ಸಮ್ಮೇಳನದಿಂದ ದಲಿತ ಪ್ರಜ್ಞೆ ಜಾಗೃತವಾಯಿತೆ?

ಅಚ್ಚುಕಟ್ಟಾಗ ಕಾರ್ಯಕ್ರಮಕ್ಕೆ ಮೆಚ್ಚುಗೆ • ಜಿಲ್ಲೆಯ ಕವಿ ಕೋಟಿಗಾನಹಳ್ಳಿ ರಾಮಯ್ಯ, ಕೆಲ ದಲಿತ ಹೋರಾಟಗಾರರ ಮರೆತ್ತಿದ್ದಕ್ಕೆ ಬೇಸರ

Team Udayavani, Aug 20, 2019, 5:14 PM IST

kolar-tdy-1

ಕೋಲಾರದಲ್ಲಿ ಜರುಗಿದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ನೆರೆ ಪ್ರವಾಹದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸಲ್ಲಿಸಲಾಯಿತು.

ಕೋಲಾರ: ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಿಂದ ದಲಿತ ಪ್ರಜ್ಞೆ ಜಾಗೃತವಾಯಿತೆ ಎಂಬ ಪ್ರಶ್ನೆ ಉದ್ಭವವಾಗಿದ್ದು ಚರ್ಚೆಗಳು ಆರಂಭವಾಗಿವೆ.

ನೆರೆ, ಪ್ರವಾಹ, ಸಮ್ಮೇಳನ ನಡೆದ ಎರಡೂ ದಿನವೂ ತುಂತುರು ಮಳೆ ಕಾಟ, ಸ್ಥಳೀಯರನ್ನು ಕಡೆಗಣಿಸಲಾಗಿದೆಯೆಂಬ ಆರೋಪಗಳ ನಡುವೆಯೂ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತೆಂಬ ಭಾವನೆ ಸಮ್ಮೇಳನದಲ್ಲಿ ಪಾಲ್ಗೊಂಡವರಿಂದ ವ್ಯಕ್ತವಾಯಿತು.

ಕಸಾಪಕ್ಕೆ ಅಭಿನಂದನೆ: ಜಾತಿ ಜನಗಣತಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದಲಿತರು 105 ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಲ್ಲಿ, ಪದಾಧಿಕಾರಿ ಹುದ್ದೆ ಅಲಂಕರಿಸಿದವರು ತೀರಾ ಕಡಿಮೆ. ದಶಕಗಳ ಹಿಂದೆ ಸಾಹಿತ್ಯ ಸಮ್ಮೇಳನಗಳಲ್ಲಿ ದಲಿತರ ಪರ ಗೋಷ್ಠಿಯೊಂದನ್ನು ಇಡಲು ನಿರಾಕ ರಿಸಿದ ಕುಖ್ಯಾತಿಯನ್ನು ಕಸಾಪ ಹೊಂದಿತ್ತು. ಆದರೆ, ಮನುಬಳಿಗಾರ್‌ ನೇತೃತ್ವದ ಕಸಾಪ ಈ ಅಪವಾದವನ್ನು ಪ್ರಥಮ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ತೊಡೆದು ಹಾಕುವ ಪ್ರಯತ್ನ ಮಾಡಿದೆ. ಇದರಲ್ಲಿ ಯಶಸ್ವಿಯೂ ಆಗಿದೆ.

ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ್ದ ದಲಿತ ವಿದ್ವಾಂಸರು ಮನು ಬಳಿಗಾರ ಮತ್ತವರ ತಂಡದ ಪ್ರಯತ್ನವನ್ನು ಮೆಚ್ಚಿಕೊಂಡಿದ್ದು ಇದನ್ನು ಪುಷ್ಟೀಕರಿಸಿದಂತಿತ್ತು.

ಅಚ್ಚುಕಟ್ಟು ವ್ಯವಸ್ಥೆ: ಸಮ್ಮೇಳನಗಳನ್ನು ಆಯೋಜಿಸುವಲ್ಲಿ ಅಧಿಕಾರಿಯಾಗಿ, ಕಸಾಪ ಚುಕ್ಕಾಣಿ ಹಿಡಿದವರಾಗಿ ಭಾರೀ ಅನುಭವ ಹೊಂದಿರುವ ಮನು ಬಳಿಗಾರ್‌, ಕೋಲಾರದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿಯೇ ವ್ಯವಸ್ಥೆ ಮಾಡಿದ್ದರು. ತುಂತುರು ಮಳೆ ನಡುವೆಯೂ ಸಮ್ಮೇಳನದ ಗೋಷ್ಠಿಗಳನ್ನು ಯಶಸ್ವಿಗೊಳಿಸಿದ್ದು, ಗೋಷ್ಠಿಗಳಲ್ಲಿ ವಿಷಯ ಮಂಡನೆ ಮಾಡಿದವರೆಲ್ಲರೂ ಆಗಮಿಸಿದ್ದು, ಯಾವುದೇ ಲೋಪವಿಲ್ಲದಂತೆ ಎರಡೂ ದಿನವೂ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದರು.

