ಪ್ರೀತಿಸದಿದ್ದರೂ ಬೆದರಿಕೆಗೆ ಹೆದರಿ ಬಾಲಕಿ ಆತ್ಮಹತ್ಯೆ
ಪ್ರೀತಿ ನಿರಾಕರಿಸಿದ್ದಕ್ಕಾಗಿ ವಿಷ ಸೇವಿಸಿದ ಯುವಕ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು
Team Udayavani, Jun 4, 2019, 7:53 AM IST
ಅಪ್ರಾಪ್ತ ಬಾಲಕಿ ವಾಣಿ ಶವ ಪರೀಕ್ಷೆ ಮಾಡಿಕೊಡಬೇಕೆಂದು ಪ್ರತಿಭಟನೆಗೆ ಮುಂದಾದ ಪೋಷಕರನ್ನು ಸಮಾಧಾನ ಮಾಡಿದ ಎಎಸ್‌ಪಿ ಜಾನವಿ.
ಶ್ರೀನಿವಾಸಪುರ: ಬಾಲಕಿಯನ್ನು ಪ್ರೀತಿಸಿ ವಿಷ ಸೇವಿಸಿದ ಮೂರ್ತಿ (18) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರೀತಿಸದಿದ್ದರೂ ಅಪಪ್ರಚಾರ ಮಾಡಿ ಅವಮಾನಿಸಿದ್ದರಿಂದ ಮನ ನೊಂದ ವಾಣಿ (14) ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಸಂಭವಿಸಿದೆ.
ಇತ್ತೀಚೆಗೆ ನಡೆದ ಬೆಳವಣಿಗೆಗಳಲ್ಲಿ ಹುಡುಗ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹುಡುಗನ ಪೋಷಕರು ನಮ್ಮ ಮಗ ಸತ್ತರೆ ನಿಮ್ಮ ಕತೆ ನೋಡುತ್ತೇವೆ ಎಂದು ಬಾಲಕಿಯ ಮನೆಯವರಿಗೆ ಧಮಿಕಿ ಹಾಕಿದ್ದಾರೆ. ಘಟನೆಗೂ ನನಗೂ ಸಂಬಂಧವೇ ಇಲ್ಲದಿದ್ದರೂ ನನ್ನ ಮೇಲೆ ಅಪಪ್ರಚಾರ ಮಾಡಿದ್ದಾರೆ ಎಂದು ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಹಿನ್ನೆಲೆ: 9ನೇ ತರಗತಿ ವಿದ್ಯಾರ್ಥಿನಿ ವಾಣಿಯನ್ನು ಆಕೆ ಒಪ್ಪಿಗೆ ಇಲ್ಲದೆ ಮೂರ್ತಿ (18) ಎಂಬಾತ ನಿನ್ನನ್ನು ಪ್ರೀತಿಸಿದ್ದೇನೆ ಎಂದು ಬುಧವಾರ ಹೇಳಿದಾಗ ಹುಡುಗಿ ನಿರಾಕರಿಸಿದ್ದಾಳೆ. ತನ್ನ ಪ್ರೀತಿ ನಿರಾಕರಿಸಿದ್ದರಿಂದ ಯುವಕ ವಿಷ ಸೇವಿಸಿದ್ದು, ವಿಷಯವರಿತ ಪೋಷಕರು ಅವನನ್ನು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.ಯುವಕನ ಸಂಬಂಧಿಕರು ನಮ್ಮವನು ಸತ್ತರೆ ನಿಮ್ಮ ಕತೆ ನೋಡುತ್ತೇವೆ. ನಿಮ್ಮ ಹುಡುಗಿ ನಮ್ಮವನೊಂದಿಗೆ ಮಾತಾಡಿರುವುದೆಲ್ಲ ರೆಕಾರ್ಡ್ ಆಗಿದೆ ಎಂದು ಶನಿವಾರ ಬಾಲಕಿ ಮನೆ ಬಳಿ ಹೋಗಿ ಯುವಕನ ಪೋಷಕರು ಧಮಿಕಿ ಹಾಕಿದ್ದಾರೆನ್ನಲಾಗಿದೆ.
ನಾನು ಏನು ತಪ್ಪು ಮಾಡದಿದ್ದರೂ ನಮ್ಮ ಮನೆ ಬಳಿ ಬಂದು ನಮ್ಮವರಿಗೆ ಅವಮಾನ ಮಾಡಿದ್ದಾರೆ, ನನ್ನಿಂದ ಯಾರಿಗೂ ತೊಂದರೆ ಆಗಬಾರದೆಂದು ಸೋಮವಾರ ಮಧ್ಯಾಹ್ನ ಯಾರು ಇಲ್ಲದ ವೇಳೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.
ದೂರು: ಮೃತ ಯುವತಿ ತಂದೆ ಕೊನಪ್ಪರೆಡ್ಡಿ ಬೆಳಗ್ಗೆ ನಮ್ಮ ಮನೆ ಬಳಿ ಬಂದ ಮೂರ್ತಿ ಸಂಬಂಧಿಕರು ಶ್ರೀನಿವಾಸ್ ಮತ್ತು ವೆಂಕಟೇಶ್, ವಿಷ ಸೇವಿಸಿರುವುದು ವಾಣಿಯಿಂದಲೆ, ಅವನು ಸತ್ತರೆ ನಿಮ್ಮನ್ನು ಉಳಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಇದರಿಂದ ಮತ್ತು ನಿಂದಿಸಿದ್ದರಿಂದ ಅವಳು ಸಾವಿಗೀಡಾಗಿದ್ದಾಳೆ. ಅವಳ ಸಾವಿಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶ್ರೀನಿವಾಸಪುರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಠಾಣೆ ಎದುರು ಪ್ರತಿಭಟನೆ: ರಾತ್ರಿಯಾದರೂ ಸತ್ತ ಬಾಲಕಿಯ ಮರಣೋತ್ತರ ಪರೀಕ್ಷೆ ಮಾಡದೆ ಬೆಳಗ್ಗೆ ಶವ ಪರೀಕ್ಷೆ ಮಾಡಿ ಕೊಡುತ್ತೇವೆಂದು ಪೊಲೀಸರು ಹೇಳಿದ್ದರಿಂದ ಮೃತಳ ಸಂಬಂಧಿಕರು ಠಾಣೆ ಎದುರು ಪ್ರತಿಭಟನೆಗೆ ಮುಂದಾದರು.
ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾದ ಕೂಡಲೇ ಸ್ಥಳಕ್ಕೆ ಅಡಿಷನಲ್ ಎಸ್ಪಿ ಜಾಹ್ನವಿ ಬಂದು ಎಲ್ಲರನ್ನು ಸಮಾಧಾನ ಮಾಡಿ ಈಗಲೇ ಶವಪರೀಕ್ಷೆ ಮುಗಿಸಿ, ನಿಮಗೆ ಕಳುಹಿಸುತ್ತೇವೆಂದು ಹೇಳಿ ನಂತರ ಸಮಾಧಾನ ಪಡಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಉಮೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ
Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.