ಮರ ಸೇತುವೆ ಶಿಥಿಲ: ರೈತರಲ್ಲಿ ಆತಂಕ
Team Udayavani, May 18, 2020, 7:01 AM IST
ಕೋಲಾರ: ತಾಲೂಕಿನ ತ್ಯಾವನಹಳ್ಳಿ ಸಮೀಪ ಕೆ.ಸಿ. ವ್ಯಾಲಿ ನೀರು ಹರಿಯುವ ರಾಜಕಾಲುವೆ ಮೇಲೆ ರೈತರು ತೋಟಗಳಿಗೆ ಕೃಷಿ ಚಟು ವಟಿಕೆಗಳಿಗೆ ಹೋಗಿ ಬರಲು ಮರಗಳಿಂದ ನಿರ್ಮಿಸಿಕೊಂಡಿರುವ ಸೇತುವೆ ಶಿಥಿಲಗೊಂ ಡಿದ್ದು, ದೊಡ್ಡಮಟ್ಟದ ಅನಾಹುತ ಸಂಭವಿ ಸುವ ಮುನ್ನಾ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಎ.ಎಸ್.ನಂಜುಂಡಗೌಡ ಆಗ್ರಹಿಸಿದ್ದಾರೆ.
ತ್ಯಾವನಹಳ್ಳಿಯಿಂದ ಶಿವಾರಪಟ್ಟಣ ಕೆರೆಗೆ ಕೆ.ಸಿ. ವ್ಯಾಲಿ ನೀರು ಹರಿದು ಹೋಗುವ ರಾಜ ಕಾಲುವೆ ಮೇಲೆ ಸರ್ಕಾರದ ನಕಾಶೆಯಲ್ಲಿ ರಸ್ತೆ ಇದ್ದರೂ, ಗ್ರಾಮ ಪಂಚಾಯಿತಿಯಾಗಲಿ, ಜಿಲ್ಲಾಡಳಿತವಾಗಲಿ ರಸ್ತೆ ನಿರ್ಮಿಸುವ ಗೋಜಿಗೆ ಹೋಗಿಲ್ಲ ಎಂದು ವಿಷಾದಿಸಿದರು. ಗುರುಗುಂಜಿಗುರ್ಕಿ ರಾಮಚಂದ್ರಪ್ಪ ಹಾಗೂ ಮೋಹನ್ ಮತ್ತಿತರರು ಮಾತನಾಡಿ,
ತ್ಯಾವನಹಳ್ಳಿ, ಗುರಗುಂಜಿಗುರ್ಕಿ ಮತ್ತಿತರ ಗ್ರಾಮಗಳ ರೈತರು ತಮ್ಮ ಕೃಷಿ ಚಟುವಟಿಕೆ ಗಳಿಗಾಗಿ ಈ ಮರದ ಸೇತುವೆಯನ್ನು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದು, ಇದರ ಮೇಲೆಯೇ ಎತ್ತುಗಳ ಸಮೇತ ಓಡಾಡ ಬೇಕಾದ ಅನಿವಾರ್ಯತೆ ಇದೆ. ಈ ಸೇತುವೆ ಮೇಲೆ ಓಡಾಡುವುದರಿಂದ ಅದು ಯಾವಾಗ ಕುಸಿಯುವುದೋ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಪ್ರಾಣ ಬಿಗಿ ಹಿಡಿದುಕೊಂಡೇ ಸಾಗುತ್ತಿದ್ದೇವೆ ಎಂದರು.
ಈ ಸಂಬಂಧ ಶಾಸಕರ ಗಮನಕ್ಕೂ ತರಲಾಗಿದ್ದು, ಸೇತುವೆ ನಿರ್ಮಿಸಲು ಮನವಿ ಮಾಡಲಾಗಿದೆ ಎಂದರು. ಕೆ.ಸಿ. ವ್ಯಾಲಿ ನೀರು ಹರಿಯದಿದ್ದಾಗ ಜನ ಈ ಕಾಲುವೆ ಮಾರ್ಗವಾಗಿಯೇ ಎತ್ತಿನ ಗಾಡಿ, ಟ್ರ್ಯಾಕ್ಟರ್ ಓಡಿಸಿಕೊಂಡು ಸಾಗುತ್ತಿದ್ದರು. ಆದರೆ, ಈಗ ಕೆ.ಸಿ. ವ್ಯಾಲಿ ನೀರು ತುಂಬಿ ಹರಿಯುತ್ತಿರುವುದರಿಂದ ಸೇತುವೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.