ಕೋಚಿಮುಲ್ನ ಕೆಎಂಎಫ್ ಪ್ರತಿನಿಧಿ ಯಾರಾಗ್ತಾರೆ?
ಜೆಡಿಎಸ್,ಕಾಂಗ್ರೆಸ್,ಕೋಲಾರ-ಚಿಕ್ಕಬಳ್ಳಾಪುರ ನಡುವೆ ಕಿತ್ತಾಟ • ಇಂದಿನ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ
Team Udayavani, Jun 12, 2019, 12:39 PM IST
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಬುಧವಾರ ಆಡಳಿತ ಮಂಡಳಿ ಸಭೆಯಲ್ಲಿ ಕೆ.ಎಂ.ಎಫ್ ಪ್ರತಿನಿಧಿ ಆಯ್ಕೆ ನಿರ್ಧಾರವಾಗಲಿದೆ.
ಕೋಲಾರ: ಪ್ರತಿಷ್ಠಿತ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಕೆಎಂಎಫ್ ಪ್ರತಿನಿಧಿಯಾಗಿ ಆಯ್ಕೆಯಾಗುವವರು ಯಾರು? ಈ ಪ್ರಶ್ನೆ ಈಗ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಲ್ಲಿ ಪೈಪೋಟಿಗೆ ಕಾರಣವಾಗಿದೆ.
ಮೇ 13 ರಂದು ನಡೆದ ಚುನಾವಣೆಯಲ್ಲಿ ಒಟ್ಟು 13 ಸ್ಥಾನಗಳ ಪೈಕಿ 10 ಸ್ಥಾನ ಕಾಂಗ್ರೆಸ್‌ಗೆ, 2 ಸ್ಥಾನ ಜೆಡಿಎಸ್‌ಗೆ ಮತ್ತು ಒಂದು ಸ್ಥಾನ ಚಿಂತಾಮಣಿ ಸುಧಾಕರರೆಡ್ಡಿ ಬಣಕ್ಕೆ ದಕ್ಕಿತ್ತು. ಮೇ 25 ರಂದು ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮೈತ್ರಿ ಸರ್ಕಾರದ ಸರ್ವಸಮ್ಮತ ಅಭ್ಯರ್ಥಿಯಾಗಿ ಕೋಚಿಮುಲ್ ಅಧ್ಯಕ್ಷರಾಗಿ ಪುನರಾಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಕೋಚಿಮುಲ್ನಿಂದ ಕೆಎಂಎಫ್ ಪ್ರತಿನಿಧಿಯಾಗಿ ಯಾರು ಆಯ್ಕೆಯಾಗುತ್ತಾರೆಂಬ ಬಗ್ಗೆ ಕುತೂಹಲ ಉಂಟಾಗಿದ್ದು, ಜೂ.12 ರಂದು ಕೋಚಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಕೆಎಂಎಫ್ ಪ್ರತಿನಿಧಿಯ ಆಯ್ಕೆಯಾಗಬೇಕಾಗಿದೆ.
ಚಿಕ್ಕಬಳ್ಳಾಪುರಕ್ಕೆ ಅವಕಾಶ: ಕೋಚಿಮುಲ್ ಕಾರ್ಯ ವ್ಯಾಪ್ತಿಯು ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಗೆ ಒಳಪಟ್ಟಿದೆ. ಅಲಿಖೀತ ಒಪ್ಪಂದದ ಪ್ರಕಾರ ಒಮ್ಮೆ ಕೋಲಾರ ಜಿಲ್ಲೆಯ ಭಾಗದವರಿಗೆ ಅಧ್ಯಕ್ಷ ಸ್ಥಾನದ ಅವಕಾಶ ದೊರೆತರೆ ಮತ್ತೂಂದು ಬಾರಿ ಚಿಕ್ಕಬಳ್ಳಾಪುರ ಭಾಗದವರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತಿತ್ತು.
ಆದರೆ, ಹಿಂದಿನ ಅವಧಿಗೆ ಕೋಚಿಮುಲ್ ಅಧ್ಯಕ್ಷರಾಗಿದ್ದ ಮಾಲೂರು ಶಾಸಕ ಕೆ.ವೈ.ನಂಜೇಗೌಡರು, ಈ ಅವಧಿಗೂ ಪೈಪೋಟಿಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದುದಲ್ಲದೆ, ತಮ್ಮ ಶಾಸಕ ಸ್ಥಾನದ ಆಧಾರದ ಮೇಲೆ ಮೈತ್ರಿ ಸರ್ಕಾರದ ಬೆಂಬಲದೊಂದಿಗೆ ಕೋಚಿಮುಲ್ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಇದರಿಂದ ಕೆಎಂಎಫ್ ಪ್ರತಿನಿಧಿಯಾಗುವ ಅವಕಾಶ ಸದ್ಯಕ್ಕೆ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರಿಗೆ ದಕ್ಕಬೇಕೆಂಬ ಕೂಗೆದ್ದಿದೆ. ಆದರೆ, ಕೋಲಾರ ಜಿಲ್ಲೆಯ ನಿರ್ದೇಶಕರು ಮೈತ್ರಿ ಸರಕಾರದಲ್ಲಿ ತಮಗೂ ಹಕ್ಕುಂಟು ಎಂಬಂತೆ ಕೆ.ಎಂ.ಎಫ್ ಪ್ರತಿನಿಧಿಯಾಗಲು ಪ್ರಯತ್ನಿಸುತ್ತಿದ್ದಾರೆ.