ಆರೋಪ: ಸಾಕಷ್ಟು ಸ್ಥಳೀಯರಿಗೆ ಸಮ್ಮೇಳನದಲ್ಲಿ ಅವಕಾಶ ನೀಡಿಲ್ಲವೆಂಬ ಆಕ್ಷೇಪಗಳ ನಡುವೆಯೂ ಸ್ಥಳೀಯ ಕಲಾವಿದ ರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದು, ಸಾಮಾನ್ಯವಾಗಿ ದಲಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದ ಇತರೇ ವರ್ಗದವರನ್ನು ಸಮ್ಮೇಳನದಲ್ಲಿ ಸಭಿಕರಾಗಿ ಪಾಲ್ಗೊಳ್ಳುವಂತೆ ಮಾಡುವ ವಿಚಾರಗಳಲ್ಲಿ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆಯೆಂದೇ ಭಾವಿಸಬೇಕು.

ಕೆ.ರಾಮಯ್ಯರ ಗೈರು ಕೊರತೆ: ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಡೆಸಲು ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿದ ಕಸಾಪದ ನಿರ್ಧಾರಕ್ಕೆ ಯಾರದೂ ಆಕ್ಷೇಪವಿರಲಿಲ್ಲ. ಆದರೆ, ಕೋಲಾರ ಜಿಲ್ಲೆಯವರೇ ಆದ, ದಲಿತ ಕವಿ, ವಿಮರ್ಶಕ, ಹೋರಾಟಗಾರ, ಕನ್ನಡ ನಾಡಿನ ಸಮಸ್ತ ದಲಿತರ ಸಾಕ್ಷಿ ಪ್ರಜ್ಞೆಯಾಗಿರುವ ಕೋಟಿಗಾನಹಳ್ಳಿ ರಾಮಯ್ಯ ಪ್ರಥಮ ದಲಿತ ಸಮ್ಮೇಳನ ಅದರಲ್ಲೂ ಕೋಲಾರದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಪಾಲ್ಗೊಳ್ಳದೇ ಇದ್ದುದು ದೊಡ್ಡ ಕೊರತೆಯಾಗಿ ಕಾಡುತ್ತಲೇ ಇತ್ತು.

ಕೆಲವರನ್ನು ಕರೆತರಲಿಲ್ಲ: ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಕೋಟಿಗಾನಹಳ್ಳಿ ರಾಮಯ್ಯರಿಂದಲೇ ಮಾಡಿಸಿ ಜಾಣ್ಮೆ ತೋರಿದ್ದ ಕಸಾಪಕ್ಕೆ ಅವರನ್ನು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಸೋತಿತ್ತು. ದಲಿತ ಹೋರಾಟಕ್ಕಾಗಿಯೇ ಬದುಕು ಮೀಸಲಿಟ್ಟ ಅನೇಕ ದಲಿತೇತರ ಲಕ್ಷ್ಮೀಪತಿ ಕೋಲಾರ ಇತರರನ್ನು ಸಮ್ಮೇಳನ ಮರೆತು ಬಿಟ್ಟಿತು. ಈ ಲೋಪ ಸಮ್ಮೇಳನದ ಪರಿಪೂರ್ಣತೆಗೆ ಚ್ಯುತಿ ತಂದಂತಿತ್ತು.

ಸ್ಥಳೀಯ ವಿಚಾರಗಳ ಕುರಿತು ಜಾಣ ಮರೆವು: ಸಮ್ಮೇಳನದ ಆರಂಭದಲ್ಲಿಯೇ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕಂಬಾಲಪಲ್ಲಿಯ ಘೋರ ದುರಂತದ ವಿಷಯದ ಆಧಾರದ ಮೇಲೆ ಸಮ್ಮೇಳನ ನಡೆಯಬೇಕಿತ್ತು ಎಂದು ಕೋಟಿಗಾನಹಳ್ಳಿ ರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಕಂಬಾಲಪಲ್ಲಿ, ನಾಗಲಾಪಲ್ಲಿ ಹಾಗೂ ದಲಿತ ಚಳವಳಿ ನಾಡಿನಾದ್ಯಂತ ಹರಡಲು ಕಾರಣವಾಗಿದ್ದ ಜಿಲ್ಲೆಯ ಯಾವುದೊಂದು ಹೋರಾಟವನ್ನು ಸಮ್ಮೇಳನದಲ್ಲಿ ಸ್ಮರಿಸಿಕೊಳ್ಳಲೇ ಇಲ್ಲ.

