ಹರಾಜಾಗದೇ ಕೊಳೆಯುತ್ತಿದೆ ತರಕಾರಿ, ಟೊಮೆಟೋ!
Team Udayavani, May 1, 2021, 3:44 PM IST
ಕೋಲಾರ: ಕೋವಿಡ್ ನಿಯಂತ್ರಣಕ್ಕಾಗಿ ಎಪಿಎಂಸಿ ಮಾರುಕಟ್ಟೆಗೆ ವಹಿವಾಟಿನ ಸಮಯವನ್ನು ಕೇವಲ ನಾಲ್ಕು ಗಂಟೆಗೆ ಸೀಮಿತಗೊಳಿ ಸಿರುವುದರಿಂದ ನಗರದ ಮಾರುಕಟ್ಟೆಯಲ್ಲಿ ನೂರಾರು ಟನ್ ಟೊಮೆಟೋ, ತರಕಾರಿ ಮಾರಾಟವಾಗದೇ ರಾಶಿ ಬೀಳುವಂತಾಗಿದೆ.
ಕೋಲಾರದ ಎಪಿಎಂಸಿ ಮಾರುಕಟ್ಟೆ ಟೊಮೆಟೋ ಮತ್ತು ತರಕಾರಿಗಳ ಹರಾಜಿಗೆ ಪ್ರಸಿದ್ಧಿಯಾಗಿದೆ.ನೆರೆಯ ಬೆಂಗಳೂರು ಮತ್ತು ಚೆನ್ನೈ ಮಾರು ಕಟ್ಟೆಗಳಿಗೆ ಬಹುತೇಕ ತರಕಾರಿ, ಸೊಪ್ಪು, ಟೊಮೆಟೋ ಕೋಲಾರ ಮಾರುಕಟ್ಟೆಯಿಂದಲೇ ಸರಬರಾಜಾಗುತ್ತದೆ.
ಏಷ್ಯಾದ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಯಾಗಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿತ್ತು. ಸಾಮಾನ್ಯವಾಗಿ ನಸುಕಿನ ನಾಲ್ಕು ಗಂಟೆಯಿಂದಆರೇಳು ಗಂಟೆಯೊಳಗಾಗಿ ವಿವಿಧ ತರಕಾರಿ ಮತ್ತು ಸೊಪ್ಪುಗಳು ಹರಾಜಾಗಿ ಬಿಡುತ್ತಿತ್ತು. ಆನಂತರದ ಉಳಿದ ಅವಧಿಯಲ್ಲಿ ಮಧ್ಯಾಹ್ನದ ವರೆಗೂ ಟೊಮೆಟೋ ಹರಾಜಾಗುತ್ತಿತ್ತು. ಆನಂತರ ಹರಾಜಾದ ಟೊಮೆಟೋವನ್ನು ಖರೀದಿಸಿದವರು ಲಾರಿಗಳಲ್ಲಿ ತುಂಬಿ ದೇಶದ ವಿವಿಧ ರಾಜ್ಯಗಳ ಮಾರುಕಟ್ಟೆಗಳಿಗೆ ರವಾನಿಸುವ ಕಾರ್ಯ ನಡೆಯುತ್ತಿತ್ತು.
ರಾಶಿ ಬೀಳುತ್ತಿದೆ: ಆದರೆ, ಸರ್ಕಾರ ಕೋವಿಡ್‌ನಿಯಂತ್ರಣ ಹಿನ್ನೆಲೆಯಲ್ಲಿ ಮಾರುಕಟ್ಟೆಯವಹಿವಾಟವನ್ನು ಬೆಳಗ್ಗೆ 6 ರಿಂದ 10 ರವರೆಗೆಮಾತ್ರವೇ ಸೀಮಿತಗೊಳಿಸಿರುವುದರಿಂದ ಕೋಲಾರಮಾರುಕಟ್ಟೆಯಲ್ಲಿ ಟನ್‌ಗಟ್ಟಲೆ ತರಕಾರಿ, ಟೊಮೆಟೋ ಮಾರಾಟವಾಗದೆ ರಾಶಿ ಬೀಳುವಂತಾಗಿದೆ.
100 ಟನ್ ಟೊಮೆಟೋ: ಕೋಲಾರ ಮಾರುಕಟ್ಟೆಯಲ್ಲಿ ಈಗ ಟೊಮೆಟೋ ಸೀಸನ್ ಇಲ್ಲ.ಆವಕವಾಗುತ್ತಿರುವ ಟೊಮೆಟೋ ಪ್ರಮಾಣವೇ ಕಡಿಮೆ. ಆದರೂ, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ಕಡಿಮೆ ಗುಣಮಟ್ಟದ 100 ಟನ್ ಟೊಮೆಟೋ ಹರಾಜಾಗದ ಉಳಿಯುವಂತಾಗಿದೆ.
