ದಾಖಲೆ ಮೊತ್ತಕ್ಕೆ ಹರಾಜಾದ ಟೊಮೆಟೋ!


Team Udayavani, Jun 25, 2023, 3:59 PM IST

ದಾಖಲೆ ಮೊತ್ತಕ್ಕೆ ಹರಾಜಾದ ಟೊಮೆಟೋ!

ಕೋಲಾರ: ಜಿಲ್ಲೆಯಲ್ಲಿ ಹಣ್ಣು ತರಕಾರಿ ಉತ್ಪನ್ನಗಳ ಪ್ರಮಾಣ ಕುಂಠಿತವಾಗಿರುವುದರಿಂದ ಧಾರಣೆಯಲ್ಲಿ ಏರುಮುಖ ಕಾಣುತ್ತಿದ್ದು, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್‌ ಟೊಮೆಟೋ 1100 ರೂಗಳಿಗೆ ಹರಾಜಾಗುವ ಮೂಲಕ ದಾಖಲೆ ಬರೆದಿದೆ. ಗ್ರಾಹಕ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಟೊಮೆಟೋ 120 ರಿಂದ 200 ವರೆವಿಗೂ ಮಾರಾಟವಾಗುತ್ತಿದ್ದು ಗ್ರಾಹಕ ಕಂಗಾಲಾಗಿದ್ದಾನೆ.

ಟೊಮೆಟೋ ರಾಜಧಾನಿ ಎಂದೇ ಕರೆಯಲ್ಪಡುವ ಕೋಲಾರ ಜಿಲ್ಲೆಯಲ್ಲಿ ಇದೀಗ ಟೊಮೆಟೋ ಬೆಳದವರಿಗೆ ಭಾರಿ ಸುಗ್ಗಿ, ಏಕೆಂದರೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಟೊಮೊಟೋ ಧಾರಣೆ 15 ಕೆ.ಜಿ ಬಾಕ್ಸ್‌ಗೆ 1100 ರೂ ದಾಟಿದ್ದು, ಈ ಕೆಂಪು ಸೇಬನ್ನು ಬೆಳೆದಿರುವ ರೈತರು ಸಂತಸದಲ್ಲಿ ತೇಲುತ್ತಿದ್ದಾರೆ.

ಮಾರುಕಟ್ಟೆಗೆ ಬರುತ್ತಿರುವ ಆವಕದ ಪ್ರಮಾಣ ಕುಸಿತ, ಮಳೆ, ರೋಗಬಾಧೆಯಿಂದ ಕೆಲವು ಕಡೆಗಳಲ್ಲಿ ತೋಟಗಳ ನಾಶ, ಬಕ್ರೀದ್‌ ಹಿನ್ನಲೆಯಲ್ಲಿ ಬಾಂಗ್ಲಾ ಅಂತರರಾಷ್ಟ್ರೀಯ ಗಡಿ ಎರಡು ದಿನ ಬಂದ್‌ ಆಗುವ ಹಿನ್ನಲೆ ಈ ಎಲ್ಲಾ ಕಾರಣಗಳಿಂದ ಕೋಲಾರದ ಕೆಂಪು ಸೇಬು ತನ್ನ ಬೆಲೆ ಹೆಚ್ಚಿಸಿಕೊಂಡಿದೆ. ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರೈತರಿಗೆ ಸಂತಸದ ಸುದ್ದಿ ಇದಾಗಿದ್ದು, ಶನಿವಾರ ಮಾರುಕಟ್ಟೆಯಲ್ಲಿ ನಾಟಿ ಟೊಮೆಟೋ 15 ಕೆ.ಜಿ ಬಾಕ್ಸ್‌ಗೆ 400 ರಿಂದ 800 ರೂವರೆಗೂ ಮಾರಾಟವಾಗಿದ್ದರೆ ರಫ್ತು ಗುಣಮಟ್ಟ ಹೊಂದಿದೆ ಫಾರಂ ಟಮೋಟೋ 15 ಕೆಜಿ ಬಾಕ್ಸ್‌ಗೆ 800 ರಿಂದ 1100 ವರೆಗೂ ಮಾರಾಟವಾಗಿದ್ದು, ಗ್ರಾಹಕ ಕೊಳ್ಳುವ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೋ ಬೆಲೆ 120 ರೂ ದಾಟಿ ಹೋಗುತ್ತಿದೆ. ಕೋಲಾರ ಮಾರುಕಟ್ಟೆಯಿಂದ ಶನಿವಾರವೂ ಸಹಾ ಸುಮಾರು 1100 ಟನ್‌ಗೂ ಹೆಚ್ಚು ಟೊಮೆಟೋ ವಿವಿಧ ರಾಜ್ಯಗಳಿಗೆ ಸರಬರಾಜಾಗಿದೆ.

