Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
Team Udayavani, Nov 24, 2024, 2:31 PM IST
ಕೋಲಾರ: ಜಿಲ್ಲೆಯಲ್ಲೇ ಮೊದಲ ಬಾರಿಗೆ ಯಾಂತ್ರಿಕ ಆನೆಗಳ ಮೂಲಕ ಧಾರ್ಮಿಕ ಮೆರವಣಿಗೆಯೊಂದು ನಡೆಯಲಿದ್ದು, ನೂರಾರು ವರ್ಷಗಳ ಇತಿಹಾಸವಿರುವ ತಾಲೂಕಿನ ನಾಗಲಾಪುರದ ಶ್ರೀಮದ್ ವೀರ ಸಿಂಹಾಸನ ಮಠವು ಇದಕ್ಕೆ ವೇದಿಕೆಯನ್ನೊದಗಿಸಲಿದೆ.
ನಾಗಲಾಪುರದ ಶ್ರೀಮದ್ ಮಠವು ಪ್ರತಿ ಕಾರ್ತಿಕ ಮಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ, ಲಿಂಗೈಕ್ಯ ಶ್ರೀ ಗುರುಲಿಂದರಾಜಚಾರ್ಯ ಸ್ವಾಮಿಗಳ 22ನೇ ವರ್ಷದ ಸಂಸ್ಕರಣೋತ್ಸವ ಹಾಗೂ ಮಹಾ ಮೃತ್ಯುಂಜಯ ಹೋಮ ಧರ್ಮಜಾಗೃತಿ ಕಾರ್ಯದಲ್ಲಿ ಯಾಂತ್ರಿಕ ಆನೆಗಳ ಧಾರ್ಮಿಕ ಮೆರವಣಿಗೆ ನಡೆಸುವಂತ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.
ಯಾವಾಗ?: ಕಾರ್ತಿಕ ಮಾಸದ ಕೊನೆಯ ಸೋಮವಾರ ನ.25ರಂದು ನಾಗಲಾಪುರ ಮಠದಲ್ಲಿ ನಡೆಯುವ ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆಗಳನ್ನು ಬಳಸಲಾಗುತ್ತಿದೆ. ಹೀಗೆ ಯಾಂತ್ರಿಕ ಆನೆಗಳನ್ನು ಬಳಸಿ ಧಾರ್ಮಿಕ ಮೆರವಣಿ ಮಾಡಲು ಮಠದ ಶ್ರೀತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳೇ ಆಸಕ್ತಿ ವಹಿಸಿರುವುದು ವಿಶೇಷವೆನಿಸಿದೆ. ಈ ಧರ್ಮ ಜಾಗೃತಿ ಕಾರ್ಯಕ್ರಮ, ಕಲ್ಯಾಣೋತ್ಸವ ಹಾಗೂ ಯಾಂತ್ರಿಕ ಆನೆಗಳ ಮೆರವಣಿಗೆಗೆ ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶ್ರೀ ಶಿವರುದ್ರ ಮಹಾಸ್ವಾಮಿ, ಕಡೇನಂದಿಹಳ್ಳಿ ಮಠದ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ, ಚಿಕ್ಕಕಲ್ಲುಬಾಳು ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿ, ಸಂಸ್ಥಾನ ಮಠದ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮಿ, ಬೆಳ್ಳಾವಿ ಸಂಸ್ಥಾನ ಮಠದ ಶ್ರೀ ಮಹಂತ ಶಿವಾಚಾರ್ಯ ಸ್ವಾಮಿ ಹಾಗೂ ಹುಣಸಮಾರನಹಳ್ಳಿ ಸಂಸ್ಥಾನ ಮಠದ ಶ್ರೀ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.
