ಮಾಸಾಂತ್ಯದಲ್ಲಿ ಪಟ್ಟಣಗಳಿಗೆ ಡ್ಯಾಂ ನೀರು
Team Udayavani, May 13, 2023, 5:04 PM IST
ಬಂಗಾರಪೇಟೆ: ಕುಡಿಯುವ ನೀರಿನ ಯೋಜನೆ ಆಗಿರುವ ಯರಗೋಳ್ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡು ತುಂಬಿ ಹರಿದು 8 ತಿಂಗಳ ನಂತರ ಇದೇ ಮೊಟ್ಟ ಮೊದಲ ಬಾರಿಗೆ ಗುರುವಾರ ರಾತ್ರಿ ಬಂಗಾರಪೇಟೆಗೆ ನೀರು ಬಂದಿದೆ.
ತಾಲೂಕಿನಲ್ಲಿ 2022 ಆಗಷ್ಟನಲ್ಲಿ ಯರಗೋಳ್ ಅಣೆಕಟ್ಟು ತುಂಬಿದ್ದು, ತಾಲೂಕಿನ ಗಡಿಭಾಗದಲ್ಲಿರುವ ಯರಗೋಳ್ ಅಣೆಕಟ್ಟು 300 ಎಕರೆ ಭೂ ಪ್ರದೇಶದಷ್ಟು ವಿಶಾಲವಾಗಿದೆ. ಅಣೆಕಟ್ಟು ನಿರ್ಮಾಣಗೊಂಡ 2 ವರ್ಷಗಳ ನಂತರ ತುಂಬಿ ಹರಿದಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುನರತ್ನ ನೇತೃತ್ವದಲ್ಲಿ ಅಣೆಕಟ್ಟು ಉದ್ಘಾಟನೆ ಮಾಡಿದ್ದರೂ, ಸಹ ನೀರು ಸರಬರಾಜು ಮಾಡಲು ಯಂತ್ರ ಅಳವಡಿಕೆ ಮಾಡದ ಕಾರಣ, ಅಣೆಕಟ್ಟಿನಲ್ಲಿಯೇ ನೀರು ಸಂಗ್ರಹವಾಗಿತ್ತು.
ಆನಂದ ಗಿರಿ ಬಳಿ ಪಂಪ್‌ಹೌಸ್ : ಜಿಲ್ಲಾಡಳಿತವು ಕಳೆದ 8 ತಿಂಗಳ ಹಿಂದೆ ಲೋಕಾರ್ಪಣೆ ಮಾಡಿದ್ದರೂ, ನೀರು ಪೂರೈಕೆ ಮಾಡಲು ಯಂತ್ರಗಳ ಕೊರತೆಯಿಂದ ಸಾಧ್ಯವಾಗಲಿಲ್ಲ. ಸರ್ಕಾರವು ಸುಮಾರು 8 ಕೋಟಿಗೆ ಟೆಂಡರ್ ಕರೆದು ಅಣೆಕಟ್ಟಿನಿಂದ ಬಂಗಾರಪೇಟೆ ಸರ ಬರಾಜು ಮಾಡಿದ ನಂತರ ಇಲ್ಲಿಂದ ಕೋಲಾರ ಹಾಗೂ ಮಾಲೂರು ನಗರಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ರೂಪಿಸಿದೆ. ತಾಲೂಕಿನ ಬೂದಿ ಕೋಟೆ ಮುಖ್ಯರಸ್ತೆಯ ಆನಂದಗಿರಿ ಬಳಿ ನಿರ್ಮಾಣ ಮಾಡಿರುವ ಬೃಹತ್ ಗಾತ್ರದ ನೀರು ಸಂಗ್ರಹಣೆಯ ಪಂಪ್‌ಹೌಸ್‌ನಲ್ಲಿ ನೀರನ್ನು ಪಂಪ್ ಮಾಡಲು ಯಂತ್ರಗಳನ್ನು ಅಳವಡಿಸಿ ಯಶಸ್ವಿಯಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೋಲಾರ ವಿಭಾಗದ ಅಧಿಕಾರಿಗಳು ನೀರು ಸರಬರಾಜು ಮಾಡಲು ಎಲ್ಲಾ ಯಂತ್ರೋಪಕರಣಗಳನ್ನು ಯಶಸ್ವಿಯಾಗಿ ಅಳವಡಿಸಿದೆ. ಮೇ 11 ರಂದು ರಾತ್ರಿ ಯರಗೋಳ್ ಅಣೆಕಟ್ಟಿನಿಂದ ಪಂಪ್ ಮಾಡಿದ್ದರಿಂದ ಬಂಗಾರಪೇಟೆಯ ಆನಂದಗಿರಿ ಪಂಪ್‌ಹೌಸ್‌ಗೆ ನೀರು ಬಂದಿದೆ. ಇದನ್ನು ವೀಕ್ಷಿಸಿದ ಪುರಸಭೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
45 ಗ್ರಾಮಗಳಿಗೆ ಕುಡಿಯುವ ನೀರು: ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು ಪಟ್ಟಣಗಳಿಗೆ ಹಾದು ಹೋಗುವ ಮಾರ್ಗ ಮಧ್ಯೆ ಬರುವ 45 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆ ಯೋಜನೆ ಯರಗೋಳ್ ಅಣೆಕಟ್ಟು ಆಗಿದೆ. ಯೋಜನೆ 2006ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು ಕಾಮಗಾರಿಯ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೋಲಾರ ವಿಭಾಗ ಹೊಂದಿದೆ. ಕಾಮಗಾರಿಯ ಗುತ್ತಿಗೆಯನ್ನು ಆಂಧ್ರ ಪ್ರದೇಶ ಮೂಲದ ರಾಮ್‌ಕೀ ಕಂಪನಿಯು ಪಡೆ ದಿದ್ದು, 24 ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿ ಬರೋಬ್ಬರಿ 13 ವರ್ಷಗಳು ತೆಗೆದುಕೊಂಡಿದೆ.