5 ಲಕ್ಷ ಟನ್‌ ಟೊಮೇಟೋ!: ಕೋಲಾರ ಜಿಲ್ಲೆಯ ಮಣ್ಣು ಮತ್ತು ವಾತಾವರಣ ಟೊಮೇಟೋಗೆ ಹೇಳಿ ಮಾಡಿಸಿದಂತಿದೆ. ಬೇರೆಡೆಗಳಲ್ಲಿ ಟೊಮೇಟೋವನ್ನು ಸೀಸನ್‌ನಲ್ಲಿ ಮಾತ್ರವೇ ಬೆಳೆದರೆ, ಕೋಲಾರ ಜಿಲ್ಲೆಯಲ್ಲಿ ವರ್ಷದ ಎಲ್ಲಾ 12 ತಿಂಗಳುಗಳಲ್ಲಿಯೂ ಬೆಳೆಯುವುದೇ ಅತ್ಯಂತ ವಿಶೇಷಗಳಲ್ಲೊಂದು. ಕರ್ನಾಟಕದಲ್ಲಿ ಸುಮಾರು 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೇಟೋ ಬೆಳೆದು, ಸುಮಾರು 12.50 ಲಕ್ಷ ಟನ್‌ ಟೊಮೆಟೋವನ್ನು ಉತ್ಪಾದಿಸಲಾ ಗುತ್ತಿದೆ. ಈ ಪೈಕಿ ಕೋಲಾರ ಜಿಲ್ಲೆಯೊಂದರಲ್ಲಿಯೇ ಸುಮಾರು 12,740 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೋ ಬೆಳೆಯಲಾಗುತ್ತಿದ್ದು, ವಾರ್ಷಿಕ 5 ಲಕ್ಷ ಟನ್‌ ಟೊಮೆಟೋವನ್ನು ಉತ್ಪಾದಿಸುತ್ತಿರುವುದು ಟೊಮೇಟೋಗೂ ಕೋಲಾರಕ್ಕೂ ಇರುವ ಅವಿನಾಭಾವ ಸಂಬಂಧವಾಗಿದೆ. ದೇಶದ ಇತರೆ ರಾಜ್ಯಗಳಲ್ಲಿ ಸರಾಸರಿ ಇಳುವರಿ ಪ್ರತಿ ಹೆಕ್ಟೇರ್‌ಗೆ 17 ಟನ್‌ಗಳಾಗಿವೆ. ರಾಜ್ಯದಲ್ಲಿ ಪ್ರತಿ ಹೆಕ್ಟೇರ್‌ಗೆ 25 ಟನ್‌ ಟೊಮೆಟೋ ಉತ್ಪಾದಿಸಿದರೆ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ 25 ಟನ್‌ ನಿಂದ 40 ಟನ್‌ವರೆವಿಗೂ ಪ್ರತಿ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ.