ಯಾಂತ್ರಿಕ ಆನೆ ಏಕೆ?: ಮಠಗಳಲ್ಲಿ ಆನೆಗಳನ್ನು ಸಾಕುವುದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ರಾಜ್ಯದ ಅನೇಕ ಮಠಗಳು ಆನೆಗಳನ್ನು ಸಾಕುತ್ತಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆನೆಗಳನ್ನು ಬಂಧಿಸಿಟ್ಟುಕೊಂಡು ಸಾಕುವುದಕ್ಕೆ ಅನೇಕ ಕಾನೂನು ಕಟ್ಟಲೆಗಳ ನಿರ್ಬಂಧಗಳು ಅಡ್ಡಿಯಾಗುತ್ತಿವೆ. ಇದ ರಿಂದ ಸಾಕಷ್ಟು ಮಠಗಳು ಆನೆಗಳನ್ನು ಸಾಕುವುದನ್ನು ನಿಲ್ಲಿಸುತ್ತಿವೆ. ಅರಣ್ಯ ಕಾಯ್ದೆಯು ಆನೆಗಳನ್ನು ಬಂಧಿಸಿಟ್ಟುಕೊಂಡು ಸಾಕುವುದು, ಸಾಗಾಟ ಮಾಡುವುದು ಇತ್ಯಾದಿಗಳನ್ನು ಕಾಯ್ದೆಗಳ ಮೂಲಕ ನಿರ್ಬಂಧಿಸುತ್ತಿದೆ. ಇದರಿಂದ ಬಹುತೇಕ ಮಠಗಳು ಜೀವಂತ ಆನೆಗಳನ್ನು ಇನ್ನೆಂದಿಗೂ ಸಾಕುವುದಿಲ್ಲ, ಬಾಡಿಗೆ ಪಡೆಯುವುದಿಲ್ಲ ಎನ್ನುವ ನಿರ್ಧಾರಕ್ಕೆ ಬರುತ್ತಿವೆ. ಕೋಲಾರದ ನಾಗಲಾಪುರ ಮಠವು ಇಂತದ್ದೊಂದು ನಿರ್ಧಾರಕ್ಕೆ ಬಂದಿದ್ದು, ಕಾರ್ತಿಕ ಮಾಸದ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಯಾಂತ್ರಿಕ ಆನೆಗಳನ್ನು ಬಳಸಿ ಮೆರವಣಿಗೆ ಮಾಡುವ ಮೂಲಕ ಕಾಡು ಪ್ರಾಣಿಗಳ ಸ್ವತಂತ್ರ ಬದುಕನ್ನು ಗೌರವಿಸುವ ಸಂದೇಶವನ್ನು ಸಮಾಜಕ್ಕೆ ನೀಡಲು ಮುಂದಾಗಿದೆ.
ಯಾರು ಕೈಜೋಡಿಸಿದ್ದಾರೆ?: ಮಠದ ಸ್ವಾಮಿಗಳ ಈ ನಿಲುವನ್ನು ಗೌರವಿಸಿ, ದೇಶದಲ್ಲಿ ಕಾಡು ಪ್ರಾಣಿಗಳು ಹಾಗೂ ಸಾಕು ಪ್ರಾಣಿಗಳ ಹಿತ ರಕ್ಷಣೆ ಮತ್ತು ಸಂರಕ್ಷಣೆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವ ಅಂತಾರಾಷ್ಟ್ರೀಯ ಖ್ಯಾತಿಯ ಕ್ಯೂಪಾ ಮತ್ತು ಪೇಟಾ ಸಂಸ್ಥೆಗಳು ಕೈಜೋಡಿಸಿವೆ.
ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆಕ್ಷನ್ ಕ್ಯೂಪಾ ಮತ್ತು ಪೀಪಲ್ ಫಾರ್ ದಿ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಪೇಟಾ ಸಂಸ್ಥೆಗಳ ಪ್ರತಿನಿಧಿಗಳು ಯಾಂತ್ರಿಕ ಆನೆಗಳ ಮೂಲಕ ಧಾರ್ಮಿಕ ಮೆರವಣಿಗೆ ನಡೆಸುವ ಕಾರ್ಯಕ್ಕೆ ಅಗತ್ಯ ವಿರುವ ನೆರವನ್ನು ನೀಡುತ್ತಿದ್ದಾರೆ. ಜೊತೆಗೆ ಯಾಂತ್ರಿಕ ಆನೆಯ ಜವಾಬ್ದಾರಿಯನ್ನು ಹೊತ್ತು ಕೊಂಡು ಮೆರವಣಿಗೆಯಲ್ಲಿಯೂ ಭಾಗವಹಿಸುತ್ತಿದ್ದಾರೆ.
