ಸಡಿಲಿಕೆ ಮಾಡಿದ್ರೂ ಅಂಗಡಿ ತೆರೆಯುತ್ತಿಲ್ಲ!

ಅಂಗಡಿ ತೆರೆಯಲು ಅನುಮತಿ ನೀಡಿಲ್ಲ ; ತರಕಾರಿ , ಹಣ್ಣಿನ ವ್ಯಾಪಾರ ಎಂದಿನಂತೆ

Team Udayavani, Apr 30, 2020, 5:10 PM IST

ಸಡಿಲಿಕೆ ಮಾಡಿದ್ರೂ ಅಂಗಡಿ ತೆರೆಯುತ್ತಿಲ್ಲ!

ಸಾಂದರ್ಭಿಕ ಚಿತ್ರ

ಕೋಲಾರ: ಲಾಕ್‌ಡೌನ್‌ ನಿಯಮಗಳ ಸಡಿಲಿಕೆಯಾಗಿದ್ದರಿಂದ ಜಿಲ್ಲಾ ಕೇಂದ್ರ ಕೋಲಾರದಲ್ಲಿ ಬುಧವಾರ ಹಲವಾರು ವ್ಯಾಪಾರಿಗಳು ಬೆಳಗ್ಗಿಯೇ ಅಂಗಡಿ ತೆರೆಯಲು ಮುಂದಾದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಮಧ್ಯಾಹ್ನದವರೆಗೂ ಕೆಲವು ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆಯೇ  ನಿಂತು ಕಾದು ಪೊಲೀಸ್‌ ಬಂದೋಬಸ್ತ್ ಕಂಡು ವಾಪಸ್‌ ಹೋದರು. ಕೆಲವರು ಅರ್ಧ ಬಾಗಿಲು ಅಂಗಡಿ ತೆರೆದು ಸ್ವಚ್ಛತಾ ಕಾರ್ಯ ನಡೆಸಿದರು.

ನಗರದ ಎಂ.ಜಿ.ರಸ್ತೆಯಲ್ಲಿ ಮಧ್ಯಾಹ್ನದ ವೇಳೆಗೆ ಬಹುತೇಕ ಲಾಕ್‌ಡೌನ್‌ ದೃಶ್ಯವೇ ಕಂಡು ಬಂದಿತು. ಎಂದಿನಂತೆ ಹಣ್ಣು, ಹಾಲು, ತರಕಾರಿ, ದಿನಸಿ ಅಂಗಡಿ, ಹಾರ್ಡ್ ವೇರ್‌ ಅಂಗಡಿಗಳು ತೆರೆದಿದ್ದು ಕಂಡು ಬಂದಿತು. ಬುಧವಾರದಿಂದ ಪ್ರಭಾತ್‌ ಚಿತ್ರಮಂದಿರ ಸಮೀಪದಲ್ಲಿ 40ಕ್ಕೂ ಹೆಚ್ಚು ಜೆರಾಕ್ಸ್‌ ಮತ್ತು ಕಂಪ್ಯೂಟರ್‌ ಅಂಗಡಿಗಳ ಪೈಕಿ ಮೂರು 4 ಅಂಗಡಿಗಳನ್ನು ಮಾತ್ರವೇ ತೆರೆಯಲಾಗಿತ್ತು.

ಕೈಗಾರಿಕೆಗಳಿಗೆ ಅನುಮತಿ: ಕೋಲಾರ ನಗರ ಸಭೆ ವ್ಯಾಪ್ತಿಗೊಳಪಡದ ಹೊರ ವಲಯದಲ್ಲಿರುವ ಕೈಗಾರಿಕೆಗಳನ್ನು ತೆರೆಯಲು ಅನುಮತಿ ಸಲಾಗಿದೆ ಈ ಬಗ್ಗೆ ಡಿ.ಸಿ. ನೇತೃತ್ವದಲ್ಲಿ ಸಭೆ ನಡೆದು ಮಾರ್ಗ ಸೂಚಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನರಸಾಪುರ, ವೇಮಗಲ್‌ ಪ್ರದೇಶದ ಕೈಗಾರಿಕೆ ತೆರೆಯಲು ಮಾಲಿಕರು ಸಿದ್ಧತೆ ನಡೆಸುತ್ತಿದ್ದು, ಒಂದರೆಡು ದಿನಗಳಲ್ಲಿ ತೆರೆಯಲಾಗುತ್ತಿದೆ. ಆಹಾರ ಸಂಸ್ಕರಣೆ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ.

ಹೋಟೆಲ್‌ – ಸಾರಿಗೆ: ಹಿಂದಿನ ನಿರ್ಧಾರದಂ ತೆಯೇ ಕೆಲವು ಹೋಟೆಲ್‌ಗಳಲ್ಲಿ ಪಾರ್ಸಲ್‌ಗ‌ಳಿಗಷ್ಟೇ ಅನುಮತಿಸಲಾಗಿದ್ದು, ಇದೇ ಪದ್ಧತಿ ಬುಧವಾರವೂ ಮುಂದುವರಿಯಿತು. ಸಾರಿಗೆ ಸಂಸ್ಥೆಯ ಮತ್ತು ಖಾಸಗಿ ಬಸ್‌ ಕಾರು ಆಟೋಗಳಿಗೆ ಅನುಮತಿ ನೀಡಿಲ್ಲ.

ಮುಂಜಾನೆ ಕೆಲ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದರಿಂದ ವರ್ತಕರು ಸಾಮೂಹಿಕವಾಗಿ ಅಂಗಡಿ ತೆರೆಯುವ ಪ್ರಯತ್ನ ಮಾಡಿಲ್ಲ.
●ಎಸ್‌.ಸಚ್ಚಿದಾನಂದ, ಎಂ.ಜಿ.ರಸ್ತೆ ವರ್ತಕ

ಷರತ್ತು ಮೇರೆಗೆ ಹೊರ ವಲಯದ ಕೈಗಾರಿಕೆ ತೆರೆಯಲು ಅನುಮತಿಸಲಾಗಿದೆ. ಆಹಾರ ಸಂಸ್ಕರಣಾ ಕೈಗಾರಿ ಕೆಗಳು ತೆರೆದಿದ್ದು, ಇನ್ನುಳಿದವು ನಿಯಮಾವಳಿಗಳ ಪ್ರಕಾರ
ತೆರೆಯಲು ಸಿದ್ಧತೆ ನಡೆಯುತ್ತಿದೆ.
●ರವಿಚಂದ್ರ, ಉಪ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಅಂಗಡಿ ಮುಂಗಟ್ಟು ತೆರೆಯಬಹುದಾಗಿದೆ. ಆದರೂ, ಬುಧವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಹಾಗೂ ಡಿ.ಸಿ. ಸತ್ಯಭಾಮ ನೀಡುವ ನಿರ್ದೇಶನಗಳ ಮೇರೆಗೆ ವ್ಯಾಪಾರ ವಹಿವಾಟು ಆರಂಭವಾಗಬಹುದು.
●ಶ್ರೀಕಾಂತ್‌, ಪೌರಾಯುಕ್ತ, ನಗರಸಭೆ ಕೋಲಾರ.

●ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.