ಶಾಸಕರ ಖರೀದಿ ಯತ್ನದ ಸುಳಿವು
ಶಾಸಕ ರಮೇಶ್, ಬಿಜೆಪಿ ಸಂಸದ ಜಾಧವ್ ಭೇಟಿ ಆತಂಕವಿಲ್ಲ: ಸಚಿವ ಕೃಷ್ಣಬೈರೇಗೌಡ
Team Udayavani, May 26, 2019, 1:10 PM IST
ಕೋಲಾರದಲ್ಲಿ ಸಚಿವ ಕೃಷ್ಣಬೈರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋಲಾರ: ರಾಜ್ಯದ ಸಮ್ಮಿಶ್ರ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಜನರಿಗೆ ತಿಳಿಸುವಲ್ಲಿ ಆದ ವೈಫಲ್ಯವೇ ಲೋಕಸಭಾ ಚುನಾವಣೆಯ ಹಿನ್ನಡೆಗೆ ಕಾರಣವಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರದಿದ್ದರೂ ಬಿಜೆಪಿ ಕಳೆದ 12 ತಿಂಗಳಿನಿಂದ ಸರ್ಕಾರ ಉರುಳಿಸಲು ವಾಮಮಾರ್ಗದ ಮೂಲಕ ಪ್ರಯತ್ನ ಮುಂದುವರಿಸಿದೆ. ಬಿಜೆಪಿ ಆಪರೇಷನ್ ಕಮಲದ ನಿರಂತರ ಪ್ರಯತ್ನ ವಿಫಲಗೊಳಿಸಿದ್ದೇವೆ, ಶಾಸಕರನ್ನು ಹಣ ಕೊಟ್ಟು ಖರೀದಿಸಿ ಸರ್ಕಾರ ಕೆಡವಲು ನಡೆಸುವ ಪ್ರಯತ್ನ ಈಗಲೂ ಮುಂದುವರಿದಿರುವ ಸುಳಿವು ನಮಗೆ ಸಿಕ್ಕಿದೆ ಎಂದು ಹೇಳಿದರು.
ಜಾಧವ್ ಭೇಟಿ ಮಾಡಿದ್ದಕ್ಕೆ ಆತಂಕವಿಲ್ಲ: ಬಿಜೆಪಿ ನಡೆಸಿರುವ ಆಪರೇಷನ್ ಕಮಲದ ಎಲ್ಲಾ ಪ್ರಯೋಗಗಳನ್ನು ಕಳೆದ 12 ತಿಂಗಳಿಂದ ಮೆಟ್ಟಿ ನಿಂತಿದ್ದೇವೆ. ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸಂಸದ ಉಮೇಶ್ ಜಾಧವ್ ಅವರನ್ನು ಭೇಟಿ ಮಾಡಿದ್ದಕ್ಕೆ ನಮಗೆ ಆತಂಕವೇನೂ ಇಲ್ಲ.
ಅವರ ಎಲ್ಲಾ ಪ್ರಯತ್ನ ಮೆಟ್ಟಿ ನಿಲ್ಲುವ ಶಕ್ತಿ ನಮ್ಮಲ್ಲಿದೆ, ಎರಡೂ ಪಕ್ಷಗಳ ಶಾಸಕರು, ಸಚಿವರು, ಮುಖ್ಯಮಂತ್ರಿಗಳು, ಸಿದ್ದರಾಮಯ್ಯನವರು ಸುದೀರ್ಘ ಚರ್ಚೆ ನಡೆಸಿ ಸರ್ಕಾರವನ್ನು ಸದೃಢವಾಗಿ ನಿಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ವಿಶ್ವಾಸ ಗಳಿಸುವಲ್ಲಿ ವಿಫಲ: ಸರ್ಕಾರ ಸದೃಢವಾಗಿ ಕೆಲಸ ಮಾಡಿ ಕಾಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಗಮನ ಹರಿಸಲು ಎರಡೂ ಪಕ್ಷದ ಸಚಿವರ ಸಭೆಯಲ್ಲಿ ನಿರ್ಧರಿಸಲಾಗಿದೆ. ಸವಾಲುಗಳನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಇದೆ. ಜನರ ಭಾವನೆ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸ್ಪಷ್ಟತೆ ಮೂಡಿದೆ: ಮೈತ್ರಿ ಸರ್ಕಾರ ಸಮನ್ವಯದಿಂದ ಕೆಲಸ ಮಾಡುತ್ತಿದೆ.