ದಲಿತ ಸಾಹಿತ್ಯಕ್ಕೆ ದಲಿತ ಹೋರಾಟವೇ ಕಾರಣ ಎಂಬ ಮಾತು ಸಮ್ಮೇಳನದ ಗೋಷ್ಠಿಗಳಲ್ಲಿ ಸಾಕಷ್ಟು ಬಾರಿ ಕೇಳಿ ಬಂದಿತು. ಆದರೆ, ಅದೇ ಹೋರಾಟಗಳು ಮತ್ತು ಅದರಲ್ಲೂ ಜಿಲ್ಲೆಯ ಹೋರಾಟಗಾರರನ್ನು ಪರಿಗಣಿಸದೆ, ಸಮ್ಮೇಳನದ ಗೋಷ್ಠಿಗಳು ಕೇವಲ ವಿದ್ವತ್‌ ಪೂರ್ಣವಾಗಿ ಮಾತ್ರವೇ ನಡೆದಿದ್ದು, ದಲಿತ ಸಮಾಜದ ಮೇಲೆ ಬೆಳಕು ಚೆಲ್ಲುವಂತಾಗಲಿಲ್ಲ ಎಂಬ ಆರೋಪಕ್ಕೆ ತುತ್ತಾಗುವಂತಾಯಿತು. ಕೋಲಾರ ಜಿಲ್ಲೆಯ ಸ್ಥಳೀಯ ಹೋರಾಟಗಾರರು, ಕಲಾವಿದರು ಹಾಗೂ ಸ್ಥಳೀಯ ವಿಚಾರಗಳನ್ನು ಮರೆ ಮಾಚಿ ಸಮ್ಮೇಳನ ನಡೆದಿರುವ ಕುರಿತು ಭಾರೀ ಆಕ್ರೋಶವಿದ್ದರೂ, ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಅದಕ್ಕೆ ಅಡ್ಡಿ ಮಾಡಬಾರದೆಂಬ ಕಾರಣಕ್ಕೆ ಅನೇಕರು ಸಮ್ಮೇಳನದತ್ತಲೂ ತಲೆ ಹಾಕದೆ ಇದ್ದು ಬಿಟ್ಟಿದ್ದು ಸಮ್ಮೇಳನದ ಲೋಪವೇ.

ದಲಿತ ಪ್ರಜ್ಞೆ ಜಾಗೃತ ಗೊಂಡಿತೇ?:

ಮೊದಲ ದಲಿತ ಸಮ್ಮೇಳನವು ಪೂರ್ಣವಾಗಿ ಅಲ್ಲದಿದ್ದರೂ, ಹಿಂದಿನ ಕೆಲವು ಘಟನಾವಳಿಗಳನ್ನು ಪುನರ್‌ ಮನನ ಮಾಡಿಸಲು ಸಫ‌ಲವಾಯಿತು. ಆದರೆ, ದಲಿತರ ಬದುಕು, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಹಾಡು ಪಾಡು ವಿಷಯದಲ್ಲಿ ಆನೆಯನ್ನು ಮುಟ್ಟಿ ನೋಡಿ ಅನುಭವಿಸಿದ ಕುರುಡನಂತಷ್ಟೇ ಇರುವಂತಾಯಿತು. ದಲಿತರು ಎದುರಿಸುತ್ತಿರುವ ಜಾತೀಯತೆ ಬಿಸಿ, ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯ, ನಿರುದ್ಯೋಗ ಸಮಸ್ಯೆ, ಆರ್ಥಿಕ ಚೈತನ್ಯ, ರಾಜಕೀಯ ಸ್ಥಾನಮಾನಗಳಿಸುವ ವಿಚಾರಗಳಲ್ಲಿ ಸ್ಪಷ್ಟವಾದ ದಿಕ್ಸೂಚಿಯಾಗಲಿಲ್ಲ ಎಂಬ ಮಾತುಗಳು ಸಮ್ಮೇಳನದ ನಂತರದ ವಿಮರ್ಶೆಯಲ್ಲಿ ಕೇಳಿ ಬರುವಂತಾಗಿದೆ. ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ದಲಿತರಲ್ಲಿ ಕಿಂಚಿತ್ತಾದರೂ, ಜಾಗೃತಿ ಮೂಡಿಸಿ, ಮಸುಕಾಗುತ್ತಿರುವ ದಲಿತ ನೆಲ ಸಂಸ್ಕೃತಿಗಳನ್ನು ಹುಡುಕಾಟದ ವಿಚಾರದಲ್ಲಿ, ದಲಿತ ಪ್ರಜ್ಞೆಯನ್ನು ಉದ್ದೀಪನಗೊಳಿಸುವ ವಿಷಯದಲ್ಲಿ ಪ್ರೇರಣೆಯಾಯಿತೇ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಮ್ಮೇಳನದಿಂದ ಸಿಗಲೇ ಇಲ್ಲ.
● ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.