ಅಡ್ಡದಾರಿ: ಅಪಘಾತ ಕಟ್ಟಿಟ್ಟ ಬುತ್ತಿ; ವೇಗದ ವಾಹನ ಸಂಚಾರಕ್ಕೆ ಕಡಿವಾಣ ಅಗತ್ಯ
ಹೆದ್ದಾರಿಯಲ್ಲಿ 24 ಗಂಟೆಗಳ ಕಾಲ ವಾಹನಗಳು ವೇಗದಿಂದ ಸಂಚಾರ ಮಾಡುತ್ತವೆ.
Team Udayavani, Sep 13, 2021, 6:34 PM IST
ಮುಳಬಾಗಿಲು: ಕೇಂದ್ರ ಸರ್ಕಾರ ಜನರ ಅನುಕೂಲಕ್ಕಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಿವಿಧ ಗೇಟ್‌ಗಳಲ್ಲಿ ಗ್ರಾಮಸ್ಥರು, ರಸ್ತೆ ದಾಟಲು ಅಕ್ರಮವಾಗಿ ದಾರಿ ಸೃಷ್ಟಿಸಿದ್ದು, ರಸ್ತೆ ವಿಭಜಕಗಳು ಅಪಘಾತಗಳನ್ನು ಸೃಷ್ಟಿಸುವ ತಾಣವಾಗಿ ಪರಿಣಮಿಸುತ್ತಿದೆ ಎಂಬ ಆರೋಪಕೇಳಿ ಬರುತ್ತಿದೆ. ತಾಲೂಕಿನಲ್ಲಿ ಹಾದು ಹೋಗಿರುವ ಹೆದ್ದಾರಿಯನ್ನು ಕೇಂದ್ರ ಸರ್ಕಾರ ಮೇಲ್ದರ್ಜೇಗೇರಿಸಲು ಉದ್ದೇಶಿಸಿ ಹೆದ್ದಾರಿ ಅಭಿವೃದ್ಧಿ ಅಧಿಕಾರಿ
ಗಳು ಚುತುಷ್ಪಥ ರಸ್ತೆಯನ್ನಾಗಿ ನಿರ್ಮಿಸಲು ಕ್ರಮ ಕೈಗೊಂಡಿದ್ದರು.
ಅದರಂತೆ 2013ರಲ್ಲಿ ಲ್ಯಾಂಕೋ ಕಂಪನಿಯು ಹೊಸಕೋಟೆಯಿಂದ ಮುಳಬಾಗಿಲು ನಗರದ ಮದರಸಾ ವರೆಗೂ ನಿರ್ಮಿಸಿ, ಹೆದ್ದಾರಿ ಅಭಿವೃದ್ಧಿ ಗಾಗಿ ವ್ಯಯವಾಗಿರುವ ಹಣವನ್ನು ವಸೂಲಿ ಮಾಡಲು ದೇವರಾಯಸಮುದ್ರ ಬಳಿ ಟೋಲ್ ನಿರ್ಮಿಸಿದ್ದಾರೆ. ಅಂತೆಯೇ 2ನೇ ಹಂತವಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಭಾರತ ಸರ್ಕಾರದ ಅನುಸಾರ ಜೆಎಸ್‌ಆರ್ ಟೋಲ್‌ವೇಸ್ ಪ್ರçವೇಟ್ ಲಿಮಿಟೆಡ್ ಕಂಪನಿಯು ರಾ.ಹೆ.75ರ ಮುಳಬಾಗಿಲು ನಗರದ ಮದರಸಾದಿಂದ ಕರ್ನಾಟಕ ಗಡಿ ಭಾಗದವರೆಗೆ 2015ರಲ್ಲಿ ಚುತುಷ್ಪಥ ರಸ್ತೆ ನಿರ್ಮಿಸಿದ್ದು, ಹೆದ್ದಾರಿ ಬಳಕೆಗಾಗಿ ಬಳಕೆದಾರ ಶುಲ್ಕ ಸಂಗ್ರಹಕ್ಕೆ ಗಡಿ ರೇಖೆಯಿಂದ 500 ಮೀ ದೂರದ ಎನ್.ಯಲುವಹಳ್ಳಿ ಬಳಿ ಟೋಲ್ ಪ್ಲಾಜಾ ನಿರ್ಮಿಸಿಕೊಂಡು ಶುಲ್ಕ ವಸೂಲಿ ಮಾಡುತ್ತಿದ್ದರು.
