![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 28, 2019, 1:20 PM IST
ಕೋಲಾರ ತಾಲೂಕಿನ ಬೀಚಗೊಂಡನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2018-19ನೇ ಸಾಲಿನ ಸರ್ವ ಸದಸ್ಯರ ಸಭೆ, ನೂತನ ಕಟ್ಟಡಕ್ಕೆ ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಚಾಲನೆ ನೀಡಿದರು.
ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನೀರಿಗಾಗಿ ವರ್ಷಕ್ಕೆ 1.75 ಕೋಟಿ ರೂ. ಖರ್ಚು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೆ.ಸಿ. ವ್ಯಾಲಿ ನೀರನ್ನು ಸಂಸ್ಕರಿಸಿ ಬಳಸಲು ಚಿಂತನೆ ನಡೆಸಿದೆ ಎಂದು ಒಕ್ಕೂಟದ ನಿರ್ದೇಶಕ ಡಿ.ವಿ.ಹರೀಶ್ ತಿಳಿಸಿದರು.
ತಾಲೂಕಿನ ಬೀಚಗೊಂಡನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2018-19ನೇ ಸಾಲಿನ ಸರ್ವ ಸದಸ್ಯರ ಸಭೆಗೆ ಚಾಲನೆ ನೀಡಿ, ‘ಕ್ಷೀರಭಾಗ್ಯ’ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರೈತರ ಹಿತ ಕಾಯುವಲ್ಲಿ ಸದಾ ನಿರತವಾಗಿದ್ದು, ಹಾಲು ಉತ್ಪಾದಕರು ಹಾಗೂ ಅವರ ಮಕ್ಕಳ ಶ್ರೇಯೋಭಿ ವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು. 13 ಲಕ್ಷ ರೂ. ವೆಚ್ಚದಲ್ಲಿ ಬಿಎಂಸಿ(ಬಲ್ಕ್ ಮಿಲ್ಕ್ ಕೂಲರ್) ಸ್ಥಾಪಿಸಿದ್ದು, ಸೊಸೈಟಿಗೆ ಗುಣಮಟ್ಟದ ಹಾಲನ್ನು ಪೂರೈಸಿ ಲಾಭ ಗಳಿಸಿ ಎಂದು ಕಿವಿಮಾತು ಹೇಳಿದರು.
ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆ ಇಲ್ಲ: ರಾಜ್ಯದಲ್ಲಿ ಬರದಿಂದ ರೈತರು ಕಂಗೆಟ್ಟು ಆತ್ಮಹತ್ಯೆಯಂತಹ ಸುದ್ದಿಗಳು ಬರುತ್ತಿವೆ. ಆದರೆ, ಜಿಲ್ಲೆಯ ಜನತೆ ಅಂತಹ ಕೃತ್ಯಗಳತ್ತ ಆಲೋಚನೆ ಯನ್ನೂ ಮಾಡುವುದಿಲ್ಲ. ನಮ್ಮ ರೈತರಿಗೆ ಹೈನೋದ್ಯಮ ಜೀವನಾಡಿಯಾಗಿದೆ. ಜಿಲ್ಲೆಯಲ್ಲಿ ಕೃಷಿಗೆ ನೀರಿನ ಕೊರತೆ ಕಾಡುತ್ತಿದೆ, ಈಗ ಪ್ರತಿಕುಟುಂಬವೂ ಹೈನೋದ್ಯಮದತ್ತ ನೋಡುತ್ತಿದೆ ಎಂದು ಹೇಳಿದರು.
ಹಲವು ಯೋಜನೆ ಜಾರಿ: ಕ್ಷೀರಸಿರಿ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವುದು, ಹೈನುಗಾರರ ಮಕ್ಕಳಿಗೆ ವಸತಿ ನಿಲಯ, ರಾಸುಗಳಿಗೆ, ಉತ್ಪಾದಕರಿಗೆ ವಿಮಾ ಯೋಜನೆ ಸೌಲಭ್ಯ, ಜಿಲ್ಲಾಧಿಕಾರಿ ಆಗಿದ್ದ ದಿ.ಡಿ.ಕೆ.ರವಿ ಮಂಜೂರು ಮಾಡಿರುವ ಭೂಮಿಯಲ್ಲಿ ಕೊಳವೆ ಬಾವಿ ಕೊರೆಯಿಸಿ ಒಕ್ಕೂಟಕ್ಕೆ ನೀರು ಪೂರೈಕೆ, ಮುಂತಾದ ಕ್ರಿಯಾತ್ಮಕ ಯೋಜನೆ ಜಾರಿಗೆ ತರಲಾಗುವುದು ಎಂದರು.
ಸಂಸ್ಕರಣೆ ಮಾಡಿ ಬಳಸಿ: ಒಕ್ಕೂಟದಲ್ಲಿ ನೀರಿಗಾಗಿಯೇ ಪ್ರತಿ ವರ್ಷ 1.75 ಕೋಟಿ ರೂ. ಖರ್ಚು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೆ.ಸಿ. ವ್ಯಾಲಿ ನೀರು ಬಂದರೆ ಅದನ್ನು ಸಂಸ್ಕರಣೆ ಮಾಡಿ ಬಳಸಿಕೊಳ್ಳುವುದಾಗಿ ತಿಳಿಸಿದರು.
ಕೋಚಿಮುಲ್ ಉಪವ್ಯವಸ್ಥಾಪಕ ಎ.ಸಿ.ಶ್ರೀನಿವಾಸಗೌಡ, ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್, ಗ್ರಾಪಂ ಸದಸ್ಯ ಚನ್ನಕೇಶವ, ಲಕ್ಷ್ಮಮ್ಮ, ನಿರ್ದೇಶಕರಾದ ಚಿದಾನಂದ, ಚೆನ್ನಬಸವಯ್ಯ, ಬಿ.ಸಿ.ಮುರಳಿ, ನಾಗೇಶ್, ಎಸ್.ಆರ್.ಜಗದೀಶ್, ಚಂದ್ರಪ್ಪ, ಬೈಯ್ಯಮ್ಮ, ರಾಮಪ್ಪ, ನಾಗರಾಜಪ್ಪ, ರಾಜಪ್ಪ, ಸಿಇಒ ಪುರುಷೋತ್ತಮ್, ರವಿಚಂದ್ರ, ನಾಗೇಗೌಡ ಮತ್ತಿತರರು ಇದ್ದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.