![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 22, 2021, 2:15 PM IST
ಕೋಲಾರ: ಕಾಡು ಇಲ್ಲವೆಂಬ ಕೊರಗು ಕಾಡದಿರಲಿ ಮುಂದಿನ ಭವಿಷ್ಯದಲ್ಲಿ ಎಂಬಉದ್ದೇಶದಿಂದ ರೈತ ಸಂಘದ ವತಿಯಿಂದ ಗಾಜಲದಿನ್ನೆ ಅರಣ್ಯ ಪ್ರದೇಶದಲ್ಲಿ ಗಿಡನೆಡುವ ಮೂಲಕ ವಿಶ್ವ ಅರಣ್ಯ ದಿನವನ್ನುಆಚರಿಸಲಾಯಿತು.
ಲಕ್ಷಾಂತರ ಔಷಧಿ ಸಸ್ಯ ನಾಶ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ರೋಗವಿಲ್ಲದ ಮಾನವನಿಲ್ಲ. ಔಷಧ ಗುಣವಿಲ್ಲದ ಸಸ್ಯವಿಲ್ಲ ಎಂಬಗಾದೆಯ ಮಾತು ಕಾಡಿನ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಆದರೆ, ಇದರಮಹತ್ವವನ್ನು ಅರಿಯದೆ ಈಗಾಗಲೇಲಕ್ಷಾಂತರ ಔಷಧೀಯ ಮಹತ್ವವುಳ್ಳಸಸ್ಯಗಳನ್ನು ಕಳೆದುಕೊಂಡಿದ್ದೇವೆ. ವಿಶ್ವವನ್ನೇಬೆಚ್ಚಿ ಬೀಳಿಸುವ ಹವಾಮಾನ ವೈಪರೀತ್ಯ ಗಳಿಂದ ಅತಿವೃಷ್ಠಿ, ಅನಾವೃಷ್ಠಿಗಳಂತಹ ಜ್ವಲಂತ ಸಮಸ್ಯೆಗಳು ಕೃಷಿ ಕ್ಷೇತ್ರವನ್ನು ನಾಶಮಾಡಿ, ಆಹಾರ ಕೊರತೆಯಂತಹತೀವ್ರವಾದ ಸಂಕಷ್ಟದ ಜೊತೆಗೆ ಕಣ್ಣಿಗೆಕಾಣದ ವೈರಸ್ ಹಾವಳಿ ಹೆಚ್ಚಾಗುವಜೊತೆಗೆ ಮುಂದೊಂದು ದಿನ ತುತ್ತುಅನ್ನಕ್ಕೂ ಮುಷ್ಠಿ ಚಿನ್ನ ಕೊಡುವಂತಹಪರಿಸ್ಥಿತಿ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ: ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌ಮಾತನಾಡಿ, ಕಾಡುಗಳು ಭೂಮಿಯ ಶ್ವಾಸಕೋಶವಿದ್ದಂತೆ. ವಾತಾವರಣದ ಕಾರ್ಬನ್ ಡೈಯಾಕ್ಸೈಡ್ ಹಾಗೂ ಆಮ್ಲಜನಕದ ಸಮತೋಲನ ಕಾಪಾಡುವ ಜೊತೆಗೆಆರೋಗ್ಯಯುತ ಪರಿಸರವಿದ್ದಂತೆ. ಆದರೆ,ಇತ್ತೀಚೆಗೆ ಮನುಷ್ಯನ ದುರಾಸೆ, ಅಭಿವೃದ್ಧಿ ಹೆಸರಿನಲ್ಲಿ ನಗರೀಕರಣ, ಕೈಗಾರೀಕರಣ, ಗಣಿಗಾರಿಕೆಯಂತಹ ಚಟುವಟಿಕೆಗಳಿಂದ ಅರಣ್ಯ ನಾಶವಾಗಲಿದೆ ಎಂದರು.
ಭವಿಷ್ಯಕ್ಕಾಗಿ ಅರಣ್ಯ ಉಳಿಸಿ: ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಜೊತೆಗೆಮರುಭೂಮೀಕರಣ, ವನ್ಯ ಮೃಗಗಳ ಅವಸನಗಳ ಕ್ಷೀಣತೆ, ಹವಾಗುಣ ನಿರ್ಮಾಣ, ಅರಣ್ಯ ನಾಶದಿಂದ ಹೆಚ್ಚಾಗುತ್ತಿದೆ. ಇನ್ನು ಮುಂದಾದರೂ ಭವಿಷ್ಯದ ದೃಷ್ಠಿಯಿಂದ ಅರಣ್ಯ ಉಳಿವಿಗೆ ಮುಂದಾಗುವ ಜೊತೆಗೆ ಅರಣ್ಯ ನಾಶ ತಡೆಗೆ ಪ್ರಭಲವಾದ ಕಾನೂನುಜಾರಿಗೆ ತರುವ ಮುಖಾಂತರ ವಿಶ್ವ ಅರಣ್ಯದಿನಾಚರಣೆಯ ದಿನವನ್ನು ಅರ್ಥಪೂರ್ಣ ವಾಗಿ ಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಾಂದ್‌ಪಾಷ, ನವಾಜ್ ಪಾಷ, ಮಂಜುನಾಥ್ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.