ಎಂತ ಆನೆಗಳು?: ಇತ್ತೀಚಿನ ದಿನಗಳಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಸ್ವಾಗತಕಾರರಾಗಿ ನೈಜ ಆನೆಗಳ ಆಕಾರ ಮತ್ತು ಶಬ್ದ ಮಾಡುವ ಯಾಂತ್ರಿಕ ಆನೆಗಳನ್ನು ಬಳಸುವುದು ಹೊಸ ಫ್ಯಾಷನ್ ಎಂಬಂತಾಗುತ್ತಿದೆ. ಆದರೆ, ಸಂಪ್ರದಾಯಬದ್ಧವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಯಾಂತ್ರಿಕ ಆನೆ ಬಳಸಿದ್ದು ತೀರಾ ಕಡಿಮೆ. ಕೋಲಾರ ಜಿಲ್ಲೆಯಲ್ಲಂತು ಇಂತದ್ದೊಂದು ಮೊದಲ ಪ್ರಯತ್ನಕ್ಕೆ ಶ್ರೀಮದ್ ನಾಗಲಾಪುರ ಮಠದ ಶ್ರೀ ತೇಜೇಶ ಲಿಂಗ ಶಿವಾಚಾರ್ಯ ಸ್ವಾಮೀಜಿ ಮುಂದಾಗಿರುವುದು ಸಾರ್ವಜನಿಕ ವಲಯದ ಆಶ್ಚರ್ಯ ಮತ್ತು ಆಕರ್ಷಣೆಯಾಗುತ್ತಿದೆ. ಸೋಮವಾರ ನಾಗಲಾಪುರ ಮಠದಲ್ಲಿ ನಡೆಯುವ ಮೆರವಣಿಗೆಯಲ್ಲಿ 3 ಅಡಿ ಎತ್ತರದ 800 ಕೆ.ಜಿ ತೂಕದ ಮತ್ತು ಜೀವ ಗಾತ್ರದ ಯಾಂತ್ರಿಕ ಆನೆಗಳು ಭಾಗವಹಿಸಲಿವೆ ಎಂದು ಪೇಟಾ ಸಂಸ್ಥೆಯು ಅಧಿಕೃತವಾಗಿ ಪ್ರಕಟಣೆ ನೀಡಿದೆ. ಈ ವಿನೂತನ ಧಾರ್ಮಿಕ ಕಾರ್ಯಕ್ಕೆ ಸಾರ್ವಜನಿಕರನ್ನು ಸ್ವಾಗತಿಸಿದೆ.
ಧಾರ್ಮಿಕ ಮೆರವಣಿಗೆ ಮತ್ತಿತರ ಕಾರ್ಯಕ್ರಮಗಳಿಗೆ ಆನೆಗಳನ್ನು ಬಳಸುವ ಸಂಪ್ರದಾಯ ಇದೆಯಾದರೂ, ಇತ್ತೀಚಿಗೆ ಸರ್ಕಾರದ ಕಾಯ್ದೆ ಕಟ್ಟಳೆಗಳಿಂದ ಆನೆಗಳನ್ನು ಮಠದಲ್ಲಿ ಸಾಕುವುದು, ಬೇರೆಡೆಯಿಂದ ಸಾಗಾಟ ಮಾಡಿ ತರಿಸುವುದು ಕಷ್ಟ. ಯಾಂತ್ರಿಕ ಆನೆಗಳ ಧಾರ್ಮಿಕ ಮೆರವಣಿಗೆಯನ್ನು ತಾವು ಯಡೆಯೂರು ಮಠದಲ್ಲಿ ನೋಡಿ, ಇಂತದ್ದೊಂದು ಸಂಪ್ರದಾಯಕ್ಕೆ ತಮ್ಮ ಮಠದಲ್ಲಿ ನಾಂದಿಯಾಡಬೇಕು ಎಂಬ ಕಾರಣದಿಂದ ಯಾಂತ್ರಿಕ ಆನೆಗಳ ಮೆರವಣಿಗೆ ನಡೆಸಲಾಗುತ್ತಿದೆ. ಈ ಮೂಲಕ ವನ್ಯ ಜೀವಿಗಳ ಸಂರಕ್ಷಣೆ ಸಂದೇಶವನ್ನು ಸಮಾಜಕ್ಕೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ●ಶ್ರೀ ತೇಜೇಶ ಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀಮದ್ ನಾಗಲಾಪುರ ವೀರ ಸಿಂಹಾಸನ ಮಠ, ಕೋಲಾರ ತಾಲೂಕು
ಯಾಂತ್ರಿಕ ಆನೆಗಳನ್ನು ಸಂಪ್ರದಾಯಿಕ ಸಮಾರಂಭಗಳಲ್ಲಿ ಬಳಸುವ ಮೂಲಕ ನಿಜ ಆನೆಗಳು ಕಾಡುಗಳಲ್ಲಿ ತಮ್ಮ ಕುಟುಂಬದೊಂದಿಗೆ ಕಾಡುಗಳಲ್ಲಿ ಸ್ವತಂತ್ರವಾಗಿ ವಾಸ ಮಾಡಬಹುದು. ಅವುಗಳ ನಿರಂತರ ಬಂಧನಕ್ಕೊಳಗಾಗುವ ನೋವು, ಆಯುಧಗಳ ಯಾತನೆ ಮತ್ತು ಪ್ರಕೃತಿ, ತನಗಿಷ್ಟದ ಎಲ್ಲದರಿಂದ ವಂಚಿತವಾಗಿ ಉಳಿಯುವುದರಿಂದ ಆನೆಗಳಿಗೆ ಮುಕ್ತಿ ನೀಡಬಹುದಾಗಿದೆ. -ಅನೂಷಾ ಯಾದವ್, ಪೇಟಾ ಪರವಾಗಿ.
■ ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Karnataka: ಅನರ್ಹರ ಕಾರ್ಡ್ ಮಾತ್ರ ಎಪಿಎಲ್‌ಗೆ: ಮುನಿಯಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.