ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ಉಚಿತ: ಸಚಿವ
Team Udayavani, Jun 3, 2021, 5:42 PM IST
ಕೆಜಿಎಫ್: ಕೋಲಾರ ಜಿಲ್ಲೆಯ ಜಾಲಪ್ಪ ಆಸ್ಪತ್ರೆಯಲ್ಲಿಮತ್ತು ಬಿಜಾಪುರದಲ್ಲಿ ಕೂಡ ಬ್ಲ್ಯಾಕ್ ಫಂಗಸ್‌ಗೆ ಖಾಸಗಿಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಿದ್ದು ಎಲ್ಲಾ ಖರ್ಚನ್ನೂಸರ್ಕಾರವೇ ಭರಿಸುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಗರದಲ್ಲಿಬಿಜೆಪಿಯಿಂದ ಸರ್ಕಾರಿ ಸಾರ್ವಜನಿಕಆಸ್ಪತ್ರೆಗೆ ನೀಡಲಾದ ಆ್ಯಂಬುಲೆನ್ಸ್‌ಗೆ ಚಾಲನೆ ನೀಡಿ ಮಾತನಾಡಿದರು. ನಗರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಟ್ಟುನಿಂತಿರುವ ಇಸ್ರೇಲ್ ಆಮ್ಲಜನಕ ಘಟಕದ ಬಗ್ಗೆ ವಿವರಿಸಿದ ಅವರು, ಕಳೆದ 15 ದಿನದ ಹಿಂದೆ ಇಸ್ರೇಲ್‌ನಿಂದ ಬಂದಆಕ್ಸಿಜನ್ ಪ್ಲಾಂಟನ್ನು ಲೋಕಾರ್ಪಣೆ ಮಾಡಿದ್ದೇವೆ. ಎಲ್ಲವೂ ಇಸ್ರೇಲ್ ಭಾಷೆಯಲ್ಲಿದೆ. ಅದನ್ನು ಅರ್ಥ ಮಾಡಿಕೊಂಡು ಸರಿಪಡಿಸುತ್ತೇವೆ. ಅದೇನು ಕಳಪೆ ಪ್ಲಾಂಟ್ ಅಲ್ಲ.ಪ್ಲಾಂಟ್‌ಗೆ ಬದಲಿಯಾಗಿ ಸಿಲಿಂಡರ್ ಕೂಡ ವ್ಯವಸ್ಥೆಯಲ್ಲಿದೆ. ಮಧ್ಯೆಮಧ್ಯೆ ತೊಂದರೆ ಕೊಡುತ್ತಿದ್ದರೂ, ಸಿಲಿಂಡರ್‌ಮೂಲಕ ರೋಗಿಗಳಿಗೆ ಆಕ್ಸಿಜನ್ ನೀಡುತ್ತಿದ್ದೇವೆ ಎಂದರು.
ಲಾಕ್‌ಡೌನ್ ವೇಳೆ ಬಡವರನ್ನು ಗುರ್ತಿಸಿ ಸಂಪಂಗಿಯವರು ಸಿಲಿಂಡರ್ ವ್ಯವಸ್ಥೆ ಇರುವ ಆ್ಯಂಬುಲೆನ್ಸ್ ನೀಡಿದ್ದಾರೆ.ಕೋವಿಡ್ ಸಂದರ್ಭದಲ್ಲಿಯಾರಿಗೆ ಸಹಾಯಮಾಡಲು ಸಾಧ್ಯವಿದೆ. ಎಲ್ಲರೂ ಸಹಕಾರಮಾಡಬೇಕು ಎಂದರು.ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ 3ನೇ ಅಲೆತvಯ ೆ ಲು ಚರ್ಚೆ ಮಾಡಲಾಗುತ್ತದೆ. ಮಕ್ಕಳ ಕೇರ್‌ಸೆಂಟರ್ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದರು.ಇದೇ ವೇಳೆ ಹಲವಾರು ಬಡವರಿಗೆ ಆಹಾರ ಕಿಟ್ ನೀಡಲಾಯಿತು. ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷೆ ಅಶ್ವಿನಿ, ಮಾಜಿ ಶಾಸಕ ವೈ.ಸಂಪಂಗಿ, ಜಿಲ್ಲಾ ಬಿಜೆಪಿಕಾರ್ಯದರ್ಶಿ ಸುರೇಶ್ ನಾರಾಯಣಕುಟ್ಟಿ,ಡಾ.ಕೃಷ್ಣಮೂರ್ತಿ ಮತ್ತಿತರರಿದ್ದರು.
ಗೈರು: ಸಮಾರಂಭಕ್ಕೆ ಸಂಸದ ಎಸ್.ಮುನಿಸ್ವಾಮಿ ಗೈರಾಗಿದ್ದರು. ಬಿಜೆಪಿ ಕಾರ್ಯಕ್ರಮವಾಗಿದ್ದರೂ, ನಗರ ಬಿಜೆಪಿಅಧ್ಯಕ್ಷಕಮಲನಾಥನ್, ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್‌ನಾಯ್ಡು ಕೂಡ ಗೈರುಹಾಜರಾಗಿದ್ದು ಎದ್ದುಕಾಣುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.