ಕೋವಿಡ್ 2ನೇ ಅಲೆ ತಡೆಗೆ ಕಟ್ಟುನಿಟ್ಟಿನ ಕ್ರಮ
Team Udayavani, Apr 17, 2021, 1:18 PM IST
ಕೋಲಾರ: ಕೋವಿಡ್ ಎರಡನೇ ಅಲೆಆತಂಕಕಾರಿಯಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿಈಗಾಗಲೇ ರಾಜ್ಯದ 8 ಜಿಲ್ಲೆಗಳಲ್ಲಿ ರಾತ್ರಿ ಕಫ್ಯೂಜಾರಿಯಾಗಿದೆ. ಸೋಂಕು ತಡೆಗೆ ಜಿಲ್ಲೆಯಲ್ಲಿಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲು2-3 ದಿನಗಳಲ್ಲಿ ಜಿಲ್ಲಾ ಧಿಕಾರಿಗಳು, ಎಸ್‌ಪಿ,ಆರೋಗ್ಯ ಇಲಾಖೆ ಅ ಧಿಕಾರಿಗಳ ಸಭೆ ಕರೆದುಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಶುಕ್ರವಾರ ತಮ್ಮ ಹುಟ್ಟುಹಬ್ಬದ ಪ್ರಯುಕ್ತನಗರ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿಪ್ರಾಣಿಗಳಿಗೆ ಹಣ್ಣು- ತರಕಾರಿ, ನೀರಿನ ವ್ಯವಸ್ಥೆಕಲ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,ಜಿಲ್ಲೆಯಲ್ಲಿ ಸುಮಾರು 450 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿನ ಪ್ರಮಾಣದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ ಎಂದರು.
ವಿರೋಧ ಪಕ್ಷಗಳಂತೆ ಟೀಕೆಗಳು ಬೇಡ: ಕೊರೊನಾನಿಯಂತ್ರಣ ವಿಚಾರವಾಗಿ ಸರಕಾರ ಮಾಡುತ್ತೆ,ಅವರು ಮಾಡುತ್ತಾರೆ, ಇವರು ಮಾಡುತ್ತಾರೆ ಎಂದುವಿರೋಧ ಪಕ್ಷದವರಂತೆ ಕೇವಲ ಟೀಕೆಗಳನ್ನುಮಾಡುವುದನ್ನು ಬಿಟ್ಟು ಸಮಾಜದ ಪ್ರತಿಯೊಬ್ಬರೂಪûಾತೀತವಾಗಿ ಕೋವಿಡ್ ತಡೆಗೆ ಚಿಂತಿಸಬೇಕು.ಜಾಗೃತಿ ಮೂಡಿಸಬೇಕು ಎಂದರು.ಸಮಾಜಕ್ಕೆ ನಾವು ಏನು ಮಾಡಿದ್ದೇವೆ,ಮಾಡಬೇಕು ಎನ್ನುವುದರ ಬಗ್ಗೆ ರಾಜಕೀಯಬದಿಗಿಟ್ಟು ಪ್ರತಿಯೊಬ್ಬರೂ ಪûಾತೀತವಾಗಿ ಚಿಂತನೆಮಾಡಬೇಕಿದೆ. ಸೋಂಕು ವಿರೋಧ ಪಕ್ಷಗಳವರಿಗೆತಗಲುವುದಿಲ್ಲವೇ ಎಂದು ಪ್ರಶ್ನಿಸಿ, ಕೋವಿಡ್‌ಮಾರಿಗೆ ಎಲ್ಲರೂ ಒಂದೇ ಎಂದರು.
ಕೊರೊನಾ ಕುರಿತ ಜಾಗೃತಿ: ಕೊರೊನಾ ಎರಡನೇಅಲೆ ಆರಂಭವಾಗಿದೆ. ಮೊದಲನೇ ಅಲೆಯಲ್ಲಿಕೋಲಾರ ಲೋಕಸಭಾ ಕ್ಷೇತ್ರದಾದ್ಯಂತ ಆಹಾರದಕಿಟ್‌ಗಳು, ಮಾಸ್ಕ್-ಸ್ಯಾನಿಟೈಸರ್‌ಗಳನ್ನು ನೀಡಲಾಗಿತ್ತು. ಅಂತೆಯೇ ಈ ಬಾರಿಯೂ ಕೊರೊನಾಕುರಿತ ಜಾಗƒತಿ ಕೆಲಸಗಳನ್ನು ಮಾಡಬೇಕಾಗಿದೆಎಂದರು.ಕೇಂದ್ರ ಮತ್ತು ರಾಜ್ಯ ಸರಕಾರವು ಅನೇಕಯೋಜನೆಗಳನ್ನು ಜಾರಿಗೆ ತಂದು, ತೀರಾಬಡವರು, ಕಾರ್ಮಿಕರು, ಚಾಲಕರಿಗೆ ಹಣನೀಡಲಾಗಿತ್ತು. 2ನೇ ಅಲೆ ಬಂದಿರುವ ಹಿನ್ನೆಲೆಯಲ್ಲಿಮೊದಲು ನಾವು ಸುರಕ್ಷತಾ ಕ್ರಮಗಳನ್ನುಅನುರಿಸುವ ಜತೆಗೆ ಪ್ರತಿಯೊಬ್ಬರಿಗೂ ಜಾಗƒತಿಮೂಡಿಸಬೇಕು.ಅಲ್ಲದೆ, ಹೆಚ್ಚಿನ ರೀತಿಯಲ್ಲಿಸಾವು-ನೋವುಗಳನ್ನು ಅನುಭವಿಸದೆನೆಮ್ಮದಿಯಿಂದ ಜೀವನ ಸಾಗಿಸಲುಸಹಕರಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಜತೆ ಕೈಜೋಡಿಸಿ: ಮುಂದೆಪ್ರಕರಣಗಳು ಹೆಚ್ಚಾದಲ್ಲಿ ಎಲ್ಲಾ ಇಲಾಖೆಗಳನ್ನುಒಳಗೂಡಿಸಿಕೊಂಡು ಮುಂಜಾಗ್ರತಾ ಕ್ರಮಗಳನ್ನುಕೈಗೊಳ್ಳಲಾಗುವುದು. ಸರಕಾರದ ಜತೆಗೆಪ್ರತಿಯೊಬ್ಬರೂ ಕೈಜೋಡಿಸಿದರೆ ಮಾನವ ಕುಲಕ್ಕೆತೊಂದರೆಯಾಗದಂತೆ ಬದುಕಲು ದಾರಿಕಂಡುಕೊಳ್ಳಬಹುದು ಎಂದರು.