ನಮ್ಮ ಕೆಲವು ಸದಸ್ಯರು ಅಚಾತುರ್ಯದಿಂದ ಹೇಳಿದ ಮಾತುಗಳಿಗೆ ಅಪಾರ್ಥ ಕಲ್ಪಿಸಿ ಗೊಂದಲ ವಾತಾವರಣ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಗೊಂದಲಕ್ಕೆ ಎಡೆಮಾಡಿಕೊಟ್ಟಿರುವ ಹೇಳಿಕೆಗಳಿಗೆ ಇನ್ಮು ಮುಂದೆ ಅವಕಾಶ ನೀಡದಂತೆ ಎಚ್ಚೆತ್ತು ಸರ್ಕಾರವನ್ನು ಉಳಿಸಿ ಕೆಲಸ ಮಾಡುವ ಬಗ್ಗೆ ಸಚಿವರು, ಶಾಸಕರಲ್ಲಿ ಸ್ಪಷ್ಟತೆ ಮೂಡಿಸಲಾಗಿದೆ ಎಂದು ಹೇಳಿದರು.
ನಮ್ಮಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹಿರಿಯರ ಸಮ್ಮುಖದಲ್ಲಿ ಚರ್ಚಿಸಿ ಗೊಂದಲ ಇದೆ ಎನ್ನುವಂತೆ ಕಾಣಲು ಬಿಡದಂತೆ ಎಚ್ಚೆತ್ತು ಕೆಲಸ ಮಾಡಬೇಕು. ಇನ್ನೂ ಸುಧಾರಣೆಗೆ ಅವಕಾಶ ಇದೆ. ಶುಕ್ರವಾರ ರಾತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ 2 ಗಂಟೆಗಳ ಕಾಲ ಚರ್ಚೆ ನಡೆಸಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.
ಜನರಲ್ಲಿ ನಂಬಿಕೆ ತನ್ನಿ: ಇವಿಎಂ ಕುರಿತು ರಾಷ್ಟ್ರ ಮಟ್ಟದ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಈ ಕುರಿತು ಜನರಲ್ಲಿ ಮತ್ತು ನಾಯಕರಲ್ಲಿ ವಿಶ್ವಾಸ, ನಂಬಿಕೆ ಮೂಡಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡಿಲ್ಲ. ಹೀಗಾಗಿ ಅನುಮಾನ ನಾನಾ ರೀತಿ ಮುಂದುವರಿಯುತ್ತಿದೆ. ಅನುಮಾನಕ್ಕೆ ಕೊನೆಯಾಡಲು ನ್ಯೂನ್ಯತೆ ಸರಿಮಾಡಿಕೊಂಡು ಜನರಲ್ಲಿ ನಂಬಿಕೆ ತರುವ ಕೆಲಸವನ್ನು ಯಾಕೆ ಮಾಡಲು ಆಗುತ್ತಿಲ್ಲ ಎಂಬುದಕ್ಕೆ ಆಯೋಗ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ದೂಷಿಸಲಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ನಾನು ಶಾಸಕನಾಗಿರುವ ಕ್ಷೇತ್ರದಲ್ಲೇ ನನಗೆ ಬಹುಮತ ಬಂದಿಲ್ಲ, ಆ ವಾತಾವರಣ ರಾಜ್ಯ ಮತ್ತು ರಾಷ್ಟ್ರದ ನಗರದಲ್ಲಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲೂ ಕಂಡುಬಂದಿದೆ. ಈ ರೀತಿ ಇರುವಾಗ ಹಿನ್ನಡೆಗೆ ಬೇರೆ ವ್ಯಕ್ತಿಗಳ ಮೇಲೆ ದೂಷಣೆ ಮಾಡಲು ಹೋದರೆ ಸ್ವಕ್ಷೇತ್ರದಲ್ಲೇ ನನ್ನ ಹಿನ್ನಡೆಗೆ ನಾನು ಯಾರನ್ನು ದೂಷಿಸಲಿ ಎಂದು ಪ್ರಶ್ನಿಸಿದರು.
ಸೋಲಿಗೆ ಕಾರಣವಾದ ಅಂಶಗಳನ್ನು ವಿಮರ್ಶಿಸಿ, ಮೂಲ ಕಾರಣವನ್ನು ಆತ್ಮವಿಮರ್ಶೆ ಮಾಡಿಕೊಂಡರೆ ಭವಿಷ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಬಹುದು. ಸೋಲಿಗೆ ಮತ್ತೂಬ್ಬರ ಮೇಲೆ ಬೆರಳು ತೋರಿಸುವುದು ಕಾರ್ಯಸಾಧುವಲ್ಲ, ಸಮಸ್ಯೆಗೆ ಪರಿಹಾರವೂ ಅಲ್ಲ.
ಚುನಾವಣೆ ಸಂದರ್ಭದಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆ ಆತ್ಮಾವಲೋಕನ ನಡೆಸಿ ಪಕ್ಷ ಕಟ್ಟುವ ಕುರಿತು ಚರ್ಚೆಯಾಗುತ್ತಿದ್ದು, ಮೈತ್ರಿ ಧರ್ಮ ಕಾಪಾಡಲು ಎಲ್ಲರೂ ಬದ್ಧರಾಗಿದ್ದೇವೆ ಎಂದರು. ಸಚಿವ ಶಿವಶಂಕರರೆಡ್ಡಿ, ಶಾಸಕ ಕೆ.ವೈ.ನಂಜೇಗೌಡ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.