ಕೋವಿಡ್ ಮುಕ್ತ ಕೋಲಾರಕ್ಕೆ ಸಹಕರಿಸಿ
Team Udayavani, Aug 28, 2020, 4:34 PM IST
ಕೋಲಾರ: ಕೋವಿಡ್ ಮುಕ್ತ ಕೋಲಾರಕ್ಕೆ ಸಮಾಜದಪ್ರತಿಯೊಬ್ಬರೂ ಸಹಕಾರ ನೀಡ ಬೇಕು ಮತ್ತು ಜಾಗ್ರತೆಯಿಂದ ಕೋವಿಡ್‌ನೊಂದಿಗೆ ಜೀವನ ನಿರ್ವ ಹಣೆ ಕಲಿಯ ಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.
ನಗರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಅಂಜುಮಾನ್ ಸಂಸ್ಥೆ ಆಯೋಜಿಸಿದ್ದ ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ವಾರಿಯರ್ ಅಭಿನಂದಿಸಿ ಮಾತನಾಡಿ, ಕೋವಿಡ್ ಮೊದಲಿ ನಷ್ಟು ಗಂಭೀರವಾಗಿ ರದೇ ಹಂತ, ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿರುವುದು ಸಮಾಧಾನಕಾರ ಸಂಗತಿ ಯಾಗಿದೆ ಎಂದು ಹೇಳಿದರು.ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಸಮರ್ಪಕವಾದ ಅರಿವು ಮೂಡಿಸಿದಲ್ಲಿ ಜಿಲ್ಲೆ ಯನ್ನು ಕೋವಿಡ್ ದಿಂದ ಮುಕ್ತಗೊಳಿಸಲು ಸಾಧ್ಯ ಎಂದ ಅವರು, ಕಳೆದ 48 ದಿನಗಳು ಲಾಕ್‌ಡೌನ್ ಸಂದರ್ಭದಲ್ಲಿ ಕೋಲಾರ ಹಸಿರು ವಲಯಕ್ಕೆ ಸೇರ್ಪಡೆ ಯಾಗಿದ್ದೆ ಇದಕ್ಕೆ ಉತ್ತಮ ನಿದರ್ಶನ ಎಂದು ತಿಳಿಸಿದರು.
ಜಾಗೃತಿ ಕಾರ್ಯಕ್ರಮ: ನಗರದ ಯಾವ ಭಾಗದಲ್ಲಿ ಹೆಚ್ಚು ಸೋಂಕು ಇದೆ, ಯಾವ ಭಾಗ ಕಂಟೇನ್‌ಮೆಂಟ್ ಜೋನ್ ಅಗಿದೆ. ನಿಯಂತ್ರಿಸಲು ಕೈಗೊಳ್ಳ ಬೇಕಾದ ಕ್ರಮ ಗಳೇನು ಎಂಬುವುದರ ಬಗ್ಗೆ ಚರ್ಚಿಸಿ ಈ ಪ್ರದೇಶದಲ್ಲಿ ಸಾರ್ವ ಜನಿಕ ರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಗಾಳಿ ಸುದ್ದಿಗಳನ್ನು ಯಾರೂ ನಂಬಬೇಡಿ, ಕ್ವಾರಂಟೆ„ನ್ ಚಿಕಿತ್ಸಾ ಅವಧಿ 7 ದಿನಕ್ಕೆ ಇಳಿ ದಿದೆ. ಯಾವುದೇ ಖಾಸಗಿ ಆಸ್ಪತ್ರೆ ಗಳಿಗಿಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒಳ ಗೊಂಡಿದ್ದು, ಹಾಸಿಗೆಗಳ ಕೊರತೆಯ ಪ್ರಶ್ನೆಯೇ ಇಲ್ಲವೆಂದು ಸ್ವಷ್ಟ ಪಡೆಸಿದರು.
ಸಿಬ್ಬಂದಿಗಳಿಂದಲೇ ಸಂಸ್ಕಾರ: ಕೋವಿಡ್ ಸೊಂಕಿನಿಂದ ಮೃತಪಟ್ಟವರ ಶವಗಳನ್ನು ನಿಯಮಗಳನ್ನು ಪಾಲಿಸಿದಲ್ಲಿ ಕುಟುಂಬ ದವರಿಗೆ ಈ ಮೊದಲು ಹಸ್ತಂತರಿಸಲಾಗು ತ್ತಿತ್ತು. ಅದರೆ, ಬಂಗಾರಪೇಟೆ ಪ್ರಕರಣವೊಂದರಲ್ಲಿ ಶವಸಂಸ್ಕಾರಕ್ಕೆ ಹೋದ 22 ಮಂದಿಗೂ ಸೋಂಕು ಅಂಟಿದ್ದರಿಂದ ಶವ ವನ್ನು ಇಲಾಖೆಯ ಸಿಬ್ಬಂದಿಗಳೇ ಕಿಟ್ ಬಳಿಸಿ 12 ಅಡಿ ಭೂಮಿ ಅಳದಲ್ಲಿ ಸಂಸ್ಕಾರ ಮಾಡುತ್ತಿದ್ದಾರೆ ಎಂದರು. ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮೊಯಿದ್ದೀನ್ ಅಜೀಮ್, ಕೋವಿಡ್ ಬಹಳಷ್ಟು ಮಂದಿಗೆ ಇದ್ದರೂ ಅವರಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಸೊಂಕು ಗೋಚರಿಸುತ್ತಿಲ್ಲ ಎಂದರು.
ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಎಸ್. ಜಿ. ನಾರಾಯಣ ಸ್ವಾಮಿ ಮಾತನಾಡಿ, ಕೊರೊನಾ ದಿಂದ ಶೇ 97 ಮಂದಿ ಗುಣ ಮುಖರಾಗಿದ್ದಾರೆ. ನೋಡಲ್ ಅಧಿಕಾರಿ ಉಮಾ ಮಹಾ ದೇವನ್ ಅವರು ಇನ್ಫೋಸಿಸ್ ನಿಂದ 5 ಕೋಟಿ ರೂ. ನೆರವು ದೊರಕಿಸಿದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ 40 ವೆಂಟಿ ಲೇಟರ್, ಅಕ್ಸಿಜನ್ ಇತರೆ ಪರಿಕರಗಳ ಸೌಲಭ್ಯ ಗ ಳನ್ನು ಹೊಂದಲು ಸಾಧ್ಯವಾಯಿತು ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ತಾಲೂಕು ಆರೋಗ್ಯಾಧಿಕಾರಿ ಡಾ.ರಮ್ಯದೀಪಿಕಾ, ಜಿಲ್ಲಾ ಸಾಂಕ್ರಾಮಿಕ ರೋಗ ಗಳ ನಿಯಂತ್ರಣಾಧಿಕಾರಿ ಡಾ. ಚಾರಣಿ, ನಗರಸಭೆ ಸದಸ್ಯೆ ನಾಜೀಯಾ ಬೇಗಂ, ಅಂಜುಮಾನ್ ಸಂಸ್ಥೆಯ ಇಮ್ರಾನ್ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.