ವಿವಿಧ ದೇಶಗಳಿಗೆ ಕೋಲಾರ ಟೊಮೆಟೋ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ಟೊಮೆಟೋವನ್ನು ಮಾರುಕಟ್ಟೆ ಮಾಡುವ ಸಲುವಾಗಿಯೇ ಕೋಲಾರ, ಬಂಗಾ ರಪೇಟೆ, ಮುಳಬಾಗಿಲಿನ ವಡ್ಡಹಳ್ಳಿ ಮತ್ತು ಚಿಂತಾಮಣಿಗಳಲ್ಲಿ ಎಪಿಎಂಸಿ ಮಾರುಕಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮಾರುಕಟ್ಟೆಗಳಲ್ಲಿ ಟೊಮೆಟೋ ವಹಿವಾಟು ಹೆಚ್ಚಾಗಿರುವುದರಿಂದ ಇವನ್ನು ಟೊಮೆಟೋ ಮಾರುಕಟ್ಟೆಗಳೆಂದು ರೈತರು ಕರೆಯುತ್ತಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆ ಏಷ್ಯಾದ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಲ್ಲಿ ನಡೆಯುವ ಟೊಮೇಟೋ ವಹಿವಾಟು ವಿಶ್ವದ ಯಾವುದೇ ಮಾರುಕಟ್ಟೆಯಲ್ಲಿಯೂ ನಡೆಯುವುದಿಲ್ಲವೆನ್ನಲಾಗಿದೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆವಿಗೂ ದೇಶದ ಪ್ರಮುಖ ಮಾರುಕಟ್ಟೆಗಳಿಗೆ ಕೋಲಾರ ದಿಂದಲೇ ಟೊಮೆಟೋ ಸರಬರಾಜಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದಲ್ಲಿಯೂ ರೈತರು ಹೆಚ್ಚಾಗಿ ಟೊಮೆಟೋ ಬೆಳೆಯುತ್ತಿದ್ದರೂ ನೆರೆ, ಅಕಾಲಿಕ ಮಳೆ ಇನ್ನಿತರ ಪ್ರಾಕೃತಿಕ ವಿಕೋಪ ಕಾರಣಗಳಿಂದಾಗಿ ಸಮಸ್ಯೆ ಉದ್ಭವಿಸಿದರೆ ಇಡೀ ದೇಶ ಮಾತ್ರವಲ್ಲ, ಪಕ್ಕದ ಬಾಂಗ್ಲಾ, ಪಾಕಿಸ್ತಾನ್‌ ಮತ್ತಿತರ ದೇಶಗಳು ಟೊಮೆಟೋಗಾಗಿ ಕೋಲಾರದತ್ತಲೇ ಮುಖ ಮಾಡುತ್ತದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಉತ್ಪಾದನೆ ಯಾಗುವ ಟೊಮೇಟೋವನ್ನು ದೆಹಲಿ, ಮುಂಬೈ, ಚನ್ನೈ ಸೇರಿದಂತೆ ತಮಿಳುನಾಡಿನ ಪ್ರಮುಖ ಮಾರು ಕಟ್ಟೆಗಳು, ಹೈದರಾಬಾದ್‌ಸೇರಿದಂತೆ ಆಂಧ್ರಪ್ರದೇಶದ ಬಹುತೇಕ ನಗರ, ಪಟ್ಟಣಗಳಿಗೆ ಕೋಲಾರದಿಂದಲೇ ಟೊಮೆಟೋ ಸರಬರಾಜಾಗುತ್ತದೆ. ಕೆಲವು ವರ್ಷಗಳ ಹಿಂದೆ ಕೋಲಾರ ಮಾರುಕಟ್ಟೆಗೆ ಸುಮಾರು 60 ಲೋಡ್‌ಗಳಷ್ಟು ಟೊಮೆಟೋ ಸರಬರಾಜಾದರೆ ಈ ಪೈಕಿ 40 ರಿಂದ 45 ಲಾರಿ ಲೋಡುಗಳಷ್ಟು ಟೊಮೇಟೋ ತಮಿಳುನಾಡಿನ ಮಾರುಕಟ್ಟೆಗಳಿಗೆ ತೆರಳುತ್ತಿತ್ತು ಆದರೆ ಇದೀಗ ಬದಲಾಗಿದ್ದು, ಉತ್ತರ ಪ್ರದೇಶದ ಹಲವಾರು ರಾಜ್ಯಗಳಿಗೂ ಟೊಮೆಟೋ ಹೋಗುತ್ತಿದೆ.

ದುಬಾರಿ ಬೆಲೆಗೆ ಗ್ರಾಹಕ ಕಂಗಾಲು: ಕೋಲಾರದ ಮಾರುಕಟ್ಟೆಯಲ್ಲಿಯೇ ಪ್ರತಿ ಕೆಜಿ ಟೊಮೇಟೋ 60 ರಿಂ ದ 100 ರೂಪಾಯಿಗಳವರೆವಿಗೂ ಮಾರಾಟವಾ ಗುತ್ತಿದೆ. ಗ್ರಾಹಕರ ಕೈಗೆ ತಲುಪವ ವೇಳೆಗೆ 100 ರಿಂದ 120 ರೂಪಾಯಿ ದರದಲ್ಲಿ ಪ್ರತಿ ಕೆಜಿ ಮಾರಾಟವಾಗುತ್ತಿದೆ.