ಪಲ್ಪ್ ಮಾಡುವ ಕಾರ್ಯ ಸ್ಥಗಿತ: ಕೋಲಾರ ಮಾರುಕಟ್ಟೆಯಿಂದ ಹೊರ ರಾಜ್ಯಗಳಿಗೆ ಟೊಮೆಟೋ ಸರಬರಾಜಾಗದೆ ಇರುವುದರಿಂದಟೊಮೆಟೋ ಧಾರಣೆ 15 ಕೇಜಿ ಬಾಕ್ಸ್‌ಗೆ 30ರಿಂದ 60 ರೂ.ಗೆ ಇಳಿದಿತ್ತು. ಜೊತೆಗೆ, ಕೋಲಾರದ ಮಾರುಕಟ್ಟೆಯಲ್ಲಿ ಉಳಿಕೆಯಾಗುವ ಎಲ್ಲಾ ಟೊಮೆಟೋ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಟೊಮೆಟೋ ಪಲ್ಪ್ ಕಾರ್ಖಾನೆಗೆಹೋಗುತ್ತಿತ್ತು. ಆದರೆ, ಚಿತ್ತೂರು ಪಲ್ಪ್ ಕಾರ್ಖಾನೆಯಲ್ಲಿ ಈಗ ಮಾವಿನ ಸೀಸನ್ ಆರಂಭವಾಗಿರುವುದರಿಂದ ಟೊಮೆಟೋ ಪಲ್ಪ್ ಮಾಡುವ ಕಾರ್ಯ ಸ್ಥಗಿತಗೊಂಡಿದೆ.
ಚಿತ್ತೂರು ಡೀಸಿ ಸೂಚನೆ: ಆದರೂ, ಟೊಮೆಟೋಬೆಳೆಗಾರರಿಗೆ ಅನುಕೂಲವಾಗುವಂತೆ ಚಿತ್ತೂರುಡೀಸಿಗೆ ಅಲ್ಲಿನ ಸರಕಾರ ಇನ್ನೂ ಹತ್ತುದಿನಗಳಾದರೂ ಟೊಮೆಟೋ ಖರೀದಿಮಾಡುವಂತೆ ಸೂಚಿಸಿದೆ. ಇದು ಆರಂಭವಾದರೆ ಕೋಲಾರದ ಟೊಮೆಟೋಗೂ ಮತ್ತೆ ಮಾರುಕಟ್ಟೆಸಿಗಲಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ವಿವರಿಸುತ್ತಾರೆ.
7 ಟನ್ ತರಕಾರಿ: ಕೋಲಾರ ಮಾರುಕಟ್ಟೆಗೆವೈವಿಧ್ಯಮಯವಾದ ತರಕಾರಿ ಮತ್ತು ಸೊಪ್ಪುಅವಕವಾಗುತ್ತದೆ. ಗುರುವಾರ ಮಾರುಕಟ್ಟೆಗೆಸುಮಾರು 20 ರಿಂದ 25 ಟನ್‌ನಷ್ಟು ತರಕಾರಿಆವಕವಾಗಿದೆ. ಈ ಪೈಕಿ ಆರರಿಂದ ಏಳು ಟನ್‌ತರಕಾರಿ ಮಾರಾಟವಾಗದೆ ಉಳಿದಿದೆ. ಗುರುವಾರ ಇಷ್ಟು ದೊಡ್ಡ ಪ್ರಮಾಣದ ತರಕಾರಿ ಉಳಿದಿರುವುದರಿಂದ ಶುಕ್ರವಾರ ರೈತರು ಮಾರುಕಟ್ಟೆಗೆತರಕಾರಿ ತಂದಿದ್ದೆ ಕಡಿಮೆಯಾಗಿತ್ತು. ತಂದ ಮಾಲಿನಲ್ಲಿಯೂ ಒಂದಷ್ಟು ಉಳಿಯುವಂತಾಗಿತ್ತು.
ಉಳಿದ ತರಕಾರಿಯಲ್ಲಿ ಸುಮಾರು ನಾಲ್ಕೈದು ಟನ್ ಕ್ಯಾಪ್ಸಿಕಾಂ, ಬಜ್ಜಿ ಮೆಣಸಿನಕಾಯಿ, ಸೋರೆ ಕಾಯಿ ಮತ್ತು ಸೌತೆಕಾಯಿಯಾಗಿದೆ. ಉಳಿದಂತೆಕ್ಯಾರೆಟ್, ಹೂಕೋಸು, ಎಲೆಕೋಸು, ಬದನೆ, ಸೊಪ್ಪು ಇತರೇ ತರಕಾರಿಗಳು 2 ಟನ್‌ನಷ್ಟು ಉಳಿದಿದೆ.