ಚತುಷ್ಪಥ ರಸ್ತೆ ನಿರ್ಮಾಣ: ಅಂತೆಯೇ ಲ್ಯಾಂಕೋ ಹೊಸಕೋಟೆ ಕಂಪನಿಯು ಮುಳಬಾಗಿಲು ತಾಲೂಕಿನ ತಂಬಿಹಳ್ಳಿ ಪಾಲಾರ್ ಸೇತುವೆಯಿಂದ ನಗರದ ಮದರಸಾವರೆಗೂ ಚತುಷ್ಪಥ ರಸ್ತೆಯುಳ್ಳ ಹೆದ್ದಾರಿ ನಿರ್ಮಿಸಿದ್ದಾರೆ. ವಿವಿಧ ಗ್ರಾಮಗಳ ಗೇಟ್ ಗಳ ಬಳಿ ಗ್ರಾಮಸ್ಥರು ಒಂದು ಕಡೆಯಿಂದ ಮತ್ತೂಂದು ಕಡೆ ರಸ್ತೆ ದಾಟಲು ರಸ್ತೆ ವಿಭಜಕ ನಿರ್ಮಿಸಲಾಗಿದೆ. ಆದರೆ, ಅದರ ನಡುವೆಯೂ ಕಮದಟ್ಟಿ, ಕಾಮನೂರು, ಪಂಚವಟಿ ಪಾರ್ಮ್, ಕುರುಬರಹಳ್ಳಿ ಗೇಟ್, ತಿರುಮಲ ಡೇರಿ ಮುಂಭಾಗ, ಜಮ್ಮನಹಳ್ಳಿ ಗೇಟ್ ಬಳಿ ಎರಡು ಕಡೆ, ದೊಡ್ಡಮಾದೇನಹಳ್ಳಿ, ಕಪ್ಪಲಮಡಗು, ಶ್ರೀರಂಗಪುರ, ಪದ್ಮಘಟ್ಟ, ಹಳೆಕುಪ್ಪ, ಮುದಿಗೆರೆ ಕ್ರಾಸ್, ನಂಗಲಿ
ಬಾರ್ಡರ್‌ನಲ್ಲಿ ಗ್ರಾಮಸ್ಥರು ವಾಹನಗಳಲ್ಲಿ ರಸ್ತೆ ದಾಟಲು ರಸ್ತೆ ಮದ್ಯದಲ್ಲಿನ ರಸ್ತೆ ವಿಭಜಕವನ್ನು ಅಕ್ರಮವಾಗಿ ಕೊರೆದು ದಾರಿ ಮಾಡಿಕೊಂಡಿದ್ದಾರೆ.
ರಸ್ತೆ ಮುಚ್ಚಿದ್ದರೂ ಪ್ರಯೋಜನವಿಲ್ಲ: ಹೆದ್ದಾರಿಯಲ್ಲಿ 24 ಗಂಟೆಗಳ ಕಾಲ ವಾಹನಗಳು ವೇಗದಿಂದ ಸಂಚಾರ ಮಾಡುತ್ತವೆ. ಅದರ ನಡುವೆ ಗ್ರಾಮಸ್ಥರು, ವಿಭಜಕದ ದಾರಿಯಲ್ಲಿ ಹಠಾತ್ ಆಗಿ ಗಿಡಗಳ ನಡುವೆ ಒಂದು ಕಡೆಯಿಂದ ಮತ್ತೂಂದು ಕಡೆ ವಾಹನಗಳನ್ನು ನುಗ್ಗಿಸಿದಾಗ, ಎದುರುಗಡೆಯಿಂದ ವೇಗವಾಗಿ ಬರುವ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಅಪಘಾತಗಳು ಉಂಟಾಗುತ್ತಿವೆ. ಅಲ್ಲದೇ ಸಾಕಷ್ಟು ಜನರು ಮೃತಪಟ್ಟು ಮತ್ತೂ ಕೆಲವರು ಗಾಯಗೊಂಡಿರುವ ಘಟನೆಗಳು ನಡೆಯುತ್ತಿವೆ.
