ಇಬ್ಬರ ಬಂಧನ, 17 ವಾಹನ ವಶ
Team Udayavani, Sep 11, 2020, 2:32 PM IST
ಕೆಜಿಎಫ್: ಉರಿಗಾಂ ವೃತ್ತದ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ, ಅವರಿಂದ 17 ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಬೆಂಗಳೂರು ಟಿ.ಸಿ.ಪಾಳ್ಯ ನಿವಾಸಿ ಸತೀಶ್ ಕೊಂಡಾ (19), ಕೆಜಿಎಫ್ ಸಮೀಪದ ದಾಸರ ಹೊಸಹಳ್ಳಿಯ ನಿವಾಸಿ ವಿನೋದ್ ಕುಮಾರ್ ಬಿನ್ ಬಾಲಾಜಿರಾವ್ (19) ಎಂಬುವವರನ್ನು ಬಂಧಿಸಿ, ಅವರಿಂದ17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ದಾಸರಹೊಸಹಳ್ಳಿ ಲ್ಯಾಂಡ್ ಮಾರ್ಕ್ ಸಮೀಪದ ನಿವಾಸಿ ಸೂರ್ಯ ಬಿನ್ ನಾಗಪ್ಪ (18) ಎಂಬಾತನು ತಲೆಮರೆಸಿಕೊಂಡಿರುತ್ತಾರೆ.
ಹೋಂಡಾ ಡಿಯೋ 09, ಬಜಾಜ್ ಪಲ್ಸರ್ 01, ಬಜಾಜ್ ಸಿಟಿ-100: 02 ವಾಹನ, ಹಿರೋ ಸ್ಪೈಂಡ್ಲರ್ 01, ಹೋಂಡಾ ಆಕ್ಟೀವಾ 01, ಟಿವಿಎಸ್ ಫಿಯರೋ 01, ಹೋಂಡಾ ಶೈನ್ 01, ಯಮಹಾ ಆರ್.ಎಕ್ಸ್ 01 ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ದ್ವಿಚಕ್ರ ವಾಹನಗಳನ್ನು ಬೆಂಗಳೂರು ನಗರದ ಕಾಡುಗೋಡಿ, ಮಹದೇವಪುರ, ಆವಲಹಳ್ಳಿ, ಮೇಡಹಳ್ಳಿ, ಜೀವನ್ ಭೀಮಾನಗರ ಮುಂತಾದ ಸ್ಥಳಗಳಲ್ಲಿ ಕಳವು ಮಾಡಿರುತ್ತಾರೆ.
ಆರೋಪಿಗಳನ್ನು ಮತ್ತು ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡುವಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರ ಮಾರ್ಗದರ್ಶನ, ಡಿವೈಎಸ್ಪಿ ಬಿ.ಕೆ. ಉಮೇಶ ನೇತೃತ್ವದಲ್ಲಿಉರಿಗಾಂ ಸಿಪಿಐ ಮುಸ್ತಾಕ್‌ಪಾಷ,ಪಿಎಸ್‌ಐ ಆರ್.ವಿಜಯ್, ಸಿಬ್ಬಂದಿ ಗಳಾದ ಸುನೀಲ್‌ಕುಮಾರ್, ಸಿದ್ದುಸುಂ ಟ್ಯಾನ್, ಶಂಕರ್, ಮಹೇಂದ್ರಪ್ರಸಾದ್, ಆನಂದಕುಮಾರ್, ಮಂಜುಳಾ ರವರು ಯಶಸ್ವಿಯಾಗಿರುತ್ತಾರೆಂದು ಕೇಂದ್ರವಲಯ ಐಜಿಪಿ ಸೀಮಾಂತ ಕುಮಾರ್ ಸಿಂಗ್ ಪ್ರಶಂಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.