ಜಿಲ್ಲೆಗೆ ವರದಾನ: ಯರಗೋಳ್ ಅಣೆಕಟ್ಟು ಸಾರ್ವಜನಿಕರ ಉಪಯೋಗಕ್ಕೆ ಬರಲು ಮುಖ್ಯವಾಗಿ ಸಮರ್ಪಕ ಮಳೆಯಾದಲ್ಲಿ ನೀರು ಶೇಖರಣೆಯಾಗಲು, ಇದೊಂದು ಮಹತ್ವದ ಅಣೆಕಟ್ಟು ಆಗಲಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಿಂದ ಕೂಡಿದ ಯೋಜನೆಗೆ ಹೊರಗಿನಿಂದ ಯಾವುದಾದರೊಂದು ನೀರಾವರಿ ಯೋಜನೆಯ ಮೂಲಕ ನೀರು ಬಂದಿದ್ದೇ ಆದಲ್ಲಿ, ನೀರು ಶೇಖರಣೆಗೆ ಇದು ಉತ್ತಮ ಅಣೆಕಟ್ಟು ಆಗಿ ಕೋಲಾರ ಜಿಲ್ಲೆಗೆ ವರದಾನವಾಗಲಿದೆ.
ಯರಗೋಳ್ ಜಲಾಶಯವು ಒಟ್ಟು 500 ಎಂಸಿಎಫ್ಟಿ ಸಾಮಾರ್ಥ್ಯ ಹೊಂದಿದ್ದು, ಸರಾಸರಿ 136.50 ಮೀಟರ್ ಆಳವಾದ ಪ್ರದೇಶಹೊಂದಿದೆ. ಒಟ್ಟು 482.73 ಕ್ಯೂಮೆಕ್ ಪ್ರದೇಶ ಹೊಂದಿದ್ದು, ಸುಮಾರು 8 ಕೋಟಿಗಳ ವೆಚ್ಚದಲ್ಲಿ ಯರಗೋಳ್ ಅಣೆಕಟ್ಟಿನಿಂದ 24.5 ಕಿ.ಮೀ ದೂರದಿಂದ ಬಂಗಾರಪೇಟೆಗೆ ಹಾಗೂ ಮಾಲೂರು ಮತ್ತು ಕೋಲಾರ ನಗರಗಳಿಗೆ ನೀರು ಸರಬರಾಜು ಮಾಡಲು ನೂತನವಾಗಿ ಯಂತ್ರೋಪ ಕರಣ ಅಳವಡಿಸಿ ಪ್ರಯೋಗ ನಡೆಸಲಾಗಿದ್ದು, ಯಶಸ್ವಿಯಾಗಿ ರುವುದರಿಂದ ಮೇ ತಿಂಗಳ ಅಂತ್ಯದ ವೇಳೆಗೆ ನಿಯಾಮಾನುಸಾರವಾಗಿ ಮೂರು ನಗರಗಳಿಗೆ ನೀರು ಪೂರೈಕೆಯಾಗಲು ಕ್ರಮಕೈಗೊಳ್ಳಲಾಗುವುದು. -ಬಿ.ಸಿ.ರವೀಂದ್ರ, ಕಾರ್ಯಪಾಲಕ ಅಭಿಯಂತರರು
-ಎಂ.ಸಿ.ಮಂಜುನಾಥ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.