ಎರಡು ತಿಂಗಳಾದ್ರೂ ಒಂಬತ್ತು ಗ್ರಾಮಕ್ಕಿಲ್ಲ ಸಂಪರ್ಕ


Team Udayavani, Dec 13, 2021, 2:32 PM IST

ಕೋಲಾರ – ಸಂಪರ್ಕ ಸಮಸ್ಯೆ

ಮುಳಬಾಗಿಲು: ಇತ್ತೀಚಿಗೆ ಸುರಿದ ಮಳೆಯಿಂದಾಗಿ ತಾಲೂಕಿನ ನಂಗಲಿಯಿಂದ ಮರವೇಮನೆ ಗ್ರಾಮಕ್ಕೆ ಹೋಗುವ ಚೆಕ್‌ ಡ್ಯಾಂ, ರಸ್ತೆ ಕಡಿತಗೊಂಡಿದೆ. ಇದರಿಂದ 2 ತಿಂಗಳಿಂದ 9 ಗ್ರಾಮಗಳಿಗೆ ಸಂಪರ್ಕ ಬಂದ್‌ ಆಗಿದೆ. ನಂಗಲಿಯಿಂದ ಮರವೇಮನೆ, ಎನ್‌. ಕೊತ್ತೂರು ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದ ನಂಗಲಿ ಏಟಿಗೆ (ಕೆರೆ ಕೋಡಿ ನೀರು ಹೋಗುವ ದೊಡ್ಡ ಕಾಲುವೆ) ಅಡ್ಡಲಾಗಿ ನಿರ್ಮಿಸಿರುವ ಚೆಕ್‌ ಡ್ಯಾಂ ಮತ್ತು ರಸ್ತೆ ಸಂಪೂರ್ಣ ಮಳೆಗೆ ಕೊಚ್ಚಿಕೊಂಡು ಹೋಗಿದೆ.

ಇದರಿಂದ ನಂಗಲಿ ಮರವೇಮನೆ ಮಾರ್ಗದ ಮೂಲಕ 9 ಗ್ರಾಮಗಳ ಜನ ಹೋಗಿ ಬರಲು ಪರದಾಡುವಂತಾಗಿದೆ. 17 ವರ್ಷಗಳ ನಂತರ ನಂಗಲಿ ಕೆರೆ ತುಂಬಿ ಕೋಡಿ ಹೋಗುತ್ತಿದ್ದು, ಇತ್ತೀಚಿಗೆ ಹತ್ತು ದಿನಗಳ ಹಿಂದೆ ಬಿದ್ದ ಭಾರೀ ಮಳೆ ಮತ್ತು ಐದು ಅಡಿಗಳಷ್ಟು ನಂಗಲಿ ಕೆರೆ ಕೋಡಿ ಹರಿದ ಕಾರಣದಿಂದ ಚೌಡೇಶ್ವರಮ್ಮ ದೇವಸ್ಥಾನದ ಬಳಿ ನಂಗಲಿ ಏಟಿಗೆ ಈಚೆಗೆ ಆರು ತಿಂಗಳ ಹಿಂದೆ ಚೆಕ್‌ ಡ್ಯಾಂ ನಿರ್ಮಿಸಲಾಗಿತ್ತು.

ಆದರೆ, ಭಾರೀ ಪ್ರಮಾಣದಲ್ಲಿ ಬಿದ್ದ ಮಳೆಗೆ ಒಂದು ಕಡೆ ಚೆಕ್‌ ಡ್ಯಾಂ ಒಡೆದು ಹೋಗಿ ಸಂಪರ್ಕ ಕಡಿತಗೊಂಡರೆ, ಮತ್ತೆ ಸ್ವಲ್ಪ ದೂರದಲ್ಲಿ ಇಡೀ ರಸ್ತೆ 50 ಮೀಟರ್‌ ಕೊಚ್ಚಿಕೊಂಡು ಹೋಗಿದೆ. ಇದರಿಂದ ಒಂಬತ್ತು ಗ್ರಾಮಗಳ ಜನ ಉಷ್ಟೂರು, ಕೆರಸಿಮಂಗಲ ಹಾಗೂ ಮುದಿಗೆರೆ ಮಾರ್ಗಗಳ ಮೂಲಕ ನಂಗಲಿ ಕಡೆಗೆ ಸುತ್ತಿಕೊಂಡು ಹೋಗಬೇಕಾಗಿದೆ.

ಹಾಳಾಗಿರುವ ರಸ್ತೆಯ ಮೂಲಕ ನೂರಾರು ವರ್ಷಗಳಿಂದ ನಂಗಲಿ ಮಾರ್ಗವಾಗಿ ಮರವೇಮನೆ, ಕೊತ್ತೂರು, ಚಿನ್ನಹಳ್ಳಿ, ಪೆದ್ದೂರು, ಘಟ್ಟು ವೆಂಕಟರಮಣ, ಪುಣ್ಯಹಳ್ಳಿ, ಬೈಯಪ್ಪಲ್ಲಿ, ಕಾಡೇನಹಳ್ಳಿ ಹಾಗೂ ಪೆರಮಾಕನಹಳ್ಳಿಗಳ ಜನ ಮತ್ತು ಜಾನುವಾರುಗಳು ಹೋಗಿ ಬರುತ್ತಿದ್ದವು. ಆದರೆ, ಅನಿರೀಕ್ಷಿತವಾಗಿ ಸುಮಾರು ವರ್ಷಗಳ ನಂತರ ಬಿದ್ದ ಭಾರೀ ಮಳೆಗೆ ಚೆಕ್‌ ಡ್ಯಾಂ, ರಸ್ತೆ ಕಡಿತಗೊಂಡಿದೆ.

ಇದನ್ನೂ ಓದಿ: ಮೊಟ್ಟೆ ಕೈಬಿಡಿ, ಇಲ್ಲವಾದಲ್ಲಿ ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆ ಮಾಡಿ: ಆಗ್ರಹ

ಇದರಿಂದ 2 ತಿಂಗಳಿಂದ ನಂಗಲಿಗೆ ಹೋಗಿ ಬರಲು 6 ಕಿ.ಮೀ. ಸುತ್ತಿಕೊಂಡು ಹೋಗಿ ಬರಬೇಕಾಗಿದೆ ಎಂದು ಏಟಿ ಪಕ್ಕದ ವಾಸಿ ಮೈಸೂರು ಸುರೇಶ್‌ ರಾಜು ಹೇಳಿದರು. ಈಚೆಗೆ ಬಿದ್ದ ಮಳೆಗೆ ಗ್ರಾಮೀಣ ಭಾಗದಲ್ಲಿ ಬಹುತೇಕ ರಸ್ತೆಗಳು ನಾಶಗೊಂಡಿವೆ. ಆದರೆ, 9 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿ ಎರಡು ತಿಂಗಳುಗಳು ಕಳೆಯುತ್ತಿದೆ. ಆದರೂ, ಏಟಿಯಲ್ಲಿ ನೀರೂ ಕಡಿಮೆ ಆಗಿಲ್ಲ. ಆದ್ದರಿಂದ ಕೂಡಲೇ ಶಾಸಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಚೆಕ್‌ ಡ್ಯಾಮ್‌ ಮತ್ತು ರಸ್ತೆಯನ್ನು ಸರಿಪಡಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಮರವೇಮನೆ ವೆಂಕಟಪ್ಪ ಮನವಿ ಮಾಡಿದರು.

ಟಾಪ್ ನ್ಯೂಸ್

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

bjp-congress

BJP vs Congress ; ಕೇಸ್‌ ಮೇಲೆ ಕೇಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

10

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.