ಟೊಮೆಟೋ ಸೀಸನ್‌ ಫಸಲು: ಸಾಮಾನ್ಯವಾಗಿ ಮೇ, ಜೂನ್‌, ಜುಲೈ ಆಗಸ್ಟ್‌ ತಿಂಗಳನ್ನು ಟೊಮೇ ಟೋ ಸೀಸನ್‌ ಎಂದು ಕರೆಯುತ್ತಾರೆ. ಈ ತಿಂಗಳು ಗಳಲ್ಲಿ ಟೊಮೆಟೋ ಉತ್ಪಾದನೇ ವಿಪರೀತವಾಗುತ್ತದೆ. ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಟೊಮೇಟೋ ಬೆಳೆ ಫಸಲು ನೀಡುವ ಕಾಲ ಇದಾಗಿದೆ. ಹೇರಳವಾಗಿ ಟೊಮೆಟೋ ಬೆಳೆಯುವ ಕೋಲಾರದ ಮಾರುಕಟ್ಟೆಗಳಲ್ಲಿ ಟೊಮೆಟೋಗೆ ಹೆಚ್ಚು ಬೇಡಿಕೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರತಿ ಕೆಜಿ ಟೊಮೆಟೋ ಒಂದೆರಡು ರೂಪಾಯಿಗೂ ಇಳಿಯುವ ಅಪಾಯವೂ ಇದೆ. ಟೊಮೆಟೋವನ್ನು ತೋಟದಿಂದ ಕಿತ್ತು ಮಾರುಕಟ್ಟೆಗೆ ಸಾಗಿಸುವ ವೆತ್ಛವೂ ರೈತರಿಗೆ ಸಿಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ರೈತರು ಟೊಮೆಟೋವನ್ನು ಹೊಲದಲ್ಲಿಯೇ ಕೀಳದೆ ಬಿಡುವುದು, ಕಿತ್ತ ಟೊಮೆಟೋಗಳನ್ನು ಪ್ರತಿಭಟನೆ ರೂಪದಲ್ಲಿ ರಸ್ತೆಗೆ ಸುರಿಯುವುದು ಸಾಮಾನ್ಯವಾಗಿದೆ.

ವಿಶ್ವ ಪ್ರಸಿದ್ಧಿ ಕೋಲಾರ ಟೊಮೆಟೋ ಮಾರುಕಟ್ಟೆ: ಏಷ್ಯಾದಲ್ಲಿಯೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಒಳಗಾಗಿರುವ ಕೋಲಾರದ ಎಪಿಎಂಸಿಯ ಆವಕವೇ ದೇಶದ ಟೊಮೇಟೋ ಧಾರಣೆಯನ್ನು ನಿಗದಿಪಡಿಸುತ್ತದೆ. ಟೊಮೆಟೋ ಉತ್ಪಾದನೆ ಕಡಿಮೆ ಎನ್ನುವ ಕಾಲದಲ್ಲಿಯೇ ಕೋಲಾರದ ಮಾರುಕಟ್ಟೆಗೆ ಪ್ರತಿನಿತ್ಯ 1000 ದಿಂದ 1200 ಟನ್‌ ಟೊಮೇಟೋ ಆವಕವಾಗುತ್ತಿರುವುದರಿಂದ ಕೋಲಾರ ಟೊಮೇಟೋ ಮಾರುಕಟ್ಟೆ ಇತರೇ ರಾಜ್ಯಗಳ ಗಮನ ಸೆಳೆಯುತ್ತಿದೆ.

40 ಲಾರಿ ಲೋಡ್‌ ಹೊರ ರಾಜ್ಯಗಳಿಗೆ ರವಾನೆ: ಶನಿವಾರ ಕೋಲಾರ ಮಾರುಕಟ್ಟೆ ಒಂದರಿಂದಲೇ 40 ಲಾರಿ ಲೋಡ್‌ ಟೊಮೇಟೋ ವಿವಿಧ ರಾಜ್ಯಗಳಿಗೆ ಸರಬರಾಜಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಕರ್ನಾಟಕದ ವಿವಿಧ ಭಾಗಗಳಿಗೆ 2 ಲಾರಿ ಲೋಡ್‌ ಸರಬರಾಜಾದರೆ ತಮಿಳುನಾಡಿಗೆ 8 ಲೋಡ್‌, ಬಿಹಾರಕ್ಕೆ 1 ಲೋಡ್‌, ಮಹಾರಾಷ್ಟ್ರಕ್ಕೆ 2 ಲೋಡ್‌, ರಾಜಾಸ್ತಾನ್‌ ಗೆ 2 ಲೋಡ್‌, ಉತ್ತರ ಪ್ರದೇಶಕ್ಕೆ 4 ಲೋಡ್‌, ಗುಜರಾತ್‌ಗೆ 7 ಲೋಡ್‌, ಕೇರಳಕ್ಕೆ 2 ಲೋಡ್‌, ಒರಿಸ್ಸಾಗೆ 5 ಲೋಡ್‌, ಜಾರ್ಕಂಡ್‌ಗೆ ಒಂದು ಹಾಗೂ ಪಶ್ಚಿಮ ಬಂಗಾಳಕ್ಕೆ 3 ಲೋಡ್‌ ಟೊಮೊಟೋ ಸ ರಬರಾಜಾಗಿದೆ.

