ಟ ಇದೆಯೋ?: ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಅವರಿಗೆ ಏನು ಕಷ್ಟ ಇದೆಯೋ ನಮಗೇನು ಗೊತ್ತು,ಬಹುಶಃ ನಾನೊಬ್ಬನೇ ರಾಜ್ಯವನ್ನು ನಿಭಾಯಿಸಬಲ್ಲೆ ಎಂಬ ನಂಬಿಕೆ ಇರಬಹುದು, ಮಂತ್ರಿ ಮಂಡಲ ರಚ ನೆಯೂ ಆಗದಿರಬಹುದು, ಇದೂ ಒಂದು ಹೊಸ ಪ್ರಯೋಗ ಆಗುತ್ತದೆ ನೋಡೋಣ ಎಂದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಟಿಪ್ಪು ಜಯಂತಿ ಮಾಡಲು ಇಷ್ಟ ಇಲ್ಲ, ಅದಕ್ಕೆ ರದ್ದುಪಡಿಸಿದ್ದಾರೆಯೇ ವಿನಃ ಜನರ ತೀರ್ಮಾನ ಅಲ್ಲ.ಇಷ್ಟ ಬಂದಂತೆ ಮಾಡುವುದು ಲಕ್ಷಣವೇ ಎಂದು ಪ್ರಶ್ನಿಸಿದ ಅವರು, ಸರ್ಕಾರದ ಕ್ರಮ ಸರಿಯೋ ಎಂಬ ತೀರ್ಮಾನವನ್ನು ಜನ ನೀಡಬೇಕು, ಸಮಯ ಬಂದಾಗ ಜನ ಉತ್ತರ ಕೊಡಲಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ಆಯಸ್ಸು ಕುರಿತು ನಾನು ಜ್ಯೋತಿಷ್ಯ ಹೇಳುವುದಿಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಕೆಲಸ ಮಾಡಲಿ, ಬಹುಮತ ಸಿಕ್ಕಿ ಆಡಳಿತ ಮಾಡುತ್ತಿದ್ದಾರೆ.ಜನರಿಗೆ ಒಳ್ಳೆಯದು ಮಾಡಲಿ ನೋಡೋಣ, ನಾವ್ಯಾಕೆ ಅಪಶಕುನ ಹೇಳಬೇಕು, ಅಧಿಕಾರದಲ್ಲಿ ನಾವೇ ಇರಬೇಕೆಂದು ಯಾರೂ ಜಹಂಗೀರ್ ಬರೆದುಕೊಟ್ಟಿಲ್ಲ ಎಂದು ಹೇಳಿದರು.
ಒಳ್ಳೆಯ ಕೆಲಸ ಮಾಡಲಿ, ಪ್ರೋತ್ಸಾಹ ನೀಡೋಣ, ಜನರಿಗೆ ಒಳ್ಳೆಯದು ಮಾಡುವುದು ಮುಖ್ಯ. ಒಳ್ಳೆಯ ಕೆಲಸ ಮಾಡಿದರೆ ಆಯ್ತಪ್ಪಾ… ಎಂದು ಅವರಿಗೇ ಶಹಬಾಶ್‌ಗಿರಿ ಕೊಡೋಣ. ಪ್ರಜಾ ಪ್ರಭುತ್ವ ಎಂದರೆ 24 ಗಂಟೆಯೂ ಜಗಳ ಆಡ ಬೇಕೆಂದು ಇಲ್ಲವಲ್ಲ, ಸಕಾರಾತ್ಮಕವಾಗಿ ಮಾತ ನಾ ಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.