ಪಾಳುಬಿದ್ದಿರುವ ಕಸಾಪ ಕಚೇರಿಗೆ ಬೇಕು ಕಾಯಕಲ್ಪ


Team Udayavani, Nov 10, 2019, 5:28 PM IST

kolar-tdy-2

ಮುಳಬಾಗಿಲು: ಕನ್ನಡ ನಾಡು ನುಡಿ, ಸಾಹಿತ್ಯವನ್ನು  ತಾಲೂಕಿನಲ್ಲಿ ಪಸರಿಸಲು ಕನ್ನಡ ಸಾಹಿತ್ಯ ಪರಿಷತ್‌ ಘಟಕವು ತನ್ನ ಕಾರ್ಯಚಟುವಟಿಕೆಗಳಿಗೆ ಒಂದೂವರೆ ವರ್ಷಗಳ ಹಿಂದೆ ಪ್ರಾರಂಭಿಸಿದ ಕಚೇರಿ ಪದಾಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳುಬಿದ್ದಿದೆ. ಸುತ್ತಲೂ ಗಿಡ ಗಂಟಿಗಳು ಬೆಳೆದು ಮಲಮೂತ್ರ ವಿಸರ್ಜನಾ ತಾಣವಾಗಿದೆ.

ಆಂಧ್ರದಂಚಿನಲ್ಲಿರುವ ತಾಲೂಕಿನ 30 ಕಿ.ಮೀ. ವ್ಯಾಪ್ತಿಯಲ್ಲಿ 350 ಹಳ್ಳಿಗಳಲ್ಲಿ 3ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಇಲ್ಲಿನ ಜನರ ಮಾತೃ ಭಾಷೆ ಮತ್ತು ಆಡಳಿತ ಭಾಷೆ ಕನ್ನಡವೇ ಆದರೂ, ಆಡು ಭಾಷೆ ಮಾತ್ರ ತೆಲುಗು. ಹೀಗಾಗಿ ತಾಲೂಕಿನಲ್ಲಿ ಕನ್ನಡ ಅಭಿವೃದ್ಧಿ ಪಡಿಸಲು ಸಂಘಟನೆಗಳ ಹೋರಾಟಗಾರರಲ್ಲದೆ, ಸರ್ಕಾರಿ ನೌಕರಿಯಲ್ಲಿರುವ ಉದ್ಯೋಗಿಗಳು ಮತ್ತು ಭಾಷಾ ಜ್ಞಾನವಿರುವ ಮೇಧಾವಿಗಳು ಕಸಾಪದಲ್ಲಿ ಸದಸ್ಯತ್ವ ಹೊಂದಿ, ಕನ್ನಡ ಸಾಹಿತ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.

ಮೇನಲ್ಲಿ ಉದ್ಘಾಟನೆ: ಇಂತಹ ಧ್ಯೇಯೋದ್ದೇಶಗಳಿಗಾಗಿ ಕಸಾಪ ಘಟಕವು ಒಂದೂವರೆ ವರ್ಷಗಳ ಹಿಂದೆ ಕನ್ನಡ ಕಾರ್ಯ ಚಟುವಟಿಕೆ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೊಂದಿಕೊಂಡಿರುವ ಕಟ್ಟಡ ವನ್ನು ಪಡೆದುಕೊಂಡಿದೆ. ಅಂತೆಯೇ ತಾಲೂಕು ಕಸಾಪ ಅಧ್ಯಕ್ಷ ಜಯರಾಮ್‌ ರೆಡ್ಡಿ ಈ ಕಟ್ಟಡವನ್ನು ಮೇ ತಿಂಗಳಿನಲ್ಲಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಗಂಗಿರೆಡ್ಡಿ ಅವರ ಮೂಲಕ ಉದ್ಘಾಟನೆ ಮಾಡಿಸಿದ್ದರು.

ಮಲಮೂತ್ರ ವಿಸರ್ಜನೆ ತಾಣ: ಆದರೆ, ಕಸಾಪ ಘಟಕದ ಪದಾಧಿಕಾರಿಗಳು ಯಾವ ಉದ್ದೇಶಕ್ಕಾಗಿ ಈ ಕಟ್ಟಡವನ್ನು ಶಿಕ್ಷಣ ಇಲಾಖೆಯಿಂದ ಪಡೆದುಕೊಂಡರೋ ಆ ಒಂದು ಉದ್ದೇಶವನ್ನು ಮರೆತಿದ್ದಾರೆ. ಇದಕ್ಕೆ ಕಸಾಪ ಕಚೇರಿಯಲ್ಲಿ ಹಾಕಿರುವ ಬೀಗವೇ ಸಾಕ್ಷಿ. ಕಚೇರಿ ತೆರೆದು ಅದರಲ್ಲಿ ಯಾವುದೇ ಕನ್ನಡ ಕಾರ್ಯಕ್ರಮ, ಸಭೆ ನಡೆಸದೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸಿದೆ. ಇದ ರಿಂದ ಕಟ್ಟಡದಲ್ಲಿ ದೂಳು ತುಂಬಿದ್ದು, ಕ್ರಿಮಿಕೀಟಗಳು ಮತ್ತು ಜೇಡರ ಬಲೆ ತುಂಬಿದೆ. ಕಚೇರಿಯ ಮುಂಭಾಗ ಕಸ ತುಂಬಿಕೊಂಡು, ಗಿಡಗಂಟಿಗಳು ಬೆಳೆದು ತಿಪ್ಪೆಗುಂಡಿಯಾಗಿದ್ದು, ಮಲ ಮೂತ್ರಗಳ ವಿಸರ್ಜನಾ ತಾಣವಾಗಿ ಪರಿವರ್ತನೆಗೊಂಡಿದೆ. ಕಸಾಪ ತಾಲೂಕು ಅಧ್ಯಕ್ಷ ಜಯರಾಮರೆಡ್ಡಿ ಆಗಲಿ, ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್‌ ಅವರಾಗಲಿ, ನಗರದಲ್ಲಿರುವ ಕಸಾಪ ಕಚೇರಿ ಕಡೆ ಗಮನ ಹರಿಸದೆ ಇರುವುದು ಬೇಸರದ ಸಂಗತಿ.

 

-ಎಂ.ನಾಗರಾಜಯ್ಯ

ಟಾಪ್ ನ್ಯೂಸ್

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.