ಎಚ್‌ಡಿಕೆ ಹೇಳಿಕೆಗೆ ಸ್ವಪಕ್ಷದ ಶಾಸಕನಿಂದಲೇ ಟೀಕೆ


Team Udayavani, Sep 5, 2021, 3:11 PM IST

ಎಚ್‌ಡಿಕೆ ಹೇಳಿಕೆಗೆ ಸ್ವಪಕ್ಷದ ಶಾಸಕನಿಂದಲೇ ಟೀಕೆ

ಕೋಲಾರ: ಜಿಲ್ಲೆಗೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಕೆ.ಸಿ.ವ್ಯಾಲಿ ನೀರನ್ನು ತಂದು ಈ ಜಿಲ್ಲೆ ಅವರನ್ನೂ ಎಂದು ಮರೆಯಲಾರದಂತಹ
ಕೆಲಸ ಮಾಡಿದ್ದಾರೆ. ಈ ಜಿಲ್ಲೆಯಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಆದರೆ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ
ಅದನ್ನು ಕೊಳಚೆ ನೀರು ಎಂದು ಹೀಗಳೆದಿರುವುದು ಸರಿಯಲ್ಲ ಎಂದು ಶಾಸಕಕೆ.ಶ್ರೀನಿವಾಸಗೌಡ ಕಿಡಿಕಾರಿದರು.

ತಾಲೂಕಿನ ಸೋಮಾಂಬುದಿ ಅಗ್ರಹಾರ ಕೆರೆ ಕೋಡಿ ಹೋಗಿದ್ದು, ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಬರಡು ಭೂಮಿ ಎನಿಸಿಕೊಂಡಿರುವ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರೇ ಬಹಳ ಪ್ರಾಮುಖ್ಯವಾಗಿದೆ. ಈ ಯೋಜನೆಯ ನೀರು ರೈತರಿಗೆ ಅನಿವಾರ್ಯವಾಗಿದೆ ಎಂದು ವಿವರಿಸಿದರು.

ಕೆ.ಸಿ.ವ್ಯಾಲಿ ನೀರನ್ನು ನಾನೂ ಕೂಡಾ ಕುಡಿದಿದ್ದೇನೆ, ನಾನೇನು ಸತ್ತು ಹೋಗಿದ್ದೇನೆಯೇ, ಕುಮಾರಸ್ವಾಮಿ ಅವರು ಕೋಲಾರದಲ್ಲಿ ಇತ್ತೀಚೆಗೆ
ನಡೆದ ವಿವಾಹ ಸಮಾರಂಭಕ್ಕೆ ಆಗಮಿಸಿದ ವೇಳೆ ಕೆ.ಸಿ.ವ್ಯಾಲಿ ನೀರನ್ನು ಕೊಳಚೆ ನೀರೆಂದು ಬಣ್ಣಿಸಿದರು ಇದು ಸರಿಯಲ್ಲ, ಅವರು ಈ ರೀತಿ
ಮಾತನಾಡಬಾರದಿತ್ತು ಎಂದು ಹೇಳಿದರು.

ಎಚ್‌ಡಿಕೆ ಹೇಳಿಕೆ ಸಹಿಸಿಕೊಳ್ಳಲಾಗಲಿಲ್ಲ: ನನ್ನ ಮುಂದೆಯೇ ಈ ಮಾತು ಹೇಳಿದ್ದು ನನಗೆ ಅದನ್ನು ಜೀರ್ಣಿಸಿಕೊಳ್ಳಲು ಆಗಲಿಲ್ಲ, ನಮಗೆ ಆ
ನೀರು ಬೇಕಾಗಿತ್ತು, ನಾವು ರೈತರು, ನಮಗೆ ಅದು ಅನಿವಾರ್ಯವಾಗಿತ್ತು. ರಾಜಕಾರಣ ಮುಖ್ಯವಲ್ಲ, ನಾನೂ ಕೂಡಾ ಮೂಲತಃ ರೈತ, ಕೊಚ್ಚೆ ನೀರು ನಾನೂ ಕುಡಿದಿದ್ದೇನೆ, ನಮಗೆ ಅದನ್ನು ಬಿಟ್ಟರೆ ಬೇರೆ ವಿಧಿ ಇಲ್ಲ, ನಾನು ಜೆಡಿಎಸ್‌ನಲ್ಲಿದ್ದೇನೆ ಅದರೂ ಕುಮಾರಸ್ವಾಮಿ ಅವರು ಆಡಿದ ಮಾತು ನನಗೆ ಸಹಿಸಿಕೊಳ್ಳಲಿಕ್ಕೆ ಆಗಲಿಲ್ಲ. ಅದಕ್ಕಾಗಿ ಈ ರೀತಿ ಹೇಳಬೇಕಾಯಿತು ಎಂದು ಹೇಳಿದರು.

