![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 23, 2021, 7:00 PM IST
ಕೋಲಾರ: ಕೊರೊನಾ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಲಾಕ್‌ಡೌನ್‌ಗೆ ಸೂಚನೆ ನೀಡಿದ್ದು, ವೈದ್ಯಕೀಯ ಸೇವೆ ಹೊರತುಪಡಿಸಿ ಮೊದಲ ದಿನ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು ಮತ್ತು ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು.
ಭಟ್ರಹಳ್ಳಿ ಗೇಟ್‌ನಲ್ಲಿ ವ್ಯಕ್ತಿಯೊಬ್ಬ ಪೇದೆಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಶುಕ್ರವಾರ ಸಂಜೆಯಿಂದಲೇ ಲಾಕ್‌ಡೌನ್ ಕಠಿಣಗೊಳಿಸಿರುವ ಪೊಲೀಸರು ರಸ್ತೆಗಿಳಿದ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರಲ್ಲದೇ, ಕೆಲವುಕಡೆಗಳಲ್ಲಿ ಮಾತಿನ ಚಕಮಕಿಗೂ ಕಾರಣವಾಯಿತು.
ಹಾಲು, ವೈದ್ಯಕೀಯಸೇವೆ ಹೊರತುಪಡಿಸಿ ಉಳಿದೆಲ್ಲಾವಾಣಿಜ್ಯ ವಹಿವಾಟುಗಳಿಗೆ ನಿರ್ಬಂಧಹೇರಲಾಗಿತ್ತು. ನಗರಾದ್ಯಂತ ಎಲ್ಲೂಅಂಗಡಿಗಳು ತೆರೆಯಲಿಲ್ಲ.
ಬುದ್ದಿವಾದ ಹೇಳಿದ್ದಕ್ಕೆ ಪೇದೆ ಮೇಲೆ ಹಲ್ಲೆ: ತಾಲೂಕಿನ ಬೇತಮಂಗಲರಸ್ತೆಯ ಭಟ್ರಹಳ್ಳಿ ಗೇಟ್‌ನಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಸುಖಾಸುಮ್ಮನೇ ಓಡಾಡುತ್ತಿದ್ದ ರವಿ ಎಂಬ ಯುವಕನಿಗೆ ಪೊಲೀಸ್ ಪೇದೆ ನಾಗರಾಜ್ ಬುದ್ದಿವಾದ ಹೇಳಿದ್ದಕ್ಕೆ ಪೇದೆಯ ಲಾಠಿಯನ್ನೇ ಕಿತ್ತುಕೊಂಡು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪೇದೆ ನಾಗರಾಜ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸಾcರ್ಜ್ ಆಗಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಯುವಕ ರವಿ ಎಂಬುವವರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ರಸ್ತೆಗೆ ಬ್ಯಾರಿಕೇಡ್, ವಾಹನ ತಪಾಸಣೆ: ನಗರದ ಎಂ.ಬಿ.ರಸ್ತೆ, ಎಂ.ಜಿ. ರಸ್ತೆ, ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತದ ಕಡೆಗೆ ಹೋಗುವ ಮುಖ್ಯರಸ್ತೆ ಸೇರಿದಂತೆಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿಬಂದ್ ಮಾಡಿದ ಪೊಲೀಸರು ರಸ್ತೆಗಿಳಿದಪ್ರತಿ ವಾಹನದ ತಪಾಸಣೆ ನಡೆಸಿದರು.
ತುರ್ತು ಸೇವೆಗೆ ಹೋಗುವ ವಾಹನಗಳನ್ನು ಹೊರತುಪಡಿಸಿ ಅನಗತ್ಯವಾಗಿರಸ್ತೆಗಿಳಿದ ವಾಹನಗಳನ್ನು ಜಪ್ತಿ ಮಾಡಿ ಟೆಂಪೋಗೆ ತುಂಬಿ ನಗರದ ಕವಾಯತುಮೈದಾನದಲ್ಲಿ ಹಾಕಲಾಯಿತು.ಮದುವೆ ಮುಗಿಸಿ ಬಂದ ಟೆಂಪೋಟ್ರಾವೆಲ್ಸ್ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ನಗರದ ರಾಷ್ಟ್ರೀಯಹೆದ್ದಾರಿಯಲ್ಲಿ ಕಂಡು ಬಂತು.ಮದುವೆಗೆ ಮುಗಿಸಿ ವಧುವರನೊಂದಿಗೆ ಬರುತ್ತಿರುವುದಾಗಿ ದಾಖಲೆಗಳೊಂದಿಗೆ ಮಾಹಿತಿ ನೀಡಿದ ನಂತರ ವಾಹನ ಬಿಡಲಾಯಿತು.
ಮೆಡಿಕಲ್ ಸ್ಟೋರ್ ಮತ್ತು ಹಾಲಿನಬೂತ್ ಹೊರತುಪಡಿಸಿ ಎಲ್ಲಾಅಂಗಡಿಗಳು ಮುಚ್ಚಿ ಇಡೀ ನಗರಸ್ತಬ್ಧವಾಗಿದ್ದು, ಮೇ25ರ ಮಂಗಳವಾರಬೆಳಗ್ಗೆ 6 ಗಂಟೆಯವರೆಗೂ ಇದು ಮುಂದುವರಿಯಲಿದೆ ಎಂದು ಜಿಲ್ಲಾರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ ತಿಳಿಸಿದರು.ನಗರದ ಟೇಕಲ್ ರಸ್ತೆಯಲ್ಲಿ ವೃತ್ತನಿರೀಕ್ಷಕ ರಂಗಶಾಮಯ್ಯ ನೇತೃತ್ವದಲ್ಲಿಸಂಚಾರ ಪಿಎಸ್‌ಐ ನಾರಾಯಣಸ್ವಾಮಿಮತ್ತು ಸಿಬ್ಬಂದಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್‌ಮಾಡಿಸಿದರು. ಅಗತ್ಯ ಸೇವೆಗಳನ್ನುಹೊರತು ಪಡಿಸಿ ಉಳಿದೆಲ್ಲ ವಾಹನವಶಕ್ಕೆ ಪಡೆಯಲಾಯಿತು.
Kolar: ಬಾಲಕಿ ಮೇಲೆ ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ
BJP President Post: ಅವಕಾಶ ಸಿಕ್ಕಿದರೆ ರಾಜ್ಯಾಧ್ಯಕ್ಷ ಆಗಲು ಸಿದ್ಧ: ಶ್ರೀರಾಮುಲು
Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.