ಅದರಂತೆ ಲ್ಯಾಂಕೋ ಕಂಪನಿಯೂ ಅಪಘಾತ ತಪ್ಪಿಸಲು ಸಿಮೆಂಟ್ ಕಂಬಗಳನ್ನು ಅಡ್ಡಹಾಕಿ, ಅಕ್ರಮ ರಸ್ತೆ ವಿಭಜಕಗಳನ್ನು ಮುಚ್ಚಿದ್ದರೂ, ಗ್ರಾಮಸ್ಥರು ಮತ್ತೆ ಅದೇ ರೀತಿ ಸದರೀ ಕಲ್ಲುಗಳನ್ನು ಪಕ್ಕಕ್ಕೆ ಸರಿಸಿ, ಸದರೀ ಸ್ಥಳದಲ್ಲಿಯೇ ಸಂಚರಿಸಲು ಅನುವು ಮಾಡಿಕೊಂಡಿದ್ದಾರೆ. ಅದರಲ್ಲೂ ರಾತ್ರಿ ವೇಳೆ ಹೇಳಲೂ ಅಸಾಧ್ಯ. ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದಾಗ, ಇದೇ ಸ್ಥಳಗಳಲ್ಲಿ ಕತ್ತಲಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ವಾಹನಗಳು ದಾಟಿದಾಗ ಎದುರುಗಡೆಯಿಂದ ಬರುವ ವಾಹನಗಳಿಗೆ ವೇಗದ ಕಡಿವಾಣ ಹಾಕಿ ಕೊಳ್ಳಲು ಆಗದೇ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿ ಪರಾರಿಯಾಗುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ವಿವಿಧ ಗೇಟ್‌ಗಳಲ್ಲಿ ಜನರು ಅಕ್ರಮವಾಗಿ ರಸ್ತೆ ವಿಭಜಕಗಳನ್ನುಕೊರೆದು ದಾರಿ ಮಾಡಿಕೊಂಡಿದ್ದು, ಈ ಜಾಗಗಳಲ್ಲಿ ಸಡನ್ನಾಗಿ ತಮ್ಮ ವಾಹನಗಳ ಮೂಲಕ ರಸ್ತೆ ದಾಟುವುದರಿಂದ ವೇಗವಾಗಿ ಸಂಚರಿಸುವ ವಾಹನಗಳ ನಡುವೆ ಅಪಘಾತಗಳು ಉಂಟಾಗುತ್ತಿವೆ. ಆದ್ದರಿಂದ ಇಂತಹ ಅವಘಡಗಳಿಗೆ ಹೆದ್ದಾರಿ ಅಧಿಕಾರಿಗಳು ಕಡಿವಾಣ ಹಾಕಬೇಕಿದೆ.
ರಮೇಶ್, ಕಾರು ಚಾಲಕ
ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಗೇಟ್‌ಗಳಲ್ಲಿ ರಸ್ತೆ ದಾಟಲು ಜನರು ಅಕ್ರಮವಾಗಿ ದಾರಿ ಸೃಷ್ಟಿಸಿಕೊಂಡಿದ್ದಾರೆ. ರಸ್ತೆ ವಿಭಜಕಗಳು ಅಪಘಾತ ಸೃಷ್ಟಿಸುವ ತಾಣವಾಗಿ ಪರಿಣಮಿಸುತ್ತಿರುವುದರಿಂದ ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂಪನಿ ಅಧಿಕಾರಿಗಳ ಜೊತೆ ಚರ್ಚಿಸಿ, ರಸ್ತೆ ಕಂದಕ ಮುಚ್ಚಿಸಲು ಸೂಚಿಸಲಾಗುವುದು.
ಸೆಲ್ವಮಣಿ, ಜಿಲ್ಲಾಧಿಕಾರಿ
ಎಂ ನಾಗರಾಜಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.