ಪ್ರಾಣಿ-ಪಕ್ಷಿ ಕಾಪಾಡುವುದು ನಮ್ಮ ಜವಾಬ್ದಾರಿ:ಪ್ರತಿ ವರ್ಷದಂತೆಯೇ ಬೇಸಿಗೆ ಆರಂಭವಾದಾಗಅಂತರಗಂಗೆಯಲ್ಲಿ ಪ್ರಾಣಿಗಳಿಗೆ ನೀರು,ಹಣ್ಣು-ತರಕಾರಿಗಳನ್ನು ನೀಡುವ ಕೆಲಸವನ್ನುಮಾಡುತ್ತಿದ್ದು, ಇಂದು ಚಾಲನೆ ನೀಡಿದ್ದೇವೆ.ಅಂತರ ಗಂಗೆಯಲ್ಲಿ ಸಾವಿರಾರು ಕೋತಿಗಳಿದ್ದು,ಆಹಾರ ಕೊರತೆ ಹೆಚ್ಚಾಗಿದೆ. ಹೀಗಾಗಿ ಸ್ಥಳೀಯರುಬೆಟ್ಟಕ್ಕೆ ಬರುವಾಗ ತರಕಾರಿ, ಹಣ್ಣುಗಳನ್ನುತಂದುಕೊಟ್ಟರೆ ಅನುಕೂಲವಾಗುತ್ತದೆ. ಜತೆಗೆಮನೆಗಳ ಬಳಿ ಪಕ್ಷಿಗಳಿಗೆ ದವಸ ಧಾನ್ಯಗಳು,ನೀರಿನ ವ್ಯವಸ್ಥೆ ಮಾಡಿದರೆ ನಮ್ಮ ಸಣ್ಣಪುಟ್ಟಪಾಪಗಳು ಪರಿಹಾರವಾಗುತ್ತವೆ. ನೈಸರ್ಗಿಕವಾಗಿರುವ ಪ್ರಾಣಿ-ಪಕ್ಷಿಗಳನ್ನು ಕಾಪಾಡುವುದು ನಮ್ಮಜವಾಬ್ದಾರಿ ಎಂದು ಹೇಳಿದರು.ಇದಕ್ಕೂ ಮುನ್ನ ನಗರದ ಕೋಲಾರಮ್ಮದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂಸದರು,ಪ್ರಸಾದ ಹಾಗೂ ಹೆಣ್ಣು ಮಕ್ಕಳಿಗೆ ಹರಿಶಿನ-ಕುಂಕುಮ,ಎಲೆ ಅಡಿಕೆಯನ್ನು ವಿತರಿಸಿದರು.ಉಪವಿಭಾಗಾಧಿ ಕಾರಿ ಸೋಮಶೇಖರ್,ತಹಶೀಲ್ದಾರ್ ಶೋಭಿತಾ ಸೇರಿದಂತೆ ವಿವಿಧಇಲಾಖಾ ಧಿಕಾರಿಗಳು, ಬಿಜೆಪಿ ಮುಖಂಡರುಶುಭ ಕೋರಿದರು. ನಗರಾಭಿವೃದ್ಧಿ ಪ್ರಾ ಧಿಕಾರದಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯ ಅಪ್ಪಿನಾರಾಯಣಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷಸಿ.ಡಿ.ರಾಮಚಂದ್ರ, ಎಸ್ಸಿ ಮೋರ್ಚಾದಹನುಮಂತಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷಬಾಲಾಜಿ, ಮುಖಂಡರಾದ ವಿಜಯ್‌ಕುಮಾರ್,ಅರುಣಮ್ಮ, ಮಮತಾ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.