ಎಸ್‌ಇಜೆಡ್ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ
Team Udayavani, Sep 30, 2020, 2:57 PM IST
ಮುಳಬಾಗಿಲು: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಕಮ್ಮದಟ್ಟಿ ಕಾಮ ನೂರು ಗೇಟ್‌ನಿಂದ ಕುರುಬರಹಳ್ಳಿ ಗೇಟ್‌ವರೆಗಿನ ಸುಮಾರು 1559 ಎಕರೆ ಪ್ರದೇಶವನ್ನು ಕೈಗಾರಿಕಾ ವಲಯಕ್ಕೆ ಗುರುತಿಸಿರುವುದನ್ನು ಕೆಯುಡಿಬಿ ಡೀಸಿ ಅನುರಾಧ ಹಾಗೂ ಉಪವಿಭಾಗಾಧಿಕಾರಿ ಸೋಮಶೇಖರ್ ಮತ್ತಿತರ ಅಧಿಕಾರಿಗಳೊಂದಿಗೆ ಅಬಕಾರಿ ಸಚಿವಎಚ್.ನಾಗೇಶ್‌ಮಂಗಳವಾರ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ನಾಗೇಶ್, ಬಯಲುಸೀಮೆ ಜಿಲ್ಲೆಯಲ್ಲಿ ನಿರುದ್ಯೋಗಹೋಗಲಾಡಿಸಲು ಹಿಂದೆಯೇ ಶಾಸಕ, ಸಚಿವರು ಆಗಿದ್ದ ದಿ.ಆಲಂಗೂರು ಶ್ರೀನಿವಾಸ್‌ಅವರು ಈ ಪ್ರದೇಶವನ್ನು ಕೈಗಾರಿಕಾ ವಲಯ ನಿರ್ಮಾಣಕ್ಕೆ ಸಿದ್ಧತೆ ಮಾಡಿದ್ದರು. ಆದರೆ ನೀರಿನ ಅಭಾವದಿಂದ ಕೈಗೂಡಲಿಲ್ಲ. ಪ್ರಸ್ತುತ ಕೆ.ಸಿ.ವ್ಯಾಲಿ ನೀರು ಈ ಭಾಗದ ಕೆರೆಗಳಲ್ಲಿ ಹರಿಯುವುದರಿಂದ ಮತ್ತೆ ನನೆಗುದಿಗೆ ಬಿದ್ದಿದ್ದ ಕಡತಕ್ಕೆ ಮರುಜೀವ ನೀಡಲಾಗುತ್ತಿದ್ದು, ಸರ್ಕಾರದಮಟ್ಟದಲ್ಲಿಅನುಮೋದನೆಪಡೆದು ಶೀಘ್ರದಲ್ಲೇ ಕೈಗಾರಿಕಾ ವಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಸ್ತುತ ರಾಷ್ಟ್ರೀಯಹೆದ್ದಾರಿಯ ಇಕ್ಕೆಲಗಳಲ್ಲಿ 200 ಮೀಟರ್‌ಗಳಷ್ಟು ಭೂಪ್ರದೇಶವನ್ನು ಕೈಗಾರಿಕಾ ವಲಯಕ್ಕೆಮೀಸಲಿಡಲಾಗಿದೆ.ಅದಕ್ಕೆ ಬೇಕಾದಂತಹ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಸತತ ಪ್ರಯತ್ನ ಮಾಡುವೆ. ಕೈಗಾರಿಕಾ ವಲಯಕ್ಕೆ ಗುರುತಿಸಿರುವ ಪ್ರದೇಶದಲ್ಲಿ ಆರು ಹಳ್ಳಿಗಳ ರೈತರ ಜಮೀನುಗಳು ಬರಲಿದ್ದು, ಅವರಿಗೂ ಸಹ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕಲ್ಪಿಸಲಾಗುವುದು ಎಂದರು.
ಕೆಯುಡಿಬಿ ಅಧಿಕಾರಿ ವೆಂಕಟೇಶ್, ತಹಶೀಲ್ದಾರ್ ಕೆ .ಎನ್. ರಾಜಶೇಖರ್, ಕಂದಾಯ ನಿರೀಕ್ಷಕ ಸುಬ್ರಹ್ಮಣಿ, ಗ್ರಾಮಲೆಕ್ಕಾಧಿಕಾರಿ ಗಳಾದ ಮಾನಸ, ಕಿರಣ್, ಗಿರೀಶ್ ಗೌಡ, ದರಖಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ಜಿಪಂ.ಮಾಜಿ ಸದಸ್ಯ ಬಿ.ಕೆ.ವೆಂಕಟನಾರಾಯಣ್, ಯಳಗೊಂಡಹಳ್ಳಿ ಚಿನ್ನಪ್ಪಯ್ಯ, ಆವಣಿ ವಿಜಿಕುಮಾರ್, ಗೊಲ್ಲಹಳ್ಳಿ ಜಗದೀಶ್, ಮಲ್ಲಪ್ಪನಹಳ್ಳಿ ವೆಂಕಟೇಶ್, ದೇವರಾಯಸಮುದ್ರ ಸೋಮಶೇಖರ್ ಸೇರಿದಂತೆ ಹಲವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.