ಯಾರ ನಡುವೆ ಪೈಪೋಟಿ: ಕೆ.ಎಂ.ಎಫ್ ಪ್ರತಿನಿಧಿಯಾಗಲು ಕೋಲಾರ ಜಿಲ್ಲೆಯಲ್ಲಿ ಕಾಡೇನಹಳ್ಳಿ ನಾಗರಾಜ್ ಮತ್ತು ಶ್ರೀನಿವಾಸಪುರದ ಹನುಮೇಶ್ ಇತರರು ಕಾತುರರಾಗಿದ್ದಾರೆ. ಇದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಳ್ಳಕದಿರೇನಹಳ್ಳಿ ಎಂ.ಸಿ.ವೆಂಕಟೇಶ್, ಚಿಂತಾಮಣಿ ಊಲವಾಡಿಯ ವೈ.ಬಿ.ಅಶ್ವತ್ಥನಾರಾಯಣ, ಗೌರಿಬಿದನೂರು ತೊಂಡೇಬಾವಿಯ ಜೆ.ಕಾಂತ್‌ರಾಜ್ ಮತ್ತು ಬಾಗೇಪಲ್ಲಿ ಪುಟ್ಟಪರ್ತಿಯ ವಿ.ಮಂಜನಾಥರೆಡ್ಡಿಯ ನಡುವೆ ಕೆ.ಎಂ.ಎಫ್ ಪ್ರತಿನಿಧಿಯಾಗಲು ಪೈಪೋಟಿ ನಡೆದಿದೆ.
ಪಕ್ಷವಾರು ಪೈಪೋಟಿ: ಕೆಎಂಎಫ್ ಅಧ್ಯಕ್ಷರಾಗಲು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪ್ರಯತ್ನಿಸುತ್ತಿರುವುದರಿಂದ ಚಿಕ್ಕಬಳ್ಳಾಪುರ ಅಥವಾ ಕೋಲಾರ ಜಿಲ್ಲೆಯಿಂದ ಆಯ್ಕೆಯಾಗಿರುವ ಜೆಡಿಎಸ್ ಬೆಂಬಲಿತ ನಿರ್ದೇಶಕ ನಳ್ಳಕದಿರೇನಹಳ್ಳಿಯ ಎಂ.ಸಿ.ವೆಂಕಟೇಶ್ ಅಥವಾ ಮುಳಬಾಗಿಲು ತಾಲೂಕಿನ ಕಾಡೇನಹಳ್ಳಿ ನಾಗರಾಜ್‌ರನ್ನು ಆಯ್ಕೆ ಮಾಡಿ ಕಳುಹಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೌಖೀಕವಾಗಿ ಸೂಚನೆ ನೀಡಿದ್ದಾರೆನ್ನಲಾಗಿದೆ.
ಆದರೆ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್ ನಿರ್ದೇಶಕರು ಆಯ್ಕೆಯಾಗಿರುವುದರಿಂದ ಕಾಂಗ್ರೆಸ್ ಪಕ್ಷದಿಂದಲೇ ಕೆ.ಎಂ.ಎಫ್ ಪ್ರತಿನಿಧಿ ಆಯ್ಕೆ ಮಾಡುತ್ತೇವೆ. ಅವರಿಂದಲೇ ಮೈತ್ರಿ ಸರಕಾರದ ಅಭ್ಯರ್ಥಿಗೆ ಮತವನ್ನು ಹಾಕಿಸುತ್ತೇವೆ ಎಂದು ಕೋಲಾರ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕರು ವಾದ ಮಂಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ವ ಸಮ್ಮತ ಅಭ್ಯರ್ಥಿಯಾದರೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಕೆಎಂಎಫ್ ಪ್ರತಿನಿಧಿಯಾಗುವುದು ಖಚಿತವಾಗಿದೆ. ಆದರೆ, ಇದಕ್ಕೆ ಕಾಂಗ್ರೆಸ್ ಪಕ್ಷದೊಳಗಿನ ಗುಂಪುಗಳು ಒಗ್ಗೂಡಬೇಕಾಗಿದೆ.
ಪಕ್ಷೇತರರ ಪ್ರಯತ್ನ: ಪಕ್ಷೇತರರಾಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಬಣದೊಂದಿಗೆ ಗುರುತಿಸಿಕೊಂಡು ಕೆ.ಎಚ್.ಮುನಿಯಪ್ಪರ ಸೋಲಿಗೆ ಪ್ರಮುಖ ಕಾರಣಕರ್ತರಾದ ಚಿಂತಾಮಣಿಯ ಸುಧಾಕರರೆಡ್ಡಿ, ಈ ಬಾರಿ ಕೆಎಂಎಫ್ ಪ್ರತಿನಿಧಿಯಾಗುವ ಅವಕಾಶ ಚಿಂತಾಮಣಿಯ ತಮ್ಮ ಬೆಂಬಲಿಗ ವೈ.ಬಿ.ಅಶ್ವತ್ಥನಾರಾಯಣ ಅವರಿಗೆ ಸಿಗಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನಕ್ಕೆ ಜೋಡಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹೇಗೆ ಸ್ಪಂದಿಸುತ್ತಾರೋ ಕಾದು ನೋಡಬೇಕಾಗಿದೆ.
‘ಕೈ’ ಗೇ ಪ್ರತಿನಿಧಿ ಸ್ಥಾನ ಸಿಗಲು ಸಿದ್ದು ಫರ್ಮಾನು:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.