ವಿಶೇಷ ಕೌಂಟರ್ ಆರಂಭಿಸಲು ಒತ್ತಾಯ
Team Udayavani, Dec 12, 2020, 4:57 PM IST
ಮುಳಬಾಗಿಲು: ಬ್ಯಾಂಕ್‌ನಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಗ್ರಾಹಕ ಞರಿಗೆ ಆಗುತ್ತಿರುವ ತೊಂದರೆ ಗಳನ್ನು ತಪ್ಪಿಸಲು ವಿಶೇಷ ಕೌಂಟರ್ ತೆರೆದು ಬ್ಯಾಂಕ್‌ನಲ್ಲಿ ಮೂಲ ಸೌಕರ್ಯ ಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದ ಎಸ್‌ಬಿಐ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿ ಸಹಾಯಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಮುಂದಾಲೋಚನೆಯಿಲ್ಲದೆ ಬ್ಯಾಂಕ್ ಗಳನ್ನು ವಿಲೀನ ಮಾಡಿ ಆಗುವ ತೊಂದರೆಗಳ ಬಗ್ಗೆ ಯೋಚನೆ ಮಾಡದ ಸರ್ಕಾರದ ದ್ವಂದ್ವ ನೀತಿಗೆ ಗ್ರಾಹಕರು ಪರದಾಡ ಬೇಕಾದ ಪರಿಸ್ಥಿತಿಗೆ ನಗರದ ಎಸ್.ಬಿ.ಐ ಬ್ಯಾಂಕ್ ಉದಾಹರಣೆಯಾಗಿದೆ. ಗ್ರಾಹಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲವಾಗಲುಪ್ರತ್ಯೇಕ ಕೌಂಟರ್ ತೆರೆಯಬೇಕೆಂದುಒತ್ತಾಯಿಸಿ ಪ್ರತಿಭಟನೆ ನಡೆಸಿ ಬ್ಯಾಂಕ್‌ಸಹಾಯಕ ವ್ಯವಸ್ಥಾಪಕಿ ಲೀಲಾ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸಿಬ್ಬಂದಿಹಾಗೂ ಸೌಕರ್ಯಗಳ ಕೊರತೆ ಬ್ಯಾಂಕಿನಲ್ಲಿದೆ.ಪ್ರತ್ಯೇಕಕೌಂಟರ್ ತೆರೆಯುವ ಜೊತೆಗೆ ಸೌಕರ್ಯ ಒದಗಿಸುವ ಭರವಸೆ ನೀಡಿದರು.ತಾಲೂಕು ಅಧ್ಯಕ್ಷ ಫಾರೂಕ್‌ಪಾಷ, ವಿಜಯ್‌ಪಾಲ್, ಸುಪ್ರೀಂಚಲ, ಸಾಗರ್, ಮೇಲಾಗಾಣಿ ದೇವರಾಜ್, ಅಣ್ಣಿಹಳ್ಳಿ ನಾಗರಾಜ್, ಐತಾಂಡಹಳ್ಳಿ ಮಂಜುನಾಥ್, ರವಿ, ಶಿವ, ಸುನಿಲ್,ವಿನೋದ್, ವಿಶ್ವ, ವೇಣು, ನವೀನ್ , ಕೇಶವ, ಮೂರ್ತಿ, ಹೆಬ್ಬಣಿ ಆನಂದರೆಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
332 ನಾಮಪತ್ರ ಸಲ್ಲಿಕೆ :
ಮುಳಬಾಗಿಲು: ತಾಲೂಕಿನ 30 ಗ್ರಾಪಂಗಳಿಗೆ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಶುಕ್ರವಾರ 282 ಕ್ಷೇತ್ರಗಳ 518 ಸ್ಥಾನಗಳಿಗೆ332 ನಾಮಪತ್ರ ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಸಿರುವುದರ ಪೈಕಿ ಪುರುಷ ಮತ್ತು ಮಹಿಳೆಯರು ಸೇರಿದಂತೆ94 ಪ.ಜಾತಿ,21 ಪ.ಪಂಗಡ,37 ಹಿಂದುಳಿದ ಅ ವರ್ಗ, 7 ಹಿಂದುಳಿದ ಬ ವರ್ಗ, ಸಾಮಾನ್ಯ ವರ್ಗದ 173 ನಾಮಪತ್ರಗಳು ಸೇರಿದಂತೆ ಒಟ್ಟು 185 ಪುರುಷರು ಮತ್ತು147 ಮಹಿಳೆಯರು ಒಳಗೊಂಡಂತೆ 332 ಸಲ್ಲಿಕೆಯಾಗಿದೆ. ಉಳಿದಂತೆ 323 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿರುವುದಿಲ್ಲ, ನಾಮಪತ್ರ ಸಲ್ಲಿಸಲು ಡಿ.16 ಕೊನೆಯ ದಿನವಾಗಿರುತ್ತದೆ. ಪರಿಶೀಲನೆ 17, ಹಿಂಪಡೆಯಲು 19, 27 ರಂದು ಮುಂಜಾನೆ7ರಿಂದ ಸಂಜೆ5 ಗಂಟೆ ವರೆಗೆ ಮತದಾನ ನಡೆಯಲಿದೆ.30 ರಂದು ಮತ ಎಣಿಕೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.