![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Aug 1, 2020, 10:22 AM IST
ಮುಳಬಾಗಿಲು: ತಾಲೂಕಿನ ಉತ್ತನೂರು ವಿದ್ಯಾಸಂಸ್ಥೆಯ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಸೇರಿದ 407 ಪಡಿತರ ಚೀಟಿಗಳನ್ನು ನಲ್ಲೂರು ತಿಮ್ಮರಾಯಪ್ಪ ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸಿ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು ಆದೇಶಿಸಿದ್ದಾರೆ.
ಶಿವನಾರಹಳ್ಳಿ, ನಾಗಿರೆಡ್ಡಿಹಳ್ಳಿ, ನಲ್ಲಾಂಡಹಳ್ಳಿ, ಪೊಂಬ್ರಹಳ್ಳಿ, ಮಜರ ರಾಮಾಪುರ ಗ್ರಾಮಗಳ ಪಡಿತರ ಚೀಟಿಗಳಿಗೆ ಆಗಸ್ಟ್ ತಿಂಗಳಿನಿಂದ ನಲ್ಲೂರು ತಿಮ್ಮರಾಯಪ್ಪನವರೇ ಆಹಾರ ಧಾನ್ಯ ವಿತರಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಈ ಐದು ಗ್ರಾಮಗಳ ಪಡಿತರರು ಪ್ರತಿ ತಿಂಗಳು 5 ಕಿ.ಮೀ. ದೂರದ ಉತ್ತನೂರಿಗೆ ಹೋಗಿ ಪಡಿತರ ಧಾನ್ಯ ತರಲು ತೊಂದರೆ ಆಗಿತ್ತು. ಈ ಐದೂ ಗ್ರಾಮಗಳ ಪಡಿತರದಾರರಿಗೆ ಎಸ್‌ಎನ್‌ಎನ್ ವೃತ್ತದಲ್ಲಿಯೇ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ತಹಶೀಲ್ದಾರ್‌ಗೆ ಕೋರಿದ್ದರು. ಅದರಂತೆ ಆಹಾರ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಎಸ್‌ಎನ್ ಎನ್ ವೃತ್ತದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಆದೇಶಿಸಿದ್ದಾರೆ.
ಇತ್ತೀಚಿಗೆ ಎಸ್.ಎನ್.ಎನ್. ಕ್ರಾಸ್‌ನಲ್ಲಿರುವ ಸರ್ಕಾರಿ ಕಟ್ಟಡದಲ್ಲಿ 407 ಪಡಿತರ ಚೀಟಿಗಳಿಗೆ ಧಾನ್ಯ ವಿತರಿಸುವ ಕಾರ್ಯಕ್ಕೆ ಅಬಕಾರಿ ಸಚಿವ ಎಚ್. ನಾಗೇಶ್ ಚಾಲನೆ ನೀಡಿದ್ದರು. ಇದಕ್ಕೆ ಆ ಭಾಗದ ಕಾಂಗ್ರೆಸ್ ಮುಖಂಡ ಉತ್ತನೂರು ಶ್ರೀನಿವಾಸ್, ಅವರ ಪುತ್ರ ಜಿಪಂ ಸದಸ್ಯ ಅರವಿಂದ್‌ರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಬೇಸರಗೊಂಡ ಶ್ರೀನಿವಾಸ್, ಅರವಿಂದ್ ಮಾಧ್ಯಮಗಳ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.
Kolar: ಬಾಲಕಿ ಮೇಲೆ ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ
BJP President Post: ಅವಕಾಶ ಸಿಕ್ಕಿದರೆ ರಾಜ್ಯಾಧ್ಯಕ್ಷ ಆಗಲು ಸಿದ್ಧ: ಶ್ರೀರಾಮುಲು
Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
You seem to have an Ad Blocker on.
To continue reading, please turn it off or whitelist Udayavani.