ಮತದಾನದಲ್ಲಿ ಜಿಲ್ಲೆ ಈ ಬಾರಿ ದೇಶಕ್ಕೆ ಮಾದರಿಯಾಗಲಿ
Team Udayavani, Apr 3, 2019, 3:00 AM IST
ಕೋಲಾರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕನಿಷ್ಠ ಶೇ.85ಕ್ಕೇರುವ ಮೂಲಕ ದೇಶಕ್ಕೆ ಜಿಲ್ಲೆಯಲ್ಲಿ ಮತದಾರರು ಜಾಗೃತರಾಗಿದ್ದಾರೆ ಎಂಬುದನ್ನು ತೋರಿಸಬೇಕು ಎಂದು ಜಿಪಂ ಸಿಇಒ ಜಿ.ಜಗದೀಶ್ ಮನವಿ ಮಾಡಿದರು.
ಜಿಲ್ಲಾಡಳಿತ, ಸ್ವೀಪ್ ಸಮಿತಿ, ಆಟೋ ಚಾಲಕರ ಸಂಘದಿಂದ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಅವರು, ಕಳೆದ ವರ್ಷ ಶೇ.74 ಮತದಾನವಾಗಿತ್ತು. ಅದು ಈ ಬಾರಿ ಕನಿಷ್ಠ 85 ಮೀರಬೇಕು ಎಂದು ತಿಳಿಸಿದರು.
ಆಟೋಗಳಿಗೆ ಮತದಾನ ಜಾಗೃತಿಯ ಸ್ಟಿಕ್ಕರ್‌ಗಳನ್ನು ನಾವೇ ಮುದ್ರಿಸಿಕೊಡಬೇಕಿತ್ತು. ಆದರೆ, ಸಂಘದಿಂದಲೇ ಮುದ್ರಿಸಿಕೊಂಡು ನಮ್ಮ ಜತೆ ಕೈಜೋಡಿಸಿ ಮತದಾನ ಜಾಗೃತಿಗೆ ಮುಂದಾಗಿರುವುದು ಶ್ಲಾಘನೀಯ ಮತ್ತು ಇತರರಿಗೂ ಮಾದರಿಯಾಗಿದ್ದು, ಏ.18ರ ಮತದಾನವನ್ನು ಪ್ರತಿಯೊಬ್ಬರಿಗೂ ತಿಳಿಸಬೇಕಾಗಿದೆ ಎಂದು ಹೇಳಿದರು.
ಮತದಾನ ಮರೆಯಬೇಡಿ: ದೇಶದ ಭದ್ರ ಬುನಾದಿಗೆ ಇಟ್ಟಿಗೆಯನ್ನು ಹಾಕುವುದಕ್ಕೆ ಚುನಾವಣೆ, ಮತದಾನವೇ ಅಸ್ತ್ರಗಳು. ಆ ದಿನಂದು ಯಾವುದೇ ಕಾರಣಕ್ಕೂ ಆಸೆ, ಆಮಿಷಗಳಿಗೆ ಒಳಗಾಗದೆ ನೈತಿಕವಾಗಿ ಹೆಚ್ಚು ಮತದಾನ ಮಾಡಬೇಕು ಎಂದು ಹೇಳಿದ ಅವರು, ರಜೆ ಇರುತ್ತದೆ ಎಂದು ಮೋಜು ಮಸ್ತಿಗೆ ಒಳಗಾಗುವುದು ಬೇಡ ಎಂದು ಸಲಹೆ ನೀಡಿದರು.
ಉಚಿತ ಆಟೋ ಸೇವೆ: ಆಟೋ ಚಾಲಕರ ಮತ್ತು ಮಾಲಿಕರ ಸಂಘದ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್, ಏ.18ರ ಮತದಾನ ದಿನದಂದು ಜಿಲ್ಲೆಯಲ್ಲಿ ಅಶಕ್ತರು, ವೃದ್ಧರು ಮತ್ತು ಅಂಗವಿಕಲರಿಗೆ ಆಟೋ ಸೇವೆ ಉಚಿತವಾಗಿ ನೀಡಲು ನಿರ್ಧರಿಸಲಾಗಿರುವುದಾಗಿ ತಿಳಿಸಿದರು.
ರಾಜಕೀಯ ಸೋಂಕಿಲ್ಲದ ಶ್ರಮಿಕ ವರ್ಗಕ್ಕೆ ಆಟೋ ಚಾಲಕರು ಸೇರಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ನಮ್ಮಿಂದಾಗುವ ಸೇವೆಯನ್ನು ನಿರಂತರ ಮಾಡಿಕೊಂಡು ಬರುತ್ತಿದ್ದೇವೆ. ಹೀಗಾಗಿ ಅಂದು ಅಶಕ್ತರು, ವೃದ್ಧರು ಹಾಗೂ ಅಂಗವಿಕಲರಿಗೆ ಉಚಿತ ಆಟೋ ಸೇವೆಯನ್ನು ನೀಡುವುದಾಗಿ ಘೋಷಿಸಿದರು.
ಸ್ವೀಪ್ ಸಮಿತಿಯ ಎಂ.ಸೌಮ್ಯಾ ಮತದಾನದ ಪ್ರತಿಜ್ಞಾವಿಧಿ ಬೋಧಿ ಸಿದರು. ಪ್ರತಿ ಆಟೋಗಳಿಗೂ ಮತದಾನ ಜಾಗೃತಿಯ ಸ್ಟಿಕ್ಕರ್‌ಗಳನ್ನು ಅಂಟಿಸಲಾಯಿತು. ಡೂಂವೈಟ್ ವೃತ್ತದಿಂದ ಆರಂಭಗೊಂಡ ಮತದಾನ ಜಾಗೃತಿ ಆಟೋ ಜಾಥಾದಲ್ಲಿ ಸ್ವತಃ ಚಾಲನೆ ಮಾಡಿ ಕ್ಲಾಕ್‌ಟವರ್, ಬಸ್‌ನಿಲ್ದಾಣ, ಎಂ.ಬಿ.ರಸ್ತೆ, ಮೆಕ್ಕೆ ವೃತ್ತ, ಕಾಲೇಜು ವೃತ್ತ, ಬಂಗಾರಪೇಟೆ ವೃತ್ತದಲ್ಲಿ ಸಂಚರಿಸಲಾಯಿತು.
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ, ಜಿಪಂ ಅ ಧಿಕಾರಿ ಗೋವಿಂದಗೌಡ, ನಗರಸಭೆ ವ್ಯವಸ್ಥಾಪಕ ತ್ಯಾಗರಾಜ್, ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.