24 ಗಂಟೆ ವಹಿವಾಟಿಗೆ ಮನವಿ: ರೈತರಿಗೆ ಆಗುತ್ತಿರುವ ಅನಾನುಕೂಲವನ್ನು ಗಮನಿಸಿದ ರೈತ ಸಂಘಟನೆಗಳು ಈಗಾಗಲೇ ಎಪಿಎಂಸಿಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಮಾಡಿಕೋಲಾರ ಮಾರುಕಟ್ಟೆಯನ್ನು ದಿನದ 224 ಗಂಟೆಯೂ ಕಾರ್ಯಚರಣೆ ನಡೆಸುವಂತೆ ಮಾಡಬೇಕೆಂದು ಕೋರಿದ್ದಾರೆ. ಕಳೆದ ವರ್ಷ ಕೋವಿಡ್ ಅವಧಿಯಲ್ಲಿಯೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮಾರುಕಟ್ಟೆಯನ್ನು ಸಮರ್ಪಕವಾಗಿ ನಡೆಸಲಾಯಿತು.ಈಗಲೂ ಅಂತದ್ದೆ ಕ್ರಮಗಳ ಮೂಲಕ ಮಾರುಕಟ್ಟೆಯನ್ನು ತೆರೆಯಬೇಕು. ಇಲ್ಲವಾದರೆ ಕಷ್ಟಪಟ್ಟು ವೈವಿಧ್ಯಮ ತರಕಾರಿ, ಟೊಮೆಟೋ ಬೆಳೆದಿರುವ ರೈತಾಪಿ ವರ್ಗಕ್ಕೆ ನಷ್ಟವಾಗುತ್ತದೆ ಎಂದು ಮನವಿಯಲ್ಲಿ ಕೋರಿದ್ದಾರೆ.
ಸ್ಪಂದನೆ ಇಲ್ಲ: ವಾರಾಂತ್ಯದ ಕರ್ಫ್ಯೂ ವೇಳೆಮಾರುಕಟ್ಟೆಯನ್ನು ಸಂಪೂರ್ಣ ಸ್ಥಗಿತ ಗೊಳಿಸಲಾಗಿತ್ತು. ಈಗ 14 ದಿನ ಕರ್ಫ್ಯೂ ಇರುವುದರಿಂದ ಎಪಿಎಂಸಿ 4 ಗಂಟೆ ಅವಧಿ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ.
ಜನತಾ ಕರ್ಫ್ಯೂನಿಂದ ಎಪಿಎಂಸಿಮಾರುಕಟ್ಟೆಗಳಿಗೆ ವಿನಾಯಿತಿಕೊಟ್ಟು, ತರಕಾರಿಯನ್ನು ಬೇರೆ ಕಡೆಸಾಗಿಸಲು ರಾಜ್ಯ ಸರಕಾರ ಕೂಡಲೇ ಅವಕಾಶ ನೀಡಬೇಕು.
ಗುರುವಾರ ಕೋಲಾರ ಎಪಿಎಂಸಿ ಮಾರಕಟ್ಟೆಯಲ್ಲಿ ಹರಾಜಾಗದೆ 6ರಿಂದ 7 ಟನ್ ತರಕಾರಿ, ಗುಣಮಟ್ಟಕಡಿಮೆ ಇರುವ 100 ಟನ್ ಟೊಮೆಟೋಹರಾಜಾಗದೆ ಉಳಿದಿದೆ. ವಹಿವಾಟುಅವಧಿ ಹೆಚ್ಚಿಸುವಂತೆ ರೈತರಿಂದಬಂದಿರುವ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. -ರವಿಕುಮಾರ್, ಉಪನಿರ್ದೇಶಕ, ಕೋಲಾರ ಎಪಿಎಂಸಿ
ಜನತಾ ಕರ್ಫ್ಯೂನಿಂದ ಎಪಿಎಂಸಿಮಾರುಕಟ್ಟೆಗಳಿಗೆ ವಿನಾಯಿತಿಕೊಟ್ಟು, ತರಕಾರಿಯನ್ನು ಬೇರೆ ಕಡೆಸಾಗಿಸಲು ರಾಜ್ಯ ಸರಕಾರ ಕೂಡಲೇ ಅವಕಾಶ ನೀಡಬೇಕು. -ಪುಟ್ಟರಾಜು, ಮಾರುಕಟ್ಟೆ ವ್ಯಾಪಾರಿ
ಟೊಮೆಟೋ ಸೇರಿ ತರಕಾರಿ ಧಾರಣೆ ಕುಸಿದಿರುವ ಸಂದರ್ಭದಲ್ಲಿ ಬೆಳೆದಿರುವ ಬೆಳೆಯನ್ನು ಮಾರುಕಟ್ಟೆಗೆ ತಂದು ಹರಾಜಾಗುವಂತೆ ಮಾಡುವ ಅವಕಾಶವೂ ಜನತಾ ಕರ್ಫ್ಯೂನಿಂದಾಗಿ ಉಂಟಾಗಿದೆ. ಮಾರುಕಟ್ಟೆ ವಹಿವಾಟು ದಿನವಹಿನಡೆಸಲು ಅವಕಾಶ ಕಲ್ಪಿಸಬೇಕು. -ನಾಗರಾಜಗೌಡ, ರೈತ
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.