ತೊರಲಕ್ಕಿ ಶಾಲೆ ಕೋಲಾರ ತಾಲೂಕಿಗೆ ಫಸ್ಟ್
Team Udayavani, May 2, 2019, 9:59 AM IST
ಟೇಕಲ್: ಹೋಬಳಿಯ ತೊರಲಕ್ಕಿ ಗ್ರಾಮದ ಆರ್‌ಎಂಎಸ್‌ಎ ಸರ್ಕಾರಿ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.98.33 ಫಲಿತಾಂಶ ಪಡೆದು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಪ್ರತಿಬಾರಿ ಶೇ.100 ಫಲಿತಾಂಶ ಪಡೆಯುತ್ತಿತ್ತು. ಪರೀಕ್ಷೆ ಬರೆದಿದ್ದ 60 ವಿದ್ಯಾರ್ಥಿಗಳಲ್ಲಿ 6 ಅತ್ಯುನ್ನತ, 50 ಪ್ರಥಮ, ಮೂವರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ತಾಪಂ ಮಾಜಿ ಉಪಾಧ್ಯಕ್ಷ ಟಿ.ಎಂ. ಅಶೋಕ್‌ಕುಮಾರ್ ಗ್ರಾಮದ ಜನತೆ, ಶಾಲಾಭಿವೃದ್ಧಿ ಸಮಿತಿ, ಗ್ರಾಪಂ ಸದಸ್ಯರ ಸಹಕಾರದಿಂದ ಶಾಲಾ ಮಕ್ಕಳಿಗೆ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ಸಿಗುತ್ತಿದೆ. ಮಕ್ಕಳಿಗೆ ಅನುಭವಿ ಶಿಕ್ಷಕರಿಂದ ತರಗತಿ, ಗುಂಪು ಅಧ್ಯಯನ, ರಾತ್ರಿ ಓದು ಮುಂತಾದ ಅಧ್ಯಯನ ಮಾಡಿಸಲಾಗುತ್ತಿತ್ತು. ಪರೀಕ್ಷ ಅವಧಿವರೆಗೆ ಸ್ಥಳೀಯರು, ಎಸ್‌ಡಿಎಂಸಿ ಸದಸ್ಯರು ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆ, ರಾತ್ರಿ ಪಾಳಿಯಲ್ಲಿ ಪೋಷಕರ ಮನೆಗೆ ಭೇಟಿ,
ಆಪ್ತಸಮಾಲೋಚನೆ ಮಾಡಲಾಗುತ್ತಿತ್ತು ಎಂದು ಶಿಕ್ಷಣಾಧಿಕಾರಿ ನಂಜುಂಡೇಗೌಡ ತಿಳಿದರು.2013-14ರಲ್ಲಿ ಪ್ರಾರಂಭಗೊಂಡ ಪ್ರೌಢಶಾಲೆ ಆರಂಭದಿಂದಲೂ ಒಂದು ಕೊಠಡಿ ನಿರ್ಮಾಣವಾಗಿರಲಿಲ್ಲ. ಪ್ರಸ್ತುತ ನೂತನ ಕಟ್ಟಡವಾಗುತ್ತಿದ್ದು, ಆದರೂ ಶೇ.100 ಫಲಿತಾಂಶ ಪಡೆಯುತ್ತಿದೆ. ಉತ್ತಮ ಫಲಿತಾಂಶಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಭಿನಂದನಾ ಪತ್ರವು ದಕ್ಕಿದೆ.
ಈ ಬಾರಿ ಪ್ರಸಾದ್ 562, ಸೋಮಶೇಖರ್ 547, ಹುಸ್ಸನಾ 544 ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಮುಖ್ಯಶಿಕ್ಷಕ
ರವಿಶಂಕರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.