ಇದನ್ನೂ ಓದಿ:ಡಬಲ್‌ ಡೆಕ್ಕರ್‌ ಬಸ್‌ ಸಂಚಾರ ಪುನಾರಂಭ; 11 ಮಂದಿ ಪ್ರಯಾಣ

ಎಚ್‌ಡಿಕೆ ಮಾತನಾಡಿದ್ದು ತಪ್ಪು: ಈ ಮಧ್ಯೆ ಮುಖಂಡರೊಬ್ಬರು ಅದನ್ನೆಲ್ಲಾ ಯಾಕೆ ಇಲ್ಲಿ ಮಾತನಾಡುತ್ತೀರಿ ಎಂದು ಹೇಳಿದಾಗ ಅದನ್ನು
ಹೇಳಲೇ ಬೇಕಾಗುತ್ತದೆ ಕುಮಾರಸ್ವಾಮಿ ಅವರು ಮಾತನಾಡಿದ್ದು ತಪ್ಪು ಎಂದು ಹೇಳಿದರು. ನನಗೆಕಾಂಗ್ರೆಸ್‌ ಹೊಸದಲ್ಲ, ನಾನು ನಾಲ್ಕು ಸಾರಿ
ಶಾಸಕನಾಗಿ ಗೆದ್ದಿದ್ದೇನೆ, ನಾಲ್ಕು ಪಕ್ಷಗಳಲ್ಲಿ ಗೆದ್ದಿದ್ದೇನೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕಾಲದಲ್ಲಿ ಜನತಾದಳದಿಂದ ಆಯ್ಕೆಯಾದೆ,
ನಂತರ ನಾನೂ ಬೈರೇಗೌಡರು ಜೆಡಿಯು, ನಂತರ ಕಾಂಗ್ರೆಸ್‌ನಲ್ಲಿ ಮಂತ್ರಿಯಾದೆ, ಆ ಸಮಯದಲ್ಲಿ ರಮೇಶ್‌ ಕುಮಾರ್‌ ಅವರಿಗೆ ಮಂತ್ರಿ ಸ್ಥಾನಕೊಡಲಿಲ್ಲವಲ್ಲಾ ಎಂಬ ಬೇಸರಿಕೆ ನನಗೂ ಇತ್ತು, ಅವರು ನನಗಿಂತ ಪ್ರತಿಭಾವಂತರು, ವಾಕ್ಚಾತುರ್ಯ ಮತ್ತು ಶಾಸನ ಸಭೆಯ
ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಿದವರು, ಅವರ ಭಾಷಣ ಕೇಳಿದರೆ ನನಗೆ ಇನ್ನೂ ಕೇಳಬೇಕು ಅನಿಸುತ್ತದೆ, ಈಗಲೂ ಅದನ್ನೇ ರೂಢಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಉಚ್ಚಾಟಿಸಿದ್ರು: ವಿಧಾನಸಭೆಯಲ್ಲೂ ಬಹಳ ಚೆನ್ನಾಗಿ ಮಾತನಾಡುತ್ತಾರೆ ಅವರಲ್ಲಿರುವ ಜ್ಞಾನದಲ್ಲಿ ಕಾಲು ಭಾಗದಷ್ಟು ನನಗಿಲ್ಲ, ನಾನೂ ಕೂಡಾ ಕಾಂಗ್ರೆಸ್‌ನಲ್ಲಿದ್ದವನು ಮೊನ್ನೆನೇ ಕಾಂಗ್ರೆಸ್‌ಗೆ ಟಿಕೆಟ್‌ ಸಿಗಬೇಕಾಗಿತ್ತು ಇಲ್ಲಿನ ಮಹಾನು ಭಾವನೊಬ್ಬ ಅದಕ್ಕೆ ಅಡ್ಡಿ
ಮಾಡಿದ ಜತೆಗೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿಸಿ ಬಿಟ್ಟ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ನಾಗ
ನಾಳ ಸೋಮಣ್ಣ, ಎಂ.ಎಲ್‌.ಅನಿಲ್‌ಕುಮಾರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ.ಕೃಷ್ಣಪ್ಪ, ತಿಮ್ಮರಾಯಪ್ಪ, ವಿಶ್ವನಾಥ್‌ ಮತ್ತಿತರರಿದ್ದರು.

ಕೋಲಾರ ಜಿಲ್ಲೆ ಗೆಯಾವ ನದಿ ಮೂಲವೂ ಇಲ್ಲ : ಮಾಜಿ ಸ್ಪೀಕರ್‌
ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಿಗೂ ಒಂದೊಂದು ನದಿ ನೀರು ಬರುತ್ತದೆ. ಆದರೆ,ಕೋಲಾರ ಜಿಲ್ಲೆಗೆ ಅಂತಹ ಯಾವ ವರದಾನವೂ ಇಲ್ಲ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಈ ಜಿಲ್ಲೆಗೆ1300ಕೋಟಿ ರೂ.ನಲ್ಲಿಕೆ.ಸಿ.ವ್ಯಾಲಿ ನೀರನ್ನು ನೀಡಿದರು ಎಂದು ಶಾಸಕ ರಮೇಶ್‌ ಕುಮಾರ್‌ ವಿವರಿಸಿದರು.

ಕೆ.ಸಿ.ವ್ಯಾಲಿ ನೀರಿಗಾಗಿ ಹೋರಾಟ ಮಾಡಿದವರು ಸಾಕಷ್ಟು ಜನರಿದ್ದಾರೆ. ಆದರೆ, ಈ ಯೋಜನೆಯಲ್ಲಿ ಇನ್ನೂಕೆಲಸವಿದೆ. ಜಿಲ್ಲೆಯ ಎಲ್ಲಾ ಕೆರೆಗಳಿಗೂ ಇದರ ನೀರನ್ನು ಹರಿಸಬೇಕಾಗಿದೆ ಎಂದರು. ಸಕಲೇಶ್ವರ ಭಾಗದಲ್ಲಿ ಬಿದ್ದ ಮಳೆಯ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಅಲ್ಲಿನಕೇವಲ 8 ಟಿಎಂಸಿ ನೀರನ್ನು ಈ ಭಾಗಕ್ಕೆ ತರುವುದು ನಮ್ಮ ಉದ್ದೇಶವಾಗಿದೆ. ಈ ಬಗ್ಗೆ ಯಾರೂ ಏನಾದರೂ ಮಾತನಾಡಿಕೊಳ್ಳಲಿ. ಆದರೆ, ನೀರು ತರುವುದು ನಮ್ಮ ಗುರಿ ಎಂದು ಹೇಳಿದರು.

 

ಟಾಪ್ ನ್ಯೂಸ್

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.