ಬಂಗಾರಪೇಟೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
Team Udayavani, Sep 18, 2022, 1:59 PM IST
ಬಂಗಾರಪೇಟೆ: ಸಮಾಜದ ವಿವಿಧ ವರ್ಗದ ಜನರ ಮತ ಪಡೆದುಕೊಂಡ ಕೆಲವು ಜನಪ್ರತಿನಿಧಿಗಳು, ಗೆದ್ದ ನಂತರ ಎಲ್ಲಾ ವರ್ಗದ ಜನರನ್ನು ಮರತೆ ಹೋಗಿದ್ದು, ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಬೇಕಾಗಿದೆ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.
ಪಟ್ಟಣದ ವಿಶ್ವಕರ್ಮ ದೇಗುಲದಲ್ಲಿ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಈ ಕ್ಷೇತ್ರದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಮತ ಪಡೆದು ರಾಜಕಾರಣಿಯಾಗಿ ಬಡವರಿಗೆ ಸರ್ಕಾರಿ ಜಮೀನು ಮಾಡಿಕೊಡದೇ ತನ್ನ ಸ್ವಂತಕ್ಕಾಗಿ ಮಾಡಿಕೊಂಡು ಮೆರೆಯುತ್ತಿದ್ದಾರೆ ಎನ್ನುವುದು ಎಲ್ಲರ ಕಣ್ಣುಮುಂದೆ ಇದೆ ಎಂದು ಕಾಂಗ್ರೆಸ್ ಶಾಸಕರ ವಿರುದ್ಧ ಪರೋಕ್ಷವಾಗಿ ತಿರುಗೇಟು ನೀಡಿದರು.
ತಾಲೂಕಿನಲ್ಲಿ ಹೆಚ್ಚಾಗಿ ಸರ್ಕಾರಿ ಜಮೀನು ಗೋಮಾಳವಿದೆ. ಸಮಾಜದಲ್ಲಿರುವ ಎಲ್ಲ ಸಮಾಜಗಳಿಗೆ ತಲಾ ಐದಾರು ಎಕರೆ ಜಮೀನು ಮಂಜೂರು ಮಾಡಿಸಿದರೆ ಆ ಜನಾಂಗವು ಹೆಚ್ಚಾಗಿ ಋಣಿಯಾಗಿರುತ್ತಾರೆ. ಇಂದಿನ ಜನಪ್ರತಿನಿಧಿ ಈ ಒಳ್ಳೆಯ ಕೆಲಸವನ್ನು ಮಾಡದೇ ಯಾವ ರೀತಿ ಸರ್ಕಾರದ ಜಮೀನು ಕಬಳಿಸಿದ್ದಾರೆ ಎನ್ನುವುದು ಗೊತ್ತಿದೆ. ಇಂತಹ ಭ್ರಷ್ಟ ರಾಜಕಾರಣಿ ತಪ್ಪದೇ ಮನೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದರು.
ವಿಶ್ವಕರ್ಮ ಜನಾಂಗಕ್ಕೆ ಬಿಎಸ್‌ವೈ ಶಕ್ತಿ ತುಂಬಿದ್ದಾರೆ: ರಾಜ್ಯದಲ್ಲಿ ವಿಶ್ವಕರ್ಮ ಜನಾಂಗವನ್ನು ಹಲವಾರು ವರ್ಷ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಕಾಂಗ್ರೆಸ್ ಬಳಸಿಕೊಂಡಿದ್ದನ್ನು ತಾವೆಲ್ಲರೂ ನೋಡಿದ್ದೀರಿ. ವಿಶ್ವಕರ್ಮ ಜನಾಂಗದ ಕೆಲವು ಮುಖಂಡರಿಗೆ ರಾಜಕೀಯ ಭವಿಷ್ಯದ ಆಮಿಷವೊಡ್ಡಿ ಅವರಿಂದ ರಾಜಕೀಯ ಅಧಿಕಾರ ಪಡೆದು ಮೋಸ ಮಾಡಿದ್ದ ವೇಳೆ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಕರ್ಮ ನಿಗಮ ಸ್ಥಾಪನೆ ಮಾಡಿ ಅನುದಾನ ಮಂಜೂರು ಮಾಡಿಸಿ ಜನಾಂಗದ ಏಳಿಗೆಗೆ ಶ್ರಮಿಸಿ ವಿಶ್ವಕರ್ಮ ಜನಾಂಗಕ್ಕೆ ಶಕ್ತಿ ತುಂಬಿದ್ದಾರೆಂದು ಹೇಳಿದರು.
ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ಪುರಸಭೆ ಸದಸ್ಯ ಕಪಾಲಿ ಶಂಕರ್, ಸಂಘದ ಅಧ್ಯಕ್ಷ ಆರ್.ಶಶಿಕುಮಾರ್, ಕಾರ್ಯದರ್ಶಿ ಗಿರಿಶೇಖರ್, ಖಜಾಂಚಿ ಆರ್.ಶ್ರೀನಿವಾಸ್, ಉಪಾಧ್ಯಕ್ಷ ಬುದ್ದಾಚಾರಿ, ನಾಗರಾಜ್, ತಿರುಮಲಚಾರಿ, ಅನಿಲ್‌ಕುಮಾರ್, ವೆಂಕಟರಾಮಾಚಾರಿ, ನವೀನ್, ಮಾರುತಿರಾಜ್, ಹರೀಶ್, ನರೇಶ್, ಎಸ್. ವೆಂಕಟೇಶ್, ರಾಘವೇಂದ್ರಾಚಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.