ಮಾರುಕಟ್ಟೆಯಲ್ಲಿ ಟೊಮೆಟೋ ಧಾರಣೆ ಪ್ರತಿಬಾಕ್ಸ್‌ಗೆ 1 ಸಾವಿರ ಮುಟ್ಟಿದ್ದು, ರೈತರಿಗೆ ಹೆಚ್ಚು ಲಾಭ ತಂದಿದೆ, ಕೋಲಾರದಿಂದ ಪ್ರತಿನಿತ್ಯ ದೇಶದ ವಿವಿಧ ರಾಜ್ಯಗಳಿಗೆ ಟಮೋಟೋ ಸರಬರಾಜಾಗುತ್ತಿದ್ದು, ಬಕ್ರೀದ್‌ ಹಿನ್ನಲೆ ಹೆಚ್ಚು ಟಮೊಟೋ ಆವಕ ಹೊ ರಾಜ್ಯಗಳಿಗೆ ಹೋಗುತ್ತಿರುವುದು ಈ ಧಾರಣೆ ಏರಿಕೆಗೆಕಾರಣವಾಗಿದೆ. -ವಿಜಯಲಕ್ಷ್ಮೀ, ಕಾರ್ಯದರ್ಶಿ ಹಾಗೂ ಮುನಿರಾಜು ಸಹಾಯಕ ಕಾರ್ಯದರ್ಶಿ, ಕೋಲಾರ ಎಪಿಎಂಸಿ

ಎಪಿಎಂಸಿ ಮಾರುಕಟ್ಟೆಗೆ ಇಂದು 93 ಬಾಕ್ಸ್‌ ಟೊಮೆಟೋ ತಂದಿದ್ದೆ, 15 ಕೆಜಿ ಬಾಕ್ಸ್‌ 1 ಸಾವಿರಕ್ಕೆ ಮಾರಾಟವಾಗಿದೆ, ನಾಳೆಯೂ 200 ಬಾಕ್ಸ್‌ ಟೊಮೆಟೋ ತರಲು ತೋಟದಲ್ಲಿ ಸಿದ್ದತೆ ಮಾಡಿದ್ದೇವೆ. ಈ ವರ್ಷ ದಲ್ಲೇ ಇಷ್ಟೊಂದು ಉತ್ತಮ ಬೆಲೆ ಸಿಕ್ಕಿರುವುದು ಇದೇ ಮೊದಲಾಗಿದ್ದು, ಸಂತಸ ತಂದಿದೆ. – ಎ.ಮಹೇಂದ್ರ ಟೊಮೆಟೋ ಬೆಳೆಗಾರ, ಅರಾಭಿಕೊತ್ತನೂರು

ಬಕ್ರೀದ್‌ ಹಿನ್ನಲೆ ಬಾಂಗ್ಲಾ ಗಡಿ ಬಂದ್‌ ಆಗುವ ಹಿನ್ನಲೆ, ಇಡೀ ದೇಶದ ವಿವಿಧ ರಾಜ್ಯಗಳಲ್ಲಿ ಬಕ್ರೀದ್‌ ಆಚರಣೆ ಹಿನ್ನಲೆ, ಟೊಮೊ ಟೋಗೆ ಉತ್ತಮ ಬೆಲೆ ಬಂದಿದೆ, ಈ ವರ್ಷದಲ್ಲೇ ಅತ್ಯಂತ ಉತ್ತಮ ಬೆಲೆಗೆ ಮಾರಾಟವಾಗಿದ್ದು, ಗುಜರಾತ್‌ಗೆ 7 ಲೋಡ್‌, ತಮಿಳುನಾಡಿಗೆ 8 ಲೋಡ್‌ ಟೊಮೆಟೋ ಹೋಗಿದೆ. – ಚಲಪತಿ, ಸಗಟು ವರ್ತಕರು ಆರ್‌ವಿಎಂ ಮಂಡಿ

– ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

aane

Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.