![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Mar 27, 2024, 7:20 PM IST
ಕೋಲಾರ: ಕೋಲಾರ ಲೋಕಸಭಾ ಟಿಕೆಟ್ ನೀಡುವ ಕುರಿತು ಕಾಂಗ್ರೆಸ್ ಪಕ್ಷದಲ್ಲಿ “ಮನೆಯೊಂದು 100 ಬಾಗಿಲು’ ಎಂಬಂತಾಗಿದೆ, 3 ತಿಂಗಳಿಂದ ಟಿಕೆಟ್ ಘೋಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ ಸಂಸದ ಮುನಿಸ್ವಾಮಿ ಬಿಜೆಪಿ ದೇಶ, ಧರ್ಮ ರಕ್ಷಣೆಗೆ ಎಂತಹ ತ್ಯಾಗಕ್ಕೂ ಸಿದ್ದ ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ ಎಂದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಕಾಂಗ್ರೆಸ್‌ನಲ್ಲಿ ಮನೆ ಒಂದು ನೂರು ಬಾಗಿಲು ಆಗಿದೆ. ಎಡಗೈ, ಬಲಗೈ, ಮುಂದೆ, ಹಿಂದೆ ಎಂದು ಗಲಾಟೆ ಒಂದು ತಿಂಗಳಿಂದಲೂ ಲೋಕಸಭೆ ಚುನಾವಣೆಯ ಅಭ್ಯರ್ಥಿ ಸಂಬಂಧ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಶಾಸಕರು, ಎಂಎಲ್ಸಿಗಳು ರಾಜೀನಾಮೆ ಕೊಡಲು ಮುಂದಾಗಿದ್ದಾರೆಂಬ ಸುದ್ದಿ ಇದೆ, ಆದರೆ ಅದು ಅವರ ಆಂತರಿಕ ವಿಚಾರ ಎಂದರು.
ನನಗೆ ಬಿಜೆಪಿಯಿಂದ ಟಿಕೆಟ್ ನೀಡಲು ಕೊನೆಯವರೆಗೂ ಹೋರಾಟ ನಡೆಯಿತು. ಮೈತ್ರಿಯಿಂದಾಗಿ ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಈಗಾಗಲೇ ಅಮಿತ್ ಶಾ ಮಾತನಾಡಿದ್ದು ಸೂಕ್ತ ಸ್ಥಾನಮಾನ ಕೊಡುವ ಭರವಸೆ ನೀಡಿದ್ದಾರೆ. ನಡ್ಡಾ ಜತೆಗೂ ಮಾತನಾಡಿದ್ದೇನೆ. ಟಿಕೆಟ್ ವಿಚಾರವಾಗಿ ನನ್ನ ತಪ್ಪಿದ್ದರೆ ಹೇಳಿ ಎಂದು ನಾನೂ ಕೇಳಿದೆ. ಸರ್ವೇ ಪ್ರಕಾರ ನನ್ನ ಗೆಲುವು ಇತ್ತು, ಆದರೂ ಮೈತ್ರಿಯಿಂದಾಗಿ ಒಪ್ಪಿಕೊಂಡಿದ್ದು, ಹತಾಶರಾಗದೆ ಕೆಲಸ ಮಾಡಲು ಪಣ ತೊಟ್ಟಿದ್ದೇನೆ ಎಂದರು.
Kolar: ಬಾಲಕಿ ಮೇಲೆ ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ
BJP President Post: ಅವಕಾಶ ಸಿಕ್ಕಿದರೆ ರಾಜ್ಯಾಧ್ಯಕ್ಷ ಆಗಲು ಸಿದ್ಧ: ಶ್ರೀರಾಮುಲು
Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
You seem to have an Ad Blocker on.
To continue reading, please turn it off or